ಶಶಿರಾಜ್ ಕಾವೂರು ವೃತ್ತಿಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯವಾದಿ. ಪ್ರವೃತ್ತಿಯಲ್ಲಿ
ನಟ, ನಿರ್ದೇಶಕ, ಸಾಹಿತಿ, ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನಾಟಕ, ಮಕ್ಕಳ ನಾಟಕ,
ಕಾದಂಬರಿ, ಕವನ ಸಂಕಲನಗಳನ್ನು ಬರೆದಿದ್ದಾರೆ. ಇವರು ರಚಿಸಿದ ‘ಏಕಾದಶಾನ’ ನಾಟಕವು ಜೀವನರಾಮ್ ಸುಳ್ಯ ನಿರ್ದೇಶನದಲ್ಲಿ ಎರಡು ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿ, ‘ಬರ್ಬರೀಕ’ ನಾಟಕಕ್ಕೆ, ಗದಗದ ಫ.ಶಿ.ಭಾಂಡಗೆ ಪ್ರಶಸ್ತಿ, ಧಾರವಾಡದ ದ.ರಾ.ಬೇಂದ್ರೆ ಪ್ರಶಸ್ತಿ, ‘ವೈದ್ಯೋ ನಾರಾಯಣೋ ಹರಿ’ ಈ ನಾಟಕಕ್ಕೆ ಉಡುಪಿಯ ರಂಗಭೂಮಿಯವರು ಆಯೋಜಿಸಿದ ರಾಷ್ಟ್ರೀಯ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ‘ಪೊಸ ಒಸರ್’ ತುಳು ಕವನ ಸಂಕಲನ, ೨೦೦೭ರ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ‘ಬರ್ಬರೀಕ’ (ತುಳು ನಾಟಕ) ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೧೬ ನೆ ಸಾಲಿನ ಪುಸ್ತಕ ಬಹುಮಾನ ಪಡೆದಿರುತ್ತದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ತುಳು, ಕನ್ನಡ ಸಿನೆಮಾಗಳಿಗೆ ಹಾಡು, ಸಂಭಾಷಣೆ, ಚಿತ್ರಕತೆ ಬರೆದಿದ್ದಾರೆ. ಅದರಲ್ಲಿ ಕಾಂತಾರದ ವರಾಹರೂಪಂ ಹಾಡು ಸೇರಿದಂತೆ ಮೂರು ಹಾಡುಗಳು ಪ್ರಸಿದ್ಧಿಗೊಂಡಿವೆ.