-
Pu Shri Sanskriti Sampada
₹850.00Author: Prabhakar Joshi and Pu Guruprasad Bhat
ಕನ್ನಡನಾಡಿನ ವಿಶಿಷ್ಟ, ಬಹುಶ್ರುತ ವಿದ್ವಾಂಸ ಪು. ಶ್ರೀನಿವಾಸ ಭಟ್ಟ [೧೯೩೯-೨೦೧೧] ಅವರ ಸಂಸ್ಕೃತಿಯ ಕುರಿತ ಲೇಖನಗಳ ಸಂಕಲನವಿದು. ನಿಶ್ಚಿತ ನಿರ್ವಚನಕ್ಕೆ ಸಿಗದ ಅಸಾಮಾನ್ಯ ವಿಸ್ತಾರ, ವೈವಿಧ್ಯ ಮತ್ತು ಅರಿವಿನ ಆಗರವಾಗಿದ್ದ ಪು. ಶ್ರೀ. ಅವರು ಎಲ್ಲ ಅರ್ಥಗಳಲ್ಲಿ ‘ದೇಸಿ’ ಪರಂಪರೆಯ ಘನ ಪಂಡಿತರು. ಇತಿಹಾಸ, ತುಳುಸಂಸ್ಕೃತಿ. ಯಕ್ಷಗಾನ, ಹಳಗನ್ನಡ, ಜಾನಪದ ವಸ್ತು-ಸಂಗತಿ, ನಂಬಿಕೆ-ನಡವಳಿಕೆ, ವ್ಯಕ್ತಿ-ವಿಷಯ- ಇಂಥ ವಿಷಯಗಳಲ್ಲಿ ತಲಸ್ಪರ್ಶಿ ಅನುಭವವಿದ್ದ ಅವರ ವಿಶ್ಲೇಷಣೆ, ನಿರೂಪಣ ಶೈಲಿ ಅನ್ಯತ್ರ ದುರ್ಲಭ ಎಂಬಷ್ಟು ಅನನ್ಯ.
ಅವರ ಬರಹಗಳ ಶಿರೋನಾಮೆಗಳ ಅವುಗಳ ವೈಶಿಷ್ಟ್ಯವನ್ನು ಹೇಳುತ್ತವೆ- ತೊಟ್ಟಿಲುಗಳು, ಮುಳ್ಳುಗಳು, ಕೋಣೆಗಳು, ಬಾವಿಗಳು, ಗುಡ್ಡಗಳು, ಕೊಡೆಗಳು, ತಿಂಡಿಗಳು, ಪ್ರಸಾದ ವೈವಿಧ್ಯ, ಹೂಮಾಲೆ, ತೋಡು-ಗುಂರ್ಪೆ-ಮದಕ, ದಾರಿಗಳು, ಯಕ್ಷಗಾನ ಪ್ರಸಂಗಗಳು, ಪ್ರಸಂಗ ಸಾಹಿತ್ಯ ಸಮೀಕ್ಷೆ, ಸತ್ಯಪರೀಕ್ಷೆಯ ವಿಧಾನಗಳು, ನಿಷೇಧ ಮತ್ತು ಪರಿಹಾರ, ಬೇಸಾಯದ ನುಡಿತಗಳು, ಕ್ಷೇತ್ರ ವೃತ್ತಾಂತಗಳು, ಜಾತ್ರೆಗಳು, ಆಳುಪ ವಂಶ, ದಕ್ಷಿಣಕನ್ನಡದಲ್ಲಿ ವೀರ ಶೈವ ಧರ್ಮ, ಶಿಲಾಶಾಸನ ವಿವರ- ಇತ್ಯಾದಿ.ಪಾರಂಪರಿಕ ನೋಟ ಮತ್ತು ಆಧುನಿಕ ಸಂಶೋಧಕನ ದೃಷ್ಟಿಗಳ ಸಮನ್ವಯ, ತುಂಬ ಸರಳ-ಸುಲಭ ರೀತಿಯ ನಿರೂಪಣೆ, ತಪಸ್ಸಿನಂಥ ದೀರ್ಘಕಾಲದ ಅಧ್ಯಯನ, ಸೂಕ್ಷ್ಮ ಪರಿಶೀಲನ, ನೈಜ ಸಂಸ್ಕೃತಿ ಪ್ರೇಮದ ಒಳನೋಟಗಳು- ಇವೆಲ್ಲವನ್ನು ಗಮನಿಸಿದರೆ ಇವು ಕನ್ನಡ ಸಾರಸತ್ವ ಲೋಕಕ್ಕೆ ವಿಶೇಷವಾದ ಕೊಡುಗೆಯೆ ಸರಿ.ಪದಪದವಿಗಳ ಯೋಚನೆ ಇಲ್ಲದೆ, ಸ್ವಂತ ಆಸಕ್ತಿಯಿಂದ ಗ್ರಂಥ ಸಂಗ್ರಹ ಮಾಡಿ, ಕೇತ್ರಕಾರ್ಯದಲ್ಲಿಯೂ ತೊಡಗಿಕೊಂಡು ಸುಮಾರು ಆರು ದಶಕಗಳ ಕಾಲ ‘ಬರಿಗಾಲ ಸಂಶೋಧಕ’ನಾಗಿ [ಬ್ಯಾರ್‌ಫೂಟ್ ರಿಸರ್ಚರ್] ಕ್ರಿಯಾಶೀಲರಾಗಿದ್ದವರು. ಅಧ್ಯಾಪಕ ವೃತ್ತಿಯಿಂದ ಬಂದ ವೇತನದ ದೊಡ್ಡ ಭಾಗವನ್ನು ಅಧ್ಯಯನ ಸಂಪನ್ಮೂಲಗಳ ಸಂಗ್ರಹಕ್ಕೆ ವ್ಯಯಿಸಿದವರು. ಒಬ್ಬ ಶಾಲಾಮಾಸ್ತರನಾಗಿ ಸಂಶೋಧನೆಯ ದೃಷ್ಟಿಯಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮಟ್ಟದÀ ಸಾಧನೆ ಮಾಡಿದವರು. ಅನೇಕ ಸಂಶೋಧಕರಿಗೆ ಜಿಜ್ಞಾಸುಗಳಿಗೆ ಮಾರ್ಗದರ್ಶನ ಗ್ರಂಥ ಸಹಾಯ ಮಾಡಿದರು ಅವರ ಅಪ್ರಕಟಿತ ಬರಹಗಳ ಸಂಪುಟವು ಅಧ್ಯಯನ ಆಸಕ್ತರಿಗೆ ಒಂದು ಅಮುಲ್ಯ ಆಕಾರ ಗ್ರಂಥವೆನಿಸಲಿದೆ. -
Bharatiya Bijaganita
₹895.00ಪ್ರಾಚೀನ ಭಾರತೀಯ-ಬೀಜಗಣಿತದಲ್ಲಿ ಅನಿರ್ಣೀತ ಸಮೀಕರಣಗಳ ಕುರಿತ ವಿಶ್ಲೇಷಣೆಯು (Indeterminate-analysis) ವಿಶೇಷ ಗಮನಾರ್ಹವಾದ ಸಂಗತಿಯಾಗಿದೆ. ಏಕಘಾತೀಯ ಅನಿರ್ಣೀತ ಸಮೀಕರಣಗಳ ಪರಿಹಾರಕ್ಕೆ ಸಂಬAಧಿಸಿದ ವಿಷಯದ ವಿಶ್ಲೇಷಣೆಯನ್ನು ಭಾರತೀಯ-ಬೀಜಗಣಿತಜ್ಞರು ‘ಕುಟ್ಟಕ’ ಎಂಬ ಪಾರಿಭಾಷಿಕ ಪದದಿಂದ ಸೂಚಿಸಿದರೆ, ಅನಿರ್ಣೀತ ವರ್ಗಸಮೀಕರಣಗಳ ವಿಶ್ಲೇಷಣೆಯನ್ನು ‘ವರ್ಗಪ್ರಕೃತಿ’ ಎಂದು ಕರೆದಿದ್ದಾರೆ. ಎರಡೂ ವಿಷಯಗಳನ್ನು ವಿಶದವಾಗಿ ಚರ್ಚಿಸಿದೆ. ಚಿಹ್ನೆಗಳ-ಬಳಕೆ, ಅವ್ಯಕ್ತಗಳನ್ನು ಸೂಚಿಸುವುದಕ್ಕಾಗಿ ಬಳಸುವ ಅಕ್ಷರಸಂಕೇತಗಳು, ಸಮೀಕರಣಗಳು ಬೀಜಗಣಿತಶಾಸ್ತçದ ಮೂಲಾಧಾರಗಳಾಗಿವೆ. ಅವ್ಯಕ್ತಗಳನ್ನು ಸೂಚಿಸುವುದಕ್ಕಾಗಿ ಶಿಸ್ತುಬದ್ಧವಾಗಿ ಅಕ್ಷರಸಂಕೇತಗಳನ್ನು ಪ್ರಪ್ರಥಮವಾಗಿ ಬಳಸಿದವರು ಭಾರತೀಯರು. ವಿವಿಧ ಬಗೆಯ ಸಮೀಕರಣಗಳನ್ನು ವಿಭಿನ್ನ-ವರ್ಗಗಳಲ್ಲಿ ವಿಂಗಡಿಸಿ, ಅವುಗಳ ವಿಸ್ತöÈತ ಅಧ್ಯಯನವನ್ನು ಪ್ರಪ್ರಥಮವಾಗಿ ಕೈಗೊಂಡವರೂ ಅವರೇ ಆಗಿದ್ದಾರೆ. ಹಾಗಾಗಿ, ಬೀಜಗಣಿತವನ್ನು ಶಾಸ್ತçದ-ಸ್ವರೂಪದಲ್ಲಿ ಹುಟ್ಟುಹಾಕಿ ಮುನ್ನಡಿಸಿದವರೂ ಅವರೇ ಎಂದು ಹೇಳಬಹುದಾಗಿದೆ. ಪ್ರಸ್ತುತ ಕೃತಿಯು ಬೀಜಗಣಿತದ ಸಮೀಕರಣಗಳನ್ನು ಬಿಡಿಸುವುದಕ್ಕೆ ಅವಶ್ಯವಾಗಿರುವ ಪ್ರಕ್ರಿಯೆಗಳನ್ನು ಅಥವಾ ಪರಿಕರ್ಮಗಳನ್ನು ಅರ್ಥಾತ್ “ಬೀಜೋಪಯೋಗಿ-ಗಣಿತ”ವನ್ನು ಮತ್ತು ಬೀಜಗಣಿತೀಯ ಸಮೀಕರಣಗಳ ವಿಶ್ಲೇಷಣೆಯ ಕುರಿತು ಚರ್ಚೆ “ಬೀಜ” ಎರಡನ್ನೂ ಒಳಗೊಂಡಿದೆ. ಪ್ರಾಚೀನ ಆಚಾರ್ಯರು ನಿರೂಪಿಸಿರುವ ನಿಯಮಗಳಿಗೆ ಉಪಪತ್ತಿಯನ್ನು ಒದಗಿಸಿರುವುದು, ಮತ್ತು ಸ್ಪಷ್ಟೀಕರಣಕ್ಕಾಗಿ ಕೊಟ್ಟಿರುವ ಉದಾಹರಣೆ ಲೆಕ್ಕವನ್ನು ಆಯಾ ಗ್ರಂಥಕರ್ತನು ತಿಳಿಸಿರುವ ವಿಧಾನದನ್ವಯವೇ ಆಧುನಿಕ ಗಣಿತೀಯ-ಸಂಕೇತಗಳನ್ನು ಹಾಗೂ ಚಿಹ್ನೆಗಳನ್ನು ಬಳಸಿ ಪೂರ್ತಿಯಾಗಿ ಬಿಡಿಸಿ ತೋರಿಸಿರುವುದು ಈ ಕೃತಿಯ ವಿಶೇಷ ಮಹತ್ವದ ಸಂಗತಿಯಾಗಿವೆ. ಅಲ್ಲಲ್ಲಿ,
-
Bhāratīya Trikoṇamiti Śāstra
₹550.00Author: Venugopal D Heroor
Indian Trigonometry was developed as a powerful mathematical tool for Siddhantic Astronomy. The book, Bharatiya Trikonamiti sastra (Hindu Trigonometry) deals with all the relevant topics of Indian trigonometry, including trigonometrical identities and other formulas, trigonometrical tables, methods of interpolation and trigonometrical series, etc. The subject matter is discussed in eleven chapters divided into 80 sections and 50 sub-sections, involving translations of 250 verses spread over in 38 classical Sanskrit works and based on 42 research articles published in 16 research journals. By including material of the late Aryabhata School or Kerala Aryabhata School, the author has made the book comprehensive and up-to-date. Indeed, the book is fascinating and significant. It is a definite contribution in the study of the history of Indian mathematics. The book is the English version of the Kannada book of the same title.
Interested readers may write to us at mup@manipal.edu about purchasing the book.



