ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಗಳಿಸಿ, ಗ್ರಾಮೀಣ ಅಭಿವೃದ್ಧಿಯಲ್ಲಿ ಪಿಎಚ್‌ಡಿ ಗಳಿಸಿದವರು. ಆರಂಭದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಿಸಿದ ಕೊತಾಯ, ವಿವಿಧ ಹುದ್ದೆಗಳಲ್ಲಿ ಇಪ್ಪತ್ತೈದು ಕಾಲ ಸೇವೆ ಸಲ್ಲಿಸಿದರು. ರಾಷ್ಟ್ರಾದ್ಯಂತ ’ರುಡ್‌ಸೆಟ್’ ಎಂದೇ ಇಂದು ಪ್ರಖ್ಯಾತವಾಗಿರುವ ಸಂಸ್ಥೆಗಳ ಸ್ಥಾಪಕ ನಿರ್ದೇಶಕ ಹಾಗೂ ಆಡಳಿತ ನಿರ್ದೇಶಕರಾಗಿ ಸಂಸ್ಥೆಗೆ ಅಸ್ತಿವಾರ ಹಾಕಿದರು. ಬ್ಯಾಂಕಿಂಗ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಕೊತಾಯರು, ಡಾ. ಯು. ಆರ್. ಅನಂತಮೂರ್ತಿಯವರ ಸಲಹೆಯ ಮೇರೆಗೆ ‘ಮಾಹೆ’ಯಲ್ಲಿ ‘ಗ್ರಾಾಮೀಣ ಅಧ್ಯಯನ ಕೇಂದ್ರ’ ಆರಂಭಿಸಿ ಹಲವಾರು ಸಂಶೋಧನೆ, ಮೌಲ್ಯಮಾಪನ, ತರಬೇತಿ, ವಿಸ್ತರಣ ಚಟುವಟಿಕೆಗಳನ್ನು ಅನುಷ್ಠಾಾನಗೊಳಿಸಿದರು. ಮುಂದೆ, ಬೆಂಗಳೂರಿನ ‘ಅಝೀಂ ಪ್ರೇಮ್‌ಜಿ’ ವಿಶ್ವವಿದ್ಯಾಾನಿಲಯದಲ್ಲಿ ’ಅಭಿವೃದ್ಧಿ ತಜ್ಞ’ನಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ಸರ್ಕಾರದ ಅಬ್ದುಲ್ ನಜೀರ್‌ಸಾಬ್ ಗ್ರಾಾಮೀಣ ಅಭಿವೃದ್ಧಿ ಸಂಸ್ಥೆ ‘ಪಂಚಾಯತ್ ರಾಜ್ ರಾಜ್ಯಸಂಪನ್ಮೂಲ ವ್ಯಕ್ತಿ’ ಎಂದು ಗುರುತಿಸಿದೆ. ಕೃಷಿ, ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ರಾಜ್, ಮಹಿಳಾ ಸಬಲೀಕರಣ, ಉದ್ಯಮಶೀಲತೆ, ಸ್ವಸಹಾಯ ಸಂಘಗಳು, ತರಬೇತಿ, ಮೌಲ್ಯಮಾಪನ, ಸಂಶೋಧನೆಯಲ್ಲಿ ಡಾ. ಕೊತಾಯ ಪರಿಣತಿ ಪಡೆದಿದ್ದಾರೆ. ಯುಎನ್‌ಡಿಪಿ ಪ್ರಾಯೋಜಿತ, ‘ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2008’ ಯ ನೋಡಲ್ ಅಧಿಕಾರಿಯಾಗಿ, ಕೊತಾಯರು ಉಡುಪಿ ಜಿಲ್ಲಾ ವರದಿಗೆ ರಾಷ್ಟ್ರಮಟ್ಟದ ಯುಎನ್‌ಡಿಪಿ ಪ್ರಶಸ್ತಿ ಪಡೆಯುವಲ್ಲಿ ಶ್ರಮ ವಹಿಸಿದ್ದರು. ಸ್ಥಳೀಯ,ರಾಜ್ಯ,ರಾಷ್ಟ್ರ ಮಟ್ಟದ ಸಮ್ಮೇಳನ-ಕಾರ್ಯಾಗಾರಗಳಲ್ಲದೇ, ಮೆಕ್ಸಿಕೋ, ಡಬ್ಲಿನ್, ಬ್ಯಾಂಕಾಕ್, ಮನಿಲಾ, ಬಾರ್ಸಿಲೋನಾಗಳ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪ್ರಸಿದ್ಧ ದಿನಪತ್ರಿಕೆ, ನಿಯತಕಾಲಿಕಗಳಲ್ಲಿ ಅಭಿವೃದ್ಧಿ ಸಂಬಂಧಿತ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಅವರ ‘ರೂರಲ್ ಇಂಡಿಯಾ- ಸರ್ಟನ್ ರಿಫ್‌ಲೆಕ್ಷನ್‌ಸ್‌’ ಎಂಬ ಕೃತಿಯನ್ನು ಜರ್ಮನಿಯ ‘ಲ್ಯಾಂಬರ್ಟ್ ಪಬ್ಲಿಂಗ್ ಆಕಾಡೆಮಿ’ ಹೊರತಂದಿದೆ. ಐಎನ್‌ಎಸ್‌ಓ (INSO) ಸಂಘಟನೆ 2021-22 ರ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಕೃಷ್ಣ ಕೊತಾಯರನ್ನು ಆಯ್ಕೆ ಮಾಡಿದೆ. ಪ್ರಸ್ತುತ ಉಡುಪಿಯ ‘ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರ’ದ ಮುಖ್ಯಸ್ಥರಾಗಿ ಹಾಗೂ ’ಪೂರ್ಣಪ್ರಜ್ಞ-ರೋಟರಿ ಮಣಿಪಾಲ ಸಾಮಾಜಿಕ ಸಬಲೀಕರಣ ಕೇಂದ್ರ’ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.