Phedra
₹180.00
Translator: Madhava Chippalli
ರಾಸೀನ್ನ ಫೀದ್ರಾ ನಾಟಕವು ಪಾಶ್ಚಿಮಾತ್ಯ ನಾಟಕ ಸಾಹಿತ್ಯದಲ್ಲೇ ಒಂದು ಆಯಕಟ್ಟಿನ ಕೃತಿ. ಗ್ರೀಕ್ ಮತ್ತು ಎಲಿಜಬೆಥನ್ ನಾಟಕಗಳಲ್ಲಿ ಕಾಣಸಿಗದ ಹೊಸ ಬಗೆಯ ಮನೋಲೋಕವೊಂದನ್ನು ತನ್ನ ಪಾತ್ರಗಳಿಗೆ ಧಾರಣೆ ಮಾಡಿಸಿದ ಈ ನಾಟಕವು ಆ ಮೂಲಕವೇ ಈ ಪರಂಪರೆಯಲ್ಲಿ ಮನೋವಿಜ್ಞಾನಕ್ಕೆ ಒಂದು ಖಾಯಂ ಸ್ಥಾನವನ್ನು ಒದಗಿಸಿಕೊಟ್ಟಿತು. ಮುಂದೆ ಬಹುತೇಕ ಪಾಶ್ಚಿಮಾತ್ಯ ನಾಟಕಗಳು ಈ ಪರಂಪರೆಯನ್ನು ಮುಂದುವರಿಸಿದವು; ರಂಗಭೂಮಿಯಲ್ಲೂ ಮನೋಲೋಕವನ್ನು ಮುಂದಕ್ಕೆ ತರುವ ವಿಭಿನ್ನ ಪ್ರಯೋಗಗಳಿಗೆ ಈ ಪರಂಪರೆಯು ಚಾಲ್ತಿ ನೀಡಿತು. ಈ ಸಂಪ್ರದಾಯಕ್ಕೆ ವಿರೋಧಿಯಾದ ಫ್ರಾನ್ಸಿನ ಪ್ರಸಿದ್ಧ ರಂಗಕರ್ಮಿ ಆಂತೋನಿನ್ ಆರ್ತೋನ ಮಾತುಗಳನ್ನು ಕೇಳುವುದಾದರೆ, ಪಾಶ್ಚಿಮಾತ್ಯ ರಂಗಭೂಮಿಯಲ್ಲಿ ‘ಸೈಕಾಲಜಿಯ ದುರ್ಬೀಜ’ ಬಿತ್ತಿದ ಕೃತಿ ಇದು! ಹಾಗಿರುವುದರಿಂದ, ನಾವು ಈ ನಾಟಕವನ್ನು ಹೇಗೇ ಓದಲಿ, ಓದದೆ ಇದ್ದರೆ ಅಷ್ಟರ ಮಟ್ಟಿಗೆ ಪಾಶ್ಚಾತ್ಯ ನಾಟಕ ಸಂಪ್ರದಾಯದ ಅರಿವು ಅಪೂರ್ಣ. ಅಂಥ ಪ್ರಮುಖ ನಾಟಕವೊಂದು ಇನ್ನೂ ಕನ್ನಡಕ್ಕೆ ಬಾರದೆ ಉಳಿದಿತ್ತು; ಆ ಲೋಪವನ್ನು ಈ ಅನುವಾದವು ಸಮರ್ಥವಾಗಿಯೇ ತುಂಬಿಸಿದೆ. ಮೂಲದ ನಿಷ್ಠೆಯೊಂದಿಗೆ ಭಾಷಾಗಾಂಭೀರ್ಯ ಮತ್ತು ಮಾತಿನ ಸುಭಗತೆ ಎರಡನ್ನೂ ಒಟ್ಟಿಗೇ ಹಿಡಿಯಲು ಯತ್ನಿಸಿರುವ ಈ ಅನುವಾದವನ್ನು ನಾನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ.
Interested readers may write to us at mup@manipal.edu about purchasing the book.
| Categories: | Kannada, Plays and Theatre, Texts in Translation |
|---|
| Format | |
|---|---|
| Author |
Related products
-
Gombi Maduvi
₹130.00Author: Revati Nadgir
ಉತ್ತರ ಕರ್ನಾಟಕದ ಸಂಸ್ಕೃತಿಗೆ ಕನ್ನಡಿ ಹಿಡಿಯುವ ಈ ಕೃತಿಯಲ್ಲಿ ಬಡ, ಮುಗ್ಧ ಹುಡುಗಿಯೊಬ್ಬಳ ಕನಸುಗಳು, ಮಾನವೀಯತೆಯನ್ನು ಮೆರೆಯುವ ಹಲವು ಪಾತ್ರಗಳ ನಡುವೆ ವಿಧಿಯ ಕೈವಾಡದಿಂದ ಚದುರಿ ಹೋಗುವ, ಅಂತಃಕರಣವನ್ನು ಕಲಕುವ ಚಿತ್ರಣವಿದೆ. ಸ್ಥಳೀಯ ನಂಬಿಕೆ-ಆಚರಣೆ, ಆಶೋತ್ತರಗಳನ್ನು ದಟ್ಟವಾಗಿ ಹೆಣೆದುಕೊಳ್ಳುತ್ತ ಒಂದು ಪುಟ್ಟ ವಿಶ್ವವನ್ನೇ ಈ ನಾಟಕ ಸೃಷ್ಟಿಸುತ್ತದೆ. ರೇವತಿ ನಾಡಗೀರ ಅವರ ಚೊಚ್ಚಲ ಕೃತಿಯಾದ ಇದರಲ್ಲಿ, ಅವರ ಸಹೃದಯತೆ, ಉತ್ತರ ಕರ್ನಾಟಕದ ಸಂಸ್ಕೃತಿಯ ಅನುಭವ ಎದ್ದು ಕಾಣುತ್ತದೆ.
Interested customers may write to us at mup@manipal.edu about purchasing the book.
Also available on

-
Aparichita
₹170.00Translator: Prakash Nayakತರ್ಕವಾಗಲೀ ವಿಜ್ಞಾನವಾಗಲೀ ಮೂಲತಃ ಯಾವ ಅರ್ಥವನ್ನೂ ಅಡಗಿಸಿಕೊಂಡಿರದ ಈ ಅಸಂಬದ್ಧ ಬದುಕನ್ನು ವಿವರಿಸಲಾರವು. ಆದರೆ, ಅದಕ್ಕಾಗಿ ಅತೀಂದ್ರಿಯ ಶಕ್ತಿಯೊಂದನ್ನು ನಂಬುವುದು `ತಾತ್ವಿಕ ಆತ್ಮಹತ್ಯೆ’. ಇಂತಹ ತಾತ್ವಿಕ ಅಥವಾ ದೈಹಿಕ ಆತ್ಮಹತ್ಯೆಗಳು ಜಗತ್ತಿನ ಅರ್ಥರಾಹಿತ್ಯಕ್ಕೆ ಉತ್ತರಗಳಲ್ಲ. ಅಸಂಬದ್ಧತೆಯನ್ನು ಗುರುತಿಸಿ ಬದುಕುವುದೊಂದೇ ಅದಕ್ಕಿರಬಹುದಾದ ಉತ್ತರ ಎಂದು ವ್ಯಾಖ್ಯಾನಿಸಿದ ಫ್ರೆಂಚ್ ಲೇಖಕ, ತತ್ವಜ್ಞಾನಿ ಮತ್ತು ಪತ್ರಕರ್ತ ಆಲ್ಬರ್ಟ್ ಕಮೂ ಬರೆದಿರುವುದು ಕೆಲವೇ ಕಾದಂಬರಿಗಳು ಮತ್ತು ಕೆಲವು ವ್ಯಾಖ್ಯಾನಗಳು. ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾದ ಅಲ್ಬರ್ಟ್ ಕಮೂನ ಸುಪ್ರಸಿದ್ದ ಕಾದಂಬರಿ “ದ ಸ್ಟ್ರೇಂಜರ್” ಕನ್ನಡವೂ ಸೇರಿದಂತೆ ವಿಶ್ವದ ಹಲವು ಭಾಷೆಗಳಲ್ಲಿ ಅನುವಾದಗೊಂಡು ಹಲವು ಪೀಳಿಗೆಗಳ ಓದುಗರನ್ನು ವಿವಿಧ ರೀತಿಗಳಲ್ಲಿ ಆಕರ್ಷಿಸುತ್ತ ಬಂದಿದೆ. ೧೯೪೨ರಲ್ಲಿ ಮೊದಲು ಪ್ರಕಟವಾದ ಈ ಫ್ರೆಂಚ್ ಕಾದಂಬರಿ ಕಳೆದ ಎಂಟು ದಶಕಗಳಲ್ಲಿ ಪಡೆದುಕೊಂಡಿರುವ ವಿಮರ್ಶಾತ್ಮಕ ಪ್ರತಿಕ್ರಿಯೆ- ಪ್ರತಿಸ್ಪಂದನೆಗಳೂ ವೈವಿಧ್ಯಮಯವಾಗಿವೆ. ಪ್ರತಿವೊಂದು ಪೀಳಿಗೆಯೂ ಈ ಕೃತಿಯನ್ನು ಹೊಸದಾಗಿ ಓದುತ್ತ, ಅನುವಾದಿಸಿಕೊಳ್ಳುತ್ತ, ವಿಮರ್ಶಿಸುತ್ತ, ಇಂಥ ಅನುವಾದಗಳ, ವ್ಯಾಖಾನಗಳ ಒಂದು ಪರಂಪರೆಯೇ ಸೃಷ್ಟಿಯಾಗಿದೆ. ಕನ್ನಡದಲ್ಲಿ ಈ ಮೊದಲೇ, ೧೯೭ ೦ರಲ್ಲಿ, “ಅನ್ಯ” ಎಂಬ ಹೆಸರಿನಲ್ಲಿ ಡಾ. ಡಿ. ಎ. ಶಂಕರ್ ಅವರಿಂದ ಅನುವಾದಗೊಂಡಿದ್ದ ಈ ಕಾದಂಬರಿಯು ಅರ್ಧ ಶತಮಾನದ ನಂತರ ಮತ್ತೆ “ಅಪರಿಚಿತ” ಎಂಬ ಹೆಸರಿನಿಂದ ಶ್ರೀ ಪ್ರಕಾಶ್ ನಾಯಕ್ ಅವರಿಂದ ಹೊಸದಾಗಿ ಅನುವಾದಗೊಂಡು ಈ ಪರಂಪರೆಯನ್ನು ಮುಂದುವರಿಸಿದೆ. ಸ್ವತಃ ಓರ್ವ ಪ್ರತಿಭಾವಂತ ಕತೆಗಾರ-ಕಾದಂಬರಿಕಾರರಾಗಿರುವ ಪ್ರಕಾಶ್ ನಾಯಕ್ ಅವರ ಈ ಸರಳ ಸುಂದರ ಅನುವಾದವು ಕಮೂ ಕೃತಿಯ ಮರು ಓದು-ಹೊಸ ಓದುಗರನ್ನು ಆಹ್ವಾನಿಸುವಂತಿದೆ.Interested customers may write to us at mup@manipal.edu about purchasing the book.
Also available on

-
BAKA – Collection of Two Plays
₹340.00Author: M S Keshava Prabhu, Translator: L V Shantakumari
Baka dramatizes the episode of Bakasura, from the Indian epic, Mahabharata. Baka is a cannibal demon that terrorizes a village with its horrifying attacks. The king of the village strikes an agreement with the demon, putting its people in peril. They live in constant fear for years until the sudden arrival of a hero changes everything.
A theatrical and evocative narration, this play satirically mirrors society’s greed and irresponsibility. It depicts power struggles through the conflict that arises between Baka the demon, the cowardly king, and the oppressed people.Interested customers may write to us at mup@manipal.edu about purchasing the book. -
MOMO
₹450.00Author: Michael Ende ,Translator: Jayashree Kasaravalli
The fantasy novel originally written in German and translated into English, has been enjoyed by millions of readers worldwide. It has now been translated into Kannada as well. The novel has a very unusual story about time. The story describes how people in the modern era use the time, and a girl named MOMO teaches how it should be used. Humans have stolen time from modern societies, and a little girl of mysterious origin brings it back. In today’s society, the story has timeless relevance.
ನಗರದ ಅಂಚಿನಲ್ಲಿ ಹಾಳುಬಿದ್ದಿದೆ ಒಂದು ಆಂಪಿ ಥೀಯೇಟರ್. ಅಲ್ಲಿರುವ ದಿಕ್ಕಿಲ್ಲದ ಪುಟ್ಟ ಹುಡುಗಿ ಮೊಮೊ. ಒಂದು ದಿನ ಬೂದು ಬಣ್ಣದ ಬಟ್ಟೆ ತೊಟ್ಟು ದುಷ್ಟರು ಸದ್ದಿಲ್ಲದೇ ಬಂದು ನಗರವನ್ನು ಆಕ್ರಮಿಸಿಕೊಳ್ಳುತ್ತಾರೆ. ಅವರನ್ನು ಹಿಮ್ಮೆಟ್ಟಿಸುವ ಶಕ್ತಿಯಿರುವುದು ಮೊಮೊಗೆ ಮಾತ್ರ. ಅವಳು ಪ್ರೊಫೆಸರ್ ಹೋರಾ ಮತ್ತು ಅವರಲ್ಲಿರುವ ವಿಚಿತ್ರ ಆಮೆಯ ನೆರವಿನಿಂದ ಕಾಲದ ಸರಹದ್ದುಗಳನ್ನು ದಾಟಿ ಆ ದುಷ್ಟರ ಒಳಸಂಚುಗಳನ್ನು ಬಯಲುಮಾಡುತ್ತಿದ್ದಾಳೆ. ‘ಮೊಮೊ’ ಕಾಲವನ್ನು ಕದಿಯುವವರ ಕಥೆಯಾಗಿರುವ ಜೊತೆಗೇ ಕದ್ದ ಕಾಲವನ್ನು ಮತ್ತೆ ಜನರಿಗೆ ತಂದುಕೊಡುವ ಒಂದು ಮಗುವಿನ ಸಾಹಸಮಯ ಕಥೆಯು ಆಗಿದೆ.
Interested customers may write to us at mup@manipal.edu about purchasing the book.
-
Mahāmmāyi
₹195.00Author: Chandrasekhara Kambara, Translator: Kathyayini Kunjibettu
Mahāmmāyi is the story of the legend of Shatavithaayi – the Goddess of death, and her adopted son Sambhashiva. Out of affection for her son, Goddess Shatavithaayi blesses him with the “power of life”. The blessing was that death will evade the people who are treated by Sambashiva. But a certain condition set by Shatavithaayi forbade him from healing every ill man. The condition was that, if Shatavithaayi stood on the right side of the patient, Sambhashiva could treat that person and he would live; but, if she stood on the left side of the patient, he should not treat that person as his death was inevitable. Through a distinct method of story-telling, the story follows the life of Sambhashiva as he begins to question the ideas of fate and destiny. Thus, the conflict between fate and human efforts to change that fate is vividly described in this play. -
Kempu Kanagile and Chitra
₹160.00Author: Rabindranath Tagore, Translator: Sudha Adukkala
ಕೆಂಪು ಕಣಗಿಲೆ: ಅದೆಂಥ ಗಾಢಾಂಧಕಾರವೇ ಇರಲಿ, ಪುಟ್ಟ ಹಣತೆಯೊಂದು ಅದನ್ನು ತೊಡೆಯಬಲ್ಲುದೆಂಬುದು ಸಾರ್ವಕಾಲಿಕ ಸತ್ಯ. ಅಂಥದೊAದು ಸಂಘರ್ಷದ ಕಥನವನ್ನು ಗುರುದೇವ ರವೀಂದ್ರರು ತಮ್ಮ ಈ ನಾಟಕದಲ್ಲಿ ಹೇಳಿದ್ದಾರೆ. ‘ಕೆಂಪು ಕಣಗಿಲೆ’ ತೆರೆದಿಡುವ ಕೌರ್ಯದ ಜಗತ್ತು ಇಂದು ಈ ಕಾಲಘಟ್ಟದಲ್ಲಿ ನಿಂತು ಬರೆದರೇನೋ ಎಂಬಷ್ಟು ತಾಜಾ ಆಗಿದೆ. ಇಲ್ಲಿಯ ರಂಜನ ಕೇವಲ ಒಂದು ಪಾತ್ರವಲ್ಲ; ನಾವೆಲ್ಲರೂ ನಮ್ಮೊಳಗೆ ತುಂಬಿಸಿಕೊಳ್ಳಬೇಕಾದ ಜೀವನ ಪ್ರೀತಿಯ ವಿವಿಧ ಆಯಾಮಗಳ ಪ್ರತಿನಿಧಿ. ಇಲ್ಲಿಯ ನಂದಿನಿ ಇಂದು ಜಗವ ಸಂತೈಸಬೇಕಾದ ತಾಯಿಹೃದಯದ ಪ್ರತೀಕವಾಗಿದ್ದಾಳೆ.
ಚಿತ್ರಾ: ಪೌರಾಣಿಕ ಕಥಾನಕವೊಂದರ ಪುನರ್ಲೇಖನದ ಈ ನಾಟಕವು ಹೆಣ್ಣು ಮತ್ತು ರಾಷ್ಟçವನ್ನು ಒಂದು ಸಂಕಥನವನ್ನಾಗಿ ಚರ್ಚಿಸುತ್ತದೆ. ಹೆಣ್ಣು-ಗಂಡಿನ ಘನತೆಯ ಬದುಕನ್ನು ಕನಸುವ ನಿರೂಪಣೆ ನಾವು ಕಟ್ಟಬೇಕಾಗಿರುವ ರಾಷ್ಟçದ ರೂಪುರೇಷೆಗಳನ್ನೂ ತನ್ನೊಳಗೆ ಆಡಕ ಮಾಡಿಕೊಂಡಿದೆ. ನಮ್ಮ ಅನನ್ಯತೆಯನ್ನು ಉಳಿಸಿಕೊಳ್ಳುತ್ತಲೇ ಇನ್ನೊಬ್ಬರೊಂದಿಗೆ ಸಹಬಾಳ್ವೆಯನ್ನು ನಡೆಸುವ ಬಗೆಯನ್ನು ಮಂಡಿಸುತ್ತದೆ. ತಾನು ಆರೋಪಿಸಿಕೊಂಡ ಕೃತಕ ತೆರೆಯನ್ನು ಸರಿಸುವ ಚಿತ್ರಾ ನಮ್ಮೊಳಗಿನ ಅರಿವಿಗೆ ತೊಡಕಾಗಿರುವ ಸಂಕುಚಿತತೆಯ ಪರದೆಯನ್ನೂ ಸರಿಸುತ್ತಾಳೆ.
Interested overseas readers may write to us at mup@manipal.edu about purchasing the book. -
Nanna Parni Shaale
₹290.00Author: Thakur S Powdyel Translator: N T Bhat
ನನ್ನ ಪರ್ಣ ಶಾಲೆ ಠಾಕೂರ್ ಎಸ್ ಪಡೆಯಲು ಅವರು ಇಂಗ್ಲಿಷಿನಲ್ಲಿ ರಚಿಸಿದ ಪುಸ್ತಕದ ಕನ್ನಡ ಅನುವಾದ, ಭೂತಾನ್ ರಾಜ್ಯದಲ್ಲಿ ರಾಷ್ಟ್ರವ್ಯಾಪಿಯಾಗಿ ಅಳವಡಿಸಲಾದ ಶಿಕ್ಷಣ ಯೋಜನೆಯನ್ನು ಪೌಡಿಯಲ್ “ಮೈ ಗ್ರೀನ್ ಸ್ಕೂಲ್” ಎಂಬ ಹೆಸರಿನಲ್ಲಿ ವಿವರಿಸಿದ್ದಾರೆ. ಮೂಲದ ಇಂಗ್ಲಿಷ್ ಶೀರ್ಷಿಕೆ ಹೊಂದಿಕೊಳ್ಳುವಂತ ಈ ಅನುವಾದಕ್ಕೆ ಪರ್ಣ ಶಾಲೆ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ವಿದ್ಯಾರ್ಥಿ ವ್ಯಕ್ತಿತ್ವ ವನ್ನು ಸರ್ವಾಂಗೀಣ ವಾಗಿ ರೂಪಿಸುವ ಉದಾತ್ತ ಧೈರ್ಯವನ್ನು ಶಿಕ್ಷಣವು ಹೊಂದಿರಬೇಕೆಂಬುದನ್ನು ಈ ಪುಸ್ತಕದಲ್ಲಿ ಗಂಭೀರವಾಗಿ ಪ್ರತಿ ಪಾದಿಸುತ್ತಾರೆ. ಮನುಷ್ಯನು ಪ್ರಕೃತಿಯೊಂದಿಗೆ ತಾದಾತ್ಮ್ಯ ಭಾವವನ್ನು ಹೊಂದಿಕೊಳ್ಳುವುದು ಸರ್ವಾಂಗೀಣ ವ್ಯಕ್ತಿತ್ವದಲ್ಲಿ ಆಂತರ್ಗತವಾಗಿದೆ. ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ಈ ಲಕ್ಷ್ಯವೂ ಇರಬೇಕೆಂಬುದು ಸ್ವತಸ್ಸಿದ್ದ. ಈ ನಿಟ್ಟಿನಲ್ಲಿ ಉದಾತ್ತ ಶಿಕ್ಷಣ ನೀಡುವ ಶಾಲೆಯನ್ನು ಗ್ರೀನ್ ಸ್ಕೂಲ್ ಎಂದು ಕರೆಯುವುದು ಸರ್ವಥಾ ಸ ರಿ. ಅಂತೆಯೇ ಈ ಶಿಕ್ಷಣ ನೀತಿಯನ್ನು ಭಾರತದಲ್ಲೂ ವ್ಯಾಪಕವಾಗಿ ಅಳವಡಿಸುವುದು ಅಪೇಕ್ಷಣೀಯ.
Also available on

eBook available on

-
A Valiant Journey Through the Silk Route
₹575.00Author: Paravastu Lokeshwar, Translator: Shobha Dulluri
A Valiant Journey through the Silk Route is a travelogue that covers the incredible travel across the ancient Silk Route with the most alluring halts in Uzbekistan, Kyrgyzstan, and China to achieve a lifetime dream of a vagabond. The journey that starts in New Delhi and ends in Beijing opens up new vistas that are fascinating. The route covers historical monuments, museums, ancient oases, cemeteries, rural settings, public marketplaces, and several other landmarks and attractions. The travel continues through the deserts, passes by the rivers, treks up on the mountainous terrains – the path through which the great ancient travellers trudged.
Interested customers may write to us at mup@manipal.edu about purchasing the book.
Also available on










