Phedra
₹180.00
Translator: Madhava Chippalli
ರಾಸೀನ್ನ ಫೀದ್ರಾ ನಾಟಕವು ಪಾಶ್ಚಿಮಾತ್ಯ ನಾಟಕ ಸಾಹಿತ್ಯದಲ್ಲೇ ಒಂದು ಆಯಕಟ್ಟಿನ ಕೃತಿ. ಗ್ರೀಕ್ ಮತ್ತು ಎಲಿಜಬೆಥನ್ ನಾಟಕಗಳಲ್ಲಿ ಕಾಣಸಿಗದ ಹೊಸ ಬಗೆಯ ಮನೋಲೋಕವೊಂದನ್ನು ತನ್ನ ಪಾತ್ರಗಳಿಗೆ ಧಾರಣೆ ಮಾಡಿಸಿದ ಈ ನಾಟಕವು ಆ ಮೂಲಕವೇ ಈ ಪರಂಪರೆಯಲ್ಲಿ ಮನೋವಿಜ್ಞಾನಕ್ಕೆ ಒಂದು ಖಾಯಂ ಸ್ಥಾನವನ್ನು ಒದಗಿಸಿಕೊಟ್ಟಿತು. ಮುಂದೆ ಬಹುತೇಕ ಪಾಶ್ಚಿಮಾತ್ಯ ನಾಟಕಗಳು ಈ ಪರಂಪರೆಯನ್ನು ಮುಂದುವರಿಸಿದವು; ರಂಗಭೂಮಿಯಲ್ಲೂ ಮನೋಲೋಕವನ್ನು ಮುಂದಕ್ಕೆ ತರುವ ವಿಭಿನ್ನ ಪ್ರಯೋಗಗಳಿಗೆ ಈ ಪರಂಪರೆಯು ಚಾಲ್ತಿ ನೀಡಿತು. ಈ ಸಂಪ್ರದಾಯಕ್ಕೆ ವಿರೋಧಿಯಾದ ಫ್ರಾನ್ಸಿನ ಪ್ರಸಿದ್ಧ ರಂಗಕರ್ಮಿ ಆಂತೋನಿನ್ ಆರ್ತೋನ ಮಾತುಗಳನ್ನು ಕೇಳುವುದಾದರೆ, ಪಾಶ್ಚಿಮಾತ್ಯ ರಂಗಭೂಮಿಯಲ್ಲಿ ‘ಸೈಕಾಲಜಿಯ ದುರ್ಬೀಜ’ ಬಿತ್ತಿದ ಕೃತಿ ಇದು! ಹಾಗಿರುವುದರಿಂದ, ನಾವು ಈ ನಾಟಕವನ್ನು ಹೇಗೇ ಓದಲಿ, ಓದದೆ ಇದ್ದರೆ ಅಷ್ಟರ ಮಟ್ಟಿಗೆ ಪಾಶ್ಚಾತ್ಯ ನಾಟಕ ಸಂಪ್ರದಾಯದ ಅರಿವು ಅಪೂರ್ಣ. ಅಂಥ ಪ್ರಮುಖ ನಾಟಕವೊಂದು ಇನ್ನೂ ಕನ್ನಡಕ್ಕೆ ಬಾರದೆ ಉಳಿದಿತ್ತು; ಆ ಲೋಪವನ್ನು ಈ ಅನುವಾದವು ಸಮರ್ಥವಾಗಿಯೇ ತುಂಬಿಸಿದೆ. ಮೂಲದ ನಿಷ್ಠೆಯೊಂದಿಗೆ ಭಾಷಾಗಾಂಭೀರ್ಯ ಮತ್ತು ಮಾತಿನ ಸುಭಗತೆ ಎರಡನ್ನೂ ಒಟ್ಟಿಗೇ ಹಿಡಿಯಲು ಯತ್ನಿಸಿರುವ ಈ ಅನುವಾದವನ್ನು ನಾನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ.
Interested readers may write to us at mup@manipal.edu about purchasing the book.
| Categories: | Kannada, Plays and Theatre, Texts in Translation |
|---|
| Format | |
|---|---|
| Author |
Related products
-
Kempu Kanagile and Chitra
₹160.00Author: Rabindranath Tagore, Translator: Sudha Adukkala
ಕೆಂಪು ಕಣಗಿಲೆ: ಅದೆಂಥ ಗಾಢಾಂಧಕಾರವೇ ಇರಲಿ, ಪುಟ್ಟ ಹಣತೆಯೊಂದು ಅದನ್ನು ತೊಡೆಯಬಲ್ಲುದೆಂಬುದು ಸಾರ್ವಕಾಲಿಕ ಸತ್ಯ. ಅಂಥದೊAದು ಸಂಘರ್ಷದ ಕಥನವನ್ನು ಗುರುದೇವ ರವೀಂದ್ರರು ತಮ್ಮ ಈ ನಾಟಕದಲ್ಲಿ ಹೇಳಿದ್ದಾರೆ. ‘ಕೆಂಪು ಕಣಗಿಲೆ’ ತೆರೆದಿಡುವ ಕೌರ್ಯದ ಜಗತ್ತು ಇಂದು ಈ ಕಾಲಘಟ್ಟದಲ್ಲಿ ನಿಂತು ಬರೆದರೇನೋ ಎಂಬಷ್ಟು ತಾಜಾ ಆಗಿದೆ. ಇಲ್ಲಿಯ ರಂಜನ ಕೇವಲ ಒಂದು ಪಾತ್ರವಲ್ಲ; ನಾವೆಲ್ಲರೂ ನಮ್ಮೊಳಗೆ ತುಂಬಿಸಿಕೊಳ್ಳಬೇಕಾದ ಜೀವನ ಪ್ರೀತಿಯ ವಿವಿಧ ಆಯಾಮಗಳ ಪ್ರತಿನಿಧಿ. ಇಲ್ಲಿಯ ನಂದಿನಿ ಇಂದು ಜಗವ ಸಂತೈಸಬೇಕಾದ ತಾಯಿಹೃದಯದ ಪ್ರತೀಕವಾಗಿದ್ದಾಳೆ.
ಚಿತ್ರಾ: ಪೌರಾಣಿಕ ಕಥಾನಕವೊಂದರ ಪುನರ್ಲೇಖನದ ಈ ನಾಟಕವು ಹೆಣ್ಣು ಮತ್ತು ರಾಷ್ಟçವನ್ನು ಒಂದು ಸಂಕಥನವನ್ನಾಗಿ ಚರ್ಚಿಸುತ್ತದೆ. ಹೆಣ್ಣು-ಗಂಡಿನ ಘನತೆಯ ಬದುಕನ್ನು ಕನಸುವ ನಿರೂಪಣೆ ನಾವು ಕಟ್ಟಬೇಕಾಗಿರುವ ರಾಷ್ಟçದ ರೂಪುರೇಷೆಗಳನ್ನೂ ತನ್ನೊಳಗೆ ಆಡಕ ಮಾಡಿಕೊಂಡಿದೆ. ನಮ್ಮ ಅನನ್ಯತೆಯನ್ನು ಉಳಿಸಿಕೊಳ್ಳುತ್ತಲೇ ಇನ್ನೊಬ್ಬರೊಂದಿಗೆ ಸಹಬಾಳ್ವೆಯನ್ನು ನಡೆಸುವ ಬಗೆಯನ್ನು ಮಂಡಿಸುತ್ತದೆ. ತಾನು ಆರೋಪಿಸಿಕೊಂಡ ಕೃತಕ ತೆರೆಯನ್ನು ಸರಿಸುವ ಚಿತ್ರಾ ನಮ್ಮೊಳಗಿನ ಅರಿವಿಗೆ ತೊಡಕಾಗಿರುವ ಸಂಕುಚಿತತೆಯ ಪರದೆಯನ್ನೂ ಸರಿಸುತ್ತಾಳೆ.
Interested overseas readers may write to us at mup@manipal.edu about purchasing the book. -
Wodeyara Kaalada Mysurina Adalitha matthu Saamajika Ithihasa
₹600.00Author: Pavamana R D, D S Achuta Rao
ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳೆಂದು ಹೆಸರಾಗಿರುವ ಮೈಸೂರಿನ ಒಡೆಯರು ಕರ್ನಾಟಕದ ಇತಿಹಾಸಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕಲಾರಂಗಗಳಲ್ಲೂ ಮೈಸೂರು ಅರಸರು ವಿಜಯನಗರದ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿದರು. ರಾಜಒಡೆಯರ್, ರಣಧೀರ ಕಂಠೀರವ, ಚಿಕ್ಕದೇವರಾಜ ಒಡೆಯರ್ ಅವರ ಆಳ್ವಿಕೆಯ ಕಾಲಘಟ್ಟದಲ್ಲಿ ಮೈಸೂರು ಸರ್ವಾಂಗೀಣ ಪ್ರಗತಿ ಸಾಧಿಸಿತು. ಈ ವಂಶದ ಮೊದಲ ಪ್ರಮುಖ ಅರಸು ರಾಜ ಒಡೆಯರ್ರಿಂದ ಆರಂಭಿಸಿ ಮೈಸೂರು ಆಂಗ್ಲರ ಅಧೀನವಾಗುವವರೆಗಿನ ಆಡಳಿತ ಹಾಗೂ ಸಾಮಾಜಿಕ ಇತಿಹಾಸ ಇಲ್ಲಿದೆ. ಮೈಸೂರು ಸಂಸ್ಥಾನದ ಎರಡು ಮಹತ್ವಪೂರ್ಣ ಶತಮಾನಗಳ ಕಾಲದ ಆಡಳಿತ, ಕಂದಾಯ ನೀತಿಗಳು, ನ್ಯಾಯಾಡಳಿತ, ಸೈನ್ಯ ವ್ಯವಸ್ಥೆ, ಪ್ರಾಂತೀಯ ಹಾಗೂ ಸ್ಥಳೀಯ ಆಡಳಿತ, ಸಾಮಾಜಿಕ ಜೀವನ ಹಾಗೂ ಧರ್ಮ, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಮತ್ತು ಆಸ್ಥಾನ ಸಂಸ್ಕೃತಿ ಹೀಗೆ ಬಹುಮುಖೀ ನೆಲೆಗಳ ವಿಸ್ತಾರವಾದ, ಅಧ್ಯಯನಪೂರ್ಣ ಸಂಶೋಧನಾ ವರದಿಯಾಗಿ ಇದು ಸ್ವಾತಂತ್ರೋತ್ತರ ತಲೆಮಾರಿನ ವಿದ್ವಾಂಸರ ಸಂಶೋಧನಾ ವೈಖರಿಗೆ ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು. ಕರ್ನಾಟಕದ ಅದರಲ್ಲೂ ಮೈಸೂರಿನ ಒಡೆಯರ ಇತಿಹಾಸದ ಬಗೆಗೆ ಸಂಶೋಧನೆಗಳು ಇನ್ನೂ ಕಣ್ತೆರೆಯುತ್ತಿದ್ದ ಕಾಲದಲ್ಲಿ ಡಿ. ಎಸ್. ಅಚ್ಯುತರಾಯರ ಈ ಸಂಶೋಧನ ಕಾರ್ಯ ಮಹತ್ವಪೂರ್ಣವಾದುದು. ಅಂದಿಗೆ ಲಭ್ಯವಿದ್ದ ಎಲ್ಲಾ ಬಗೆಯ ಮೂಲ ಹಾಗೂ ಆನುಷಂಗೀಕ ಆಕರಗಳನ್ನು ಬಳಸಿಕೊಂಡು, ಸಂಶೋಧನೆಯ ಎಲ್ಲಾ ಚೌಕಟ್ಟಿನೊಳಗೆ ವಸ್ತುನಿಷ್ಠವಾಗಿ ರೂಫುಗೊಂಡಿದೆ ಈ ಕೃತಿ. ಸಾಮಾಜಿಕ ಇತಿಹಾಸವನ್ನು ಪುನರ್ ರೂಪಿಸುವಾಗಲಂತೂ ಸಮಕಾಲೀನ ಸಾಹಿತ್ಯದ ಎಲ್ಲಾ ರೂಪಗಳನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಅಗತ್ಯ ವಿರುವೆಡೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿನ ಉಲ್ಲೇಖಗಳು, ಟಿಪ್ಪಣಿಗಳೂ, ವಿವರಣೆಗಳೂ ಈ ಸಂಶೋಧನೆಯ ಮೌಲ್ಯವನ್ನು ಹೆಚ್ಚಿಸಿವೆ. ಸಂಶೋಧನೆಗೆ ಪೂರಕವಾಗಿ ಗ್ರಂಥಋಣ, ನಕ್ಷೆಗಳು, ಸಂಕ್ಷೇಪಾಕ್ಷರಗಳು ಹಾಗೂ ಒಡೆಯರ ವಂಶಾವಳಿ ನೀಡಲಾಗಿದೆ. ಆಧಾರಗಳ ಮೇಲಿನ ಟಿಪ್ಪಣಿಯು ಸಂಶೋಧಕರಿಗೆ ತಮ್ಮ ಕಾರ್ಯಕ್ಷೇತ್ರದ ಮೇಲಿನ ಒಡೆತನದ ದ್ಯೋತಕ. ಅಪಾರ ಸಂಖ್ಯೆಯ ಹಸ್ತಪ್ರತಿಗಳ ಮತ್ತು ಶಾಸನಗಳ ಬಳಕೆ ಈ ಕೃತಿಯ ಹೆಗ್ಗಳಿಕೆ.
Interested readers may write to us at mup@manipal.edu about purchasing the book.
-
U-Turn
₹180.00Author: Anand Mhasvekar, Translator: Neeta Inamdar
ಮರಾಠಿ ನಾಟಕ. ಯು-ಟರ್ನ್ ಮಹಾರಾಷ್ಟ್ರ ಮತ್ತು ಅದರಾಚೆಗೆ 585 ಕ್ಕೂ ಹೆಚ್ಚು ಪ್ರದರ್ಶನಗಳೊಂದಿಗೆ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ. ಗುಜರಾತಿಯಲ್ಲಿ ಇದರ ಅನುವಾದವು 115 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ ಮತ್ತು ಹಿಂದಿಯಲ್ಲಿ 50 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಈ ಯಶಸ್ಸು ಶ್ರೀಮತಿ ಸವಿತಾ ಶಾಸ್ತ್ರಿಯವರ ಬೆಂಬಲದೊಂದಿಗೆ ಕನ್ನಡದಲ್ಲಿ ಈ ಕೃತಿಯನ್ನು ಅನುವಾದಿಸಲು ಪ್ರೊ.ನೀತಾ ಇನಾಮದಾರ್ ಅವರನ್ನು ಪ್ರೋತ್ಸಾಹಿಸಿತು. ನಾಟಕವು ಉದ್ದಕ್ಕೂ ಕೇವಲ ಎರಡು ಪಾತ್ರಗಳನ್ನು ಹೊಂದಿದೆ ಮತ್ತು ಇಡೀ ಅವಧಿಗೆ ವೇದಿಕೆಯ ಮೇಲಿರುವ ಇಬ್ಬರನ್ನು ಹೊರತುಪಡಿಸಿ ಒಂದೆರಡು ಧ್ವನಿಗಳನ್ನು ಹೊಂದಿದೆ. ನಾಟಕದ ಕೇಂದ್ರ ಕಲ್ಪನೆಯು ಆಧುನಿಕತೆಯನ್ನು ಒಪ್ಪಿಕೊಳ್ಳುವಲ್ಲಿನ ವ್ಯತ್ಯಾಸಗಳು ಮತ್ತು ಎರಡು ವಿಭಿನ್ನ ತಲೆಮಾರುಗಳಲ್ಲಿ ಇದಕ್ಕೆ ಸಂಬಂಧಿಸಿದ ಸಂಘರ್ಷಗಳು. ವಿಚ್ಛೇದಿತ ಸೇನೆಯ ಮೇಜರ್ ಮತ್ತು 50 ರ ದಶಕದ ಅಂತ್ಯದಲ್ಲಿರುವ ವಿಧವೆಯ ನಡುವಿನ ಒಡನಾಟವನ್ನು ಅವರ ಮಕ್ಕಳು ವಿರೋಧಿಸುತ್ತಾರೆ ಮತ್ತು ಅವರು ತಮ್ಮನ್ನು ತಾವು ಆಧುನಿಕತೆಯನ್ನು ಅಳವಡಿಸಿಕೊಂಡರೂ ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ನೀತಾ ಇನಾಮದಾರ್ ಅವರು ಮಣಿಪಾಲ್ ವಿಶ್ವವಿದ್ಯಾನಿಲಯದಲ್ಲಿ (MU) ಯುರೋಪಿಯನ್ ಅಧ್ಯಯನ ವಿಭಾಗದ (DES) ಮುಖ್ಯಸ್ಥರಾಗಿದ್ದಾರೆ ಮತ್ತು ಮಣಿಪಾಲ್ ಯೂನಿವರ್ಸಲ್ ಪ್ರೆಸ್ ನ (MUP) ಮುಖ್ಯ ಸಂಪಾದಕರಾಗಿದ್ದಾರೆ. ಸಂಗೀತ ಮತ್ತು ರಂಗಭೂಮಿ ಅವರ ಆಸಕ್ತಿಗಳಾಗಿದ್ದು, ಶ್ರೀಮತಿ ಸವಿತಾ ಶಾಸ್ತ್ರಿ ಅವರ ನೆರವಿನೊಂದಿಗೆ ಈ ಕೆಲಸವನ್ನು ಕೈಗೊಳ್ಳುವಂತೆ ಮಾಡಿತು. ಸವಿತಾ ಶಾಸ್ತ್ರಿ ಅವರು ಮಣಿಪಾಲದ ಮಹಿಳಾ ಉದ್ಯಮಿಯಾಗಿದ್ದು, ಅವರು ಬಾಬಾ ಆಮ್ಟೆ ಅವರ ಆನಂದವನಕ್ಕೆ ಧನಸಹಾಯವನ್ನೂ ಮಾಡುತ್ತಾರೆ. ಅವರು ಮರಾಠಿ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪುಸ್ತಕಗಳು ಮತ್ತು ನಾಟಕಗಳ ಓದುಗರಾಗಿದ್ದಾರೆ, ಅವರು ಈ ಅನುವಾದ ಯೋಜನೆಗೆ ತಮ್ಮ ಬೆಂಬಲವನ್ನು ನೀಡಿದರು.
Interested readers may write to us at mup@manipal.edu about purchasing the book.
-
BAKA – Collection of Two Plays
₹340.00Author: M S Keshava Prabhu, Translator: L V Shantakumari
Baka dramatizes the episode of Bakasura, from the Indian epic, Mahabharata. Baka is a cannibal demon that terrorizes a village with its horrifying attacks. The king of the village strikes an agreement with the demon, putting its people in peril. They live in constant fear for years until the sudden arrival of a hero changes everything.
A theatrical and evocative narration, this play satirically mirrors society’s greed and irresponsibility. It depicts power struggles through the conflict that arises between Baka the demon, the cowardly king, and the oppressed people.Interested customers may write to us at mup@manipal.edu about purchasing the book. -
Geeta Niti Katha
₹850.00Author: Shivaji Bhave, Translator: Vishambharnath Agarwal
यह पुस्तक भगवद् गीता के प्रत्येक श्लोक पर आधारित लघुकथाओं का संकलन है। ये कथाएँ श्री शिवाजी भावे (आचार्य विनोबा भावे के छोटे भाई) ने 1950 के दशक में मराठी में लिखी। इन कथाओं की परम्परा पंचतंत्र और Aesop’s Fables से शुरू होती है।
कथाएँ बहुत ही रोचक और सरल हैं एवं गीता के गहन विषय को सुगमता से समझने में सहायक भी। जीवन के मूल्यों को बहुत ही सरल भाषा में समझाती है जिससे बच्चे बूढ़े और युवा सभी कुछ न कुछ ग्रहण कर सकते हैं।
Interested customers may write to us at mup@manipal.edu about purchasing the book.
-
Mahila Mahabharatha
₹160.00Author: K Madhavan Translator: Abhilasha S
ಮಹಿಳಾ ಮಹಾಭಾರತ, ಇದು ಜೆಎನ್ಯು ದೆಹಲಿಯ ವಿಶ್ರಾಂತ ಪ್ರಾಧ್ಯಾಪಕರಾದ ಕೆ. ಮಾಧವನ್ ರಚಿಸಿದ ನಾಟಕ. ರಂಗ ನಿರ್ದೇಶಕರೂ ಆಗಿರುವ ಮಾಧವನ್ರನ್ನು ೧೯೯೪ರಲ್ಲಿ ಯೂನಿವರ್ಸಿಟಿ ದು ಕ್ವಿಬೀ ಎ ಮಾನ್ಟ್ರಿಯಲ್ ವಿಶ್ವವಿದ್ಯಾನಿಲಯ ತನ್ನ ವಿದ್ಯಾರ್ಥಿಗಳಿಗೆ ರಂಗ ನಿರ್ದೇಶನದ ತರಬೇತಿ ನೀಡಲು ಆಹ್ವಾನಿಸಿತ್ತು. ಆಗ ಒಂದು ವರ್ಷ ನಡೆಸಿದ ರಂಗ ಕಾರ್ಯಾಗಾರದ ಭಾಗವಾಗಿ ೧೯೯೫ ರಲ್ಲಿ ಮಾಧವನ್ ಈ ನಾಟಕವನ್ನು ಫ್ರೆಂಚ್ ಭಾಷೆಯಲ್ಲಿ ರಚಿಸಿ ನಿರ್ದೇಶಿಸಿದ್ದರು. ನಂತರ ಇದು ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಆಯಾ ಪ್ರದೇಶದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟಿತು. ಹಾಗೆಯೇ ಭಾರತದಲ್ಲಿಯೂ ಅನೇಕ ನಗರಗಳಲ್ಲಿ ಈ ನಾಟಕ ಪ್ರದರ್ಶನ ಕಂಡಿದೆ. ೨೦೦೫ರಲ್ಲಿ ಈ ನಾಟಕದ ಇಂಗ್ಲಿಷ್ ಅವತರಣಿಕೆಯು ಥಿಯೇಟರ್ ಇಂಡಿಯಾದಿAದ ಪ್ರಕಟವಾಯಿತು. <br> ಎಲ್ಲ ಕಾಲದ ಮಹಿಳಾ ಜಗತ್ತಿನ ಆಂತರ್ಯದಲ್ಲಿ ನಡೆಯಬಹುದಾದ ಮಹಾಯುದ್ಧದ ಕಥನವೇ ಮಹಿಳಾ ಮಹಾಭಾರತ. ಇಲ್ಲಿ ಪುರಾಣ ಮತ್ತು ವಾಸ್ತವ ಜಗತ್ತಿನ ನಡುವಿನ ಗೆರೆಯೇ ಅಳಿಸಿ, ಪೌರಾಣಿಕತೆ ಮತ್ತು ವಾಸ್ತವಿಕತೆ ಮುಖಾಮುಖಿಯಾಗುತ್ತವೆ. ಮಹಾಭಾರತ ಕಥೆಯ ಪರಿಧಿಯಲ್ಲಿದ್ದಿರಬಹುದಾದ ಎಲ್ಲ ತಾಯಂದಿರೂ ಈ ನಾಟಕದಲ್ಲಿ ಕೇಂದ್ರದತ್ತ ಚಲಿಸಿ ಕತೆ ಹೇಳುತ್ತಾರಾದ್ದರಿಂದ, ಮಹಿಳಾ ಕಣ್ನೋಟದ ಮಹಾಭಾರತ ಇಲ್ಲಿ ಗೋಚರವಾಗುತ್ತದೆ. ವಿಶೇಷವೆಂದರೆ, ಈ ಇಡೀ ಕಥನದ ಸೂತ್ರಧಾರಿಣಿ, ಸಮಕಾಲೀನ ಜಗತ್ತಿನ ಅಸಹಾಯಕ, ಹತಾಶ ತಾಯಿ. ಇಲ್ಲಿ ಪುಟ್ಟ ಪೆಟ್ಟಿಗೆಯಲ್ಲಿ ಜೀವಶಕ್ತಿಯ ಬೀಜ ನೆಟ್ಟು ಅದು ಮೊಳಕೆಯೊಡೆದು ಬೃಹತ್ ವೃಕ್ಷವಾಗಿ ಅಡುಗೆ ಮನೆಯನ್ನೇ ಸ್ಪೋಟಿಸುವ ಹೆಣ್ಣುಗಳಿದ್ದಾರೆ, ಮರಕ್ಕೆ ಕಟ್ಟಿ ಸುಟ್ಟು ಹಾಕುತ್ತಿರುವ ಅಣ್ಣಂದಿರನ್ನೇ ನೋಡಿ ಗಹಗಹಿಸುವ ತಂಗಿಯರಿದ್ದಾರೆ, ಹೆಣ್ಣುಗಳ ನಿಟ್ಟುಸಿರ ತಾಪಕ್ಕೆ ಗುರಿಯಾಗಿ ನಲುಗುತ್ತಿರುವ ಗಂಡುಮಕ್ಕಳ ಸಂಕಟ ಕಂಡು ಮರುಗುತ್ತಿರುವ ತಾಯಂದಿರಿದ್ದಾರೆ. ಆದಿಯಿಂದ ಅಂತ್ಯದವರೆಗೆ ತೂಗುವ ತೊಟ್ಟಿಲು, ಅನುರಣಿಸುವ ಜೋಗುಳದ ಜೊತೆಗೆ ಹೆಮ್ಮಕ್ಕಳು ನೀಡುವ ಶಾಪದ ಸರಮಾಲೆಯೂ ಇಲ್ಲಿದೆ.
Interested readers may write to us at mup@manipal.edu about purchasing the book.
Also available on

-
Humanitarianism and Democracy (Maanava Dharmah – Prajaaprabhutvam Cheti Shatakadvayam)
₹240.00Author: M V Nadkarni
These Satkarnas are Prof Nadkarni’s passionate plea for an authentic democratic order which guarantees the rights of every citizen while each citizen participates in it being fully aware of his / her duties. The complementarity of rights and duties is shown to be the essence of genuine democracy.
Interested customers may write to us at mup@manipal.edu about purchasing the book.
Also available on

-
Gombi Maduvi
₹130.00Author: Revati Nadgir
ಉತ್ತರ ಕರ್ನಾಟಕದ ಸಂಸ್ಕೃತಿಗೆ ಕನ್ನಡಿ ಹಿಡಿಯುವ ಈ ಕೃತಿಯಲ್ಲಿ ಬಡ, ಮುಗ್ಧ ಹುಡುಗಿಯೊಬ್ಬಳ ಕನಸುಗಳು, ಮಾನವೀಯತೆಯನ್ನು ಮೆರೆಯುವ ಹಲವು ಪಾತ್ರಗಳ ನಡುವೆ ವಿಧಿಯ ಕೈವಾಡದಿಂದ ಚದುರಿ ಹೋಗುವ, ಅಂತಃಕರಣವನ್ನು ಕಲಕುವ ಚಿತ್ರಣವಿದೆ. ಸ್ಥಳೀಯ ನಂಬಿಕೆ-ಆಚರಣೆ, ಆಶೋತ್ತರಗಳನ್ನು ದಟ್ಟವಾಗಿ ಹೆಣೆದುಕೊಳ್ಳುತ್ತ ಒಂದು ಪುಟ್ಟ ವಿಶ್ವವನ್ನೇ ಈ ನಾಟಕ ಸೃಷ್ಟಿಸುತ್ತದೆ. ರೇವತಿ ನಾಡಗೀರ ಅವರ ಚೊಚ್ಚಲ ಕೃತಿಯಾದ ಇದರಲ್ಲಿ, ಅವರ ಸಹೃದಯತೆ, ಉತ್ತರ ಕರ್ನಾಟಕದ ಸಂಸ್ಕೃತಿಯ ಅನುಭವ ಎದ್ದು ಕಾಣುತ್ತದೆ.
Interested customers may write to us at mup@manipal.edu about purchasing the book.
Also available on










