Showing 21–33 of 33 results

  • Madhavi Kathana Kavya

    ವ್ಯಾಸ ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುವ ಒಂದು ಉಪಾಖ್ಯಾನವನ್ನಾಧರಿಸಿ ಬರೆದ ಒಂದು ಕಾವ್ಯವಿದು. ಮೂಲಕಥೆಯಲ್ಲಿ ಮಾಧವಿಯ ಶೋಷಣೆ ಎದ್ದು ಕಾಣುವುದಿಲ್ಲ. ವಿಶ್ವಾಮಿತ್ರ ಶಿಷ್ಯನಾದ ಗಾಲವನು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಹೊರಡುವಾಗ ‘ಗುರುದಕ್ಷಿಣೆಯಾಗಿ ಏನನ್ನು ಕೊಡಲಿ?’ ಎಂದು ಕೇಳುತ್ತಾನೆ. ವಿಶ್ವಾಮಿತ್ರರು ಗುರುದಕ್ಷಿಣೆ ಬೇಡವೆಂದರೂ ಕೇಳುವುದಿಲ್ಲ. ಕೊನೆಗೆ ವಿಶ್ವಾಮಿತ್ರರು, ‘ಒಂದು ಕಿವಿ ಮಾತ್ರ ಕಪ್ಪಾಗಿರುವ ಎಂಟುನೂರು ಶ್ವೇತಾಶ್ವಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಬಾ’ ಎಂದು ಹೇಳುತ್ತಾರೆ. ಆದರೆ, ಅಂಥ ವಿಶೇಷ ಗುಣದ ಕುದುರೆಗಳು ಬಹಳ ದುರ್ಲಭವಾದುವೆಂಬುದನ್ನು ಅರಿತಾಗ ಗಾಲವ ದಾನಶೂರ ಯಯಾತಿ ಮಹಾರಾಜನ ಬಳಿ ಸಹಾಯ ಬೇಡಲು ಹೋಗುತ್ತಾನೆ. ಆಗಷ್ಟೇ ದೊಡ್ಡದೊಂದು ಯಾಗ ಮುಗಿಸಿದ ಯಯಾತಿಯ ಬಳಿ ಅಶ್ವಗಳಿಲ್ಲ. ಆದರೆ, ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಯಯಾತಿ ತನ್ನ ಮಗಳು ಮಾಧವಿಯನ್ನು ಗಾಲವನ ವಶಕ್ಕೆ ಬಿಟ್ಟು ‘ರೂಪಸಿಯಾದ ಈಕೆಯನ್ನು ಬೇಕಾದ ಹಾಗೆ ಬಳಸಿಕೊಂಡು ನಿನಗೆ ಬೇಕಾದ ಅಶ್ವಗಳನ್ನು ಪಡೆ’ ಅನ್ನುತ್ತಾನೆ. ಹಾಗೆ ಗಾಲವನು ಮಾಧವಿಯನ್ನು ಮೂರು ಮಂದಿ ರಾಜರ ಬಳಿಗೆ ಕರೆದೊಯ್ದು ಅವರಿಂದ ತಲಾ ಇನ್ನೂರು ಅಶ್ವಗಳನ್ನು ಪಡೆದು ಆ ರಾಜರುಗಳಿಗೆ ಒಂದು ವರ್ಷದ ಮಟ್ಟಿಗೆ ಉಪಯೋಗಿಸಿಕೊಳ್ಳಲು ಮಾಧವಿಯನ್ನು ಒಪ್ಪಿಸುತ್ತಾನೆ. ಮೂಲ ಕಥೆಯಲ್ಲಿ ಮಾಧವಿಯ ಮನಸ್ಸಿನ ಸಂಘರ್ಷಗಳು ವ್ಯಕ್ತವಾಗಿಲ್ಲ. ‘ಪುರುಷರಿಂದ ಲೈಂಗಿಕವಾಗಿ ಎಷ್ಟು ಸಾರಿ ಬಳಸಲ್ಪಟ್ಟರೂ ನನ್ನ ಕನ್ಯತ್ವ ಉಳಿಯುವಂಥ ವರ ನನಗಿದೆಯಾದ್ದರಿಂದ ನಾನು ನಿನಗೆ  ಸಹಾಯ ಮಾಡಬಲ್ಲೆ’ ಎಂದು ಗಾಲವನ ಬಳಿ ಅವಳೇ ಹೇಳುತ್ತಾಳೆ . ಓಎನ್‍ವಿ ಕುರುಪ್ ಬರೆದ ಈ ಕೃತಿಯಲ್ಲಿ ಅವರು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿ ಇಡೀ ಕಥೆಯನ್ನು ಪುರುಷರಿಂದ ಘೋರ ಅನ್ಯಾಯಕ್ಕೊಳಗಾಗಿ ಮಾನಸಿಕ ಯಾತನೆಯನ್ನು ಅನುಭವಿಸಿರಬಹುದಾದ ಮಾಧವಿಯ ದೃಷ್ಟಿಯಿಂದ ಬರೆಯಲಾಗಿದೆ. ಆದ್ದರಿಂದ ಇದರ ಸ್ತ್ರೀವಾದಿ ಓದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ.ಮಲಯಾಳದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಓಎನ್‍ವಿಕುರುಪ್ ಅವರ ‘ಸ್ವಯಂವರಂ’ ಎಂಬ ಖಂಡಕಾವ್ಯದ ಭಾವಾನುವಾದವಿದು. ಮಹಾಭಾರತದ `ಉದ್ಯೋಗ ಪರ್ವ’ ದಲ್ಲಿ ಬರುವ ಒಂದು ಉಪಾಖ್ಯಾನದಲ್ಲಿ ಪುರುಷ ವರ್ಗದಿಂದ ಘೋರವಾಗಿ ಶೋಷಣೆಗೊಳಗಾದ ಮಾಧವಿ ಈ ಕಥೆಯ ನಾಯಕಿಯಾಗಿದ್ದು ಇಡೀ ಕಾವ್ಯವೇ ಅವಳ ದೃಷ್ಟಿಕೋನದಿಂದ ರಚಿತವಾಗಿದ್ದರಿಂದ ಸ್ತ್ರೀವಾದಿ ಓದಿಗೆ ಒಳಪಡಿಸಲು ಅತ್ಯಂತ ಸೂಕ್ತವಾದ ಕೃತಿಯಿದು ಎಂದೆನ್ನಿಸಿ ಅನುವಾದಕಿ ಅದರ ಶೀರ್ಷಿಕೆಯನ್ನು ‘ಮಾಧವಿ ಕಥನ ಕಾವ್ಯ’ವೆಂದು ಬದಲಾಯಿಸಿದ್ದಾರೆ . ಇದನ್ನು ಓದಿದಾಗೆಲ್ಲ ರಾಮಾಯಣದ ಸೀತೆಯ ನೆನಪಾಗುತ್ತದೆ.

    Interested customers may write to us at mup@manipal.edu about purchasing the book. 

    Also available on
    195.00
  • Mahaammaayi

     

    Mahāmmāyi is the story of the legend of Shatavithaayi – the Goddess of death, and her adopted son Sambhashiva. Out of affection for her son, Goddess Shatavithaayi blesses him with the “power of life”. The blessing was that death will evade the people who are treated by Sambashiva. But a certain condition set by Shatavithaayi forbade him from healing every ill man. The condition was that, if Shatavithaayi stood on the right side of the patient, Sambhashiva could treat that person and he would live; but, if she stood on the left side of the patient, he should not treat that person as his death was inevitable. Through a distinct method of story-telling, the story follows the life of Sambhashiva as he begins to question the ideas of fate and destiny. Thus, the conflict between fate and human efforts to change that fate is vividly described in this play.
    195.00
  • U-Turn

    ಮರಾಠಿ ನಾಟಕ. ಯು-ಟರ್ನ್ ಮಹಾರಾಷ್ಟ್ರ ಮತ್ತು ಅದರಾಚೆಗೆ 585 ಕ್ಕೂ ಹೆಚ್ಚು ಪ್ರದರ್ಶನಗಳೊಂದಿಗೆ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ. ಗುಜರಾತಿಯಲ್ಲಿ ಇದರ ಅನುವಾದವು 115 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ ಮತ್ತು ಹಿಂದಿಯಲ್ಲಿ 50 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಈ ಯಶಸ್ಸು ಶ್ರೀಮತಿ ಸವಿತಾ ಶಾಸ್ತ್ರಿಯವರ ಬೆಂಬಲದೊಂದಿಗೆ ಕನ್ನಡದಲ್ಲಿ ಈ ಕೃತಿಯನ್ನು ಅನುವಾದಿಸಲು ಪ್ರೊ.ನೀತಾ ಇನಾಮದಾರ್ ಅವರನ್ನು ಪ್ರೋತ್ಸಾಹಿಸಿತು. ನಾಟಕವು ಉದ್ದಕ್ಕೂ ಕೇವಲ ಎರಡು ಪಾತ್ರಗಳನ್ನು ಹೊಂದಿದೆ ಮತ್ತು ಇಡೀ ಅವಧಿಗೆ ವೇದಿಕೆಯ ಮೇಲಿರುವ ಇಬ್ಬರನ್ನು ಹೊರತುಪಡಿಸಿ ಒಂದೆರಡು ಧ್ವನಿಗಳನ್ನು ಹೊಂದಿದೆ. ನಾಟಕದ ಕೇಂದ್ರ ಕಲ್ಪನೆಯು ಆಧುನಿಕತೆಯನ್ನು ಒಪ್ಪಿಕೊಳ್ಳುವಲ್ಲಿನ ವ್ಯತ್ಯಾಸಗಳು ಮತ್ತು ಎರಡು ವಿಭಿನ್ನ ತಲೆಮಾರುಗಳಲ್ಲಿ ಇದಕ್ಕೆ ಸಂಬಂಧಿಸಿದ ಸಂಘರ್ಷಗಳು. ವಿಚ್ಛೇದಿತ ಸೇನೆಯ ಮೇಜರ್ ಮತ್ತು 50 ರ ದಶಕದ ಅಂತ್ಯದಲ್ಲಿರುವ ವಿಧವೆಯ ನಡುವಿನ ಒಡನಾಟವನ್ನು ಅವರ ಮಕ್ಕಳು ವಿರೋಧಿಸುತ್ತಾರೆ ಮತ್ತು ಅವರು ತಮ್ಮನ್ನು ತಾವು ಆಧುನಿಕತೆಯನ್ನು ಅಳವಡಿಸಿಕೊಂಡರೂ ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ನೀತಾ ಇನಾಮದಾರ್ ಅವರು ಮಣಿಪಾಲ್ ವಿಶ್ವವಿದ್ಯಾನಿಲಯದಲ್ಲಿ (MU) ಯುರೋಪಿಯನ್ ಅಧ್ಯಯನ ವಿಭಾಗದ (DES) ಮುಖ್ಯಸ್ಥರಾಗಿದ್ದಾರೆ ಮತ್ತು ಮಣಿಪಾಲ್ ಯೂನಿವರ್ಸಲ್ ಪ್ರೆಸ್ ನ (MUP) ಮುಖ್ಯ ಸಂಪಾದಕರಾಗಿದ್ದಾರೆ. ಸಂಗೀತ ಮತ್ತು ರಂಗಭೂಮಿ ಅವರ ಆಸಕ್ತಿಗಳಾಗಿದ್ದು, ಶ್ರೀಮತಿ ಸವಿತಾ ಶಾಸ್ತ್ರಿ ಅವರ ನೆರವಿನೊಂದಿಗೆ ಈ ಕೆಲಸವನ್ನು ಕೈಗೊಳ್ಳುವಂತೆ ಮಾಡಿತು. ಸವಿತಾ ಶಾಸ್ತ್ರಿ ಅವರು ಮಣಿಪಾಲದ ಮಹಿಳಾ ಉದ್ಯಮಿಯಾಗಿದ್ದು, ಅವರು ಬಾಬಾ ಆಮ್ಟೆ ಅವರ ಆನಂದವನಕ್ಕೆ ಧನಸಹಾಯವನ್ನೂ ಮಾಡುತ್ತಾರೆ. ಅವರು ಮರಾಠಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪುಸ್ತಕಗಳು ಮತ್ತು ನಾಟಕಗಳ ಓದುಗರಾಗಿದ್ದಾರೆ, ಅವರು ಈ ಅನುವಾದ ಯೋಜನೆಗೆ ತಮ್ಮ ಬೆಂಬಲವನ್ನು ನೀಡಿದರು.

    180.00
  • Makkala Padya Manjiri

    Author:  Kayyara Kinhanna Rai

    ಮಕ್ಕಳ ಪದ್ಯಮಂಜಿರಿ ಶ್ರೀ ಕಯ್ಯಾರ ಕಿಞ್ಞಣ್ಣ ರೈ ಅವರಿಂದ ಮಕ್ಕಳಿಗಾಗಿ ಕವನಗಳ ಪುಸ್ತಕ. ಶ್ರೀ ಕಯ್ಯಾರರ ಕವನಗಳು ಎಲ್ಲಾ ಹಿನ್ನೆಲೆಯ ಜನರನ್ನು ತಲುಪುವುದರಿಂದ ಹೆಚ್ಚಿನ ಕನ್ನಡಿಗರು ಕಾವ್ಯವನ್ನು ಓದುವ ಬೆಳವಣಿಗೆಯನ್ನು ಹೊಂದಿದ್ದಾರೆ. ಗ್ರಾಮೀಣ ಅಥವಾ ನಗರ, ಶ್ರೀಮಂತ ಅಥವಾ ಬಡ. ಈ ಕವಿತೆಗಳಲ್ಲಿ ಬಾಲ್ಯದ ಸವಿನೆನಪುಗಳು ಅಡಗಿದ್ದು, ಓದುವಾಗ ಓದುಗರಿಗೆ ನಾಸ್ಟಾಲ್ಜಿಕ್ ಆಗುವುದರಿಂದ ಅವು ದೊಡ್ಡವರಲ್ಲಿಯೂ ಜನಪ್ರಿಯವಾಗಿವೆ. ಕಲಾವಿದ ಪ್ರಸಾದ್ ರಾವ್ ಜಿ ಅವರು ಚಿತ್ರಿಸಿದ ಚಿತ್ರಗಳೊಂದಿಗೆ ಪ್ರಸ್ತುತ ಪುಸ್ತಕವು ಓದುವಿಕೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತದೆ. ಇದು ಶ್ರೇಷ್ಠ ಕವಿ, ಬರಹಗಾರ ಕಯ್ಯಾರ ಅವರ ಶತಮಾನೋತ್ಸವ ವರ್ಷದಲ್ಲಿ ಹೊರತರಲಾದ MUP ಯ 50 ನೇ ಪ್ರಕಟಣೆಯಾಗಿದೆ.

    Interested readers may write to us at mup@manipal.edu about purchasing the book.

    Also available on

    180.00
  • A Shrine for Sarasamma

    A Shrine for Sarasamma is the English translation of Sarasammana Samadhi written by K Shivarama Karanth in 1937, in his early thirties. It offers one of the most authentic and searing accounts of Indian womanhood, which consistently, and through the ages, has suffered deep anguish, humiliation and crushing insult from the oppressive patriarchal culture prevalent in all parts of India and among all castes and classes. The novel is a classic in Kannada and the English translation is an attempt to bring to the English reading audience a taste of the regional classic.


    Buy at

    180.00
  • Aparichita (Camus – The Stranger)

    ತರ್ಕವಾಗಲೀ ವಿಜ್ಞಾನವಾಗಲೀ ಮೂಲತಃ ಯಾವ ಅರ್ಥವನ್ನೂ ಅಡಗಿಸಿಕೊಂಡಿರದ ಈ ಅಸಂಬದ್ಧ ಬದುಕನ್ನು ವಿವರಿಸಲಾರವು. ಆದರೆ, ಅದಕ್ಕಾಗಿ ಅತೀಂದ್ರಿಯ ಶಕ್ತಿಯೊಂದನ್ನು ನಂಬುವುದು `ತಾತ್ವಿಕ ಆತ್ಮಹತ್ಯೆ’. ಇಂತಹ ತಾತ್ವಿಕ ಅಥವಾ ದೈಹಿಕ ಆತ್ಮಹತ್ಯೆಗಳು ಜಗತ್ತಿನ ಅರ್ಥರಾಹಿತ್ಯಕ್ಕೆ ಉತ್ತರಗಳಲ್ಲ. ಅಸಂಬದ್ಧತೆಯನ್ನು ಗುರುತಿಸಿ ಬದುಕುವುದೊಂದೇ ಅದಕ್ಕಿರಬಹುದಾದ ಉತ್ತರ ಎಂದು ವ್ಯಾಖ್ಯಾನಿಸಿದ ಫ್ರೆಂಚ್ ಲೇಖಕ, ತತ್ವಜ್ಞಾನಿ ಮತ್ತು ಪತ್ರಕರ್ತ ಆಲ್ಬರ್ಟ್ ಕಮೂ ಬರೆದಿರುವುದು ಕೆಲವೇ ಕಾದಂಬರಿಗಳು ಮತ್ತು ಕೆಲವು ವ್ಯಾಖ್ಯಾನಗಳು.  ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾದ ಅಲ್ಬರ್ಟ್ ಕಮೂನ ಸುಪ್ರಸಿದ್ದ ಕಾದಂಬರಿ “ದ ಸ್ಟ್ರೇಂಜರ್” ಕನ್ನಡವೂ ಸೇರಿದಂತೆ ವಿಶ್ವದ ಹಲವು ಭಾಷೆಗಳಲ್ಲಿ ಅನುವಾದಗೊಂಡು ಹಲವು ಪೀಳಿಗೆಗಳ ಓದುಗರನ್ನು ವಿವಿಧ ರೀತಿಗಳಲ್ಲಿ ಆಕರ್ಷಿಸುತ್ತ ಬಂದಿದೆ. ೧೯೪೨ರಲ್ಲಿ ಮೊದಲು ಪ್ರಕಟವಾದ ಈ ಫ್ರೆಂಚ್ ಕಾದಂಬರಿ ಕಳೆದ ಎಂಟು ದಶಕಗಳಲ್ಲಿ ಪಡೆದುಕೊಂಡಿರುವ ವಿಮರ್ಶಾತ್ಮಕ ಪ್ರತಿಕ್ರಿಯೆ- ಪ್ರತಿಸ್ಪಂದನೆಗಳೂ ವೈವಿಧ್ಯಮಯವಾಗಿವೆ. ಪ್ರತಿವೊಂದು ಪೀಳಿಗೆಯೂ ಈ ಕೃತಿಯನ್ನು ಹೊಸದಾಗಿ ಓದುತ್ತ, ಅನುವಾದಿಸಿಕೊಳ್ಳುತ್ತ, ವಿಮರ್ಶಿಸುತ್ತ, ಇಂಥ ಅನುವಾದಗಳ, ವ್ಯಾಖಾನಗಳ ಒಂದು ಪರಂಪರೆಯೇ ಸೃಷ್ಟಿಯಾಗಿದೆ. ಕನ್ನಡದಲ್ಲಿ ಈ ಮೊದಲೇ, ೧೯೭ ೦ರಲ್ಲಿ, “ಅನ್ಯ” ಎಂಬ ಹೆಸರಿನಲ್ಲಿ ಡಾ. ಡಿ. ಎ. ಶಂಕರ್ ಅವರಿಂದ ಅನುವಾದಗೊಂಡಿದ್ದ ಈ ಕಾದಂಬರಿಯು ಅರ್ಧ ಶತಮಾನದ ನಂತರ ಮತ್ತೆ “ಅಪರಿಚಿತ” ಎಂಬ ಹೆಸರಿನಿಂದ ಶ್ರೀ ಪ್ರಕಾಶ್ ನಾಯಕ್ ಅವರಿಂದ ಹೊಸದಾಗಿ ಅನುವಾದಗೊಂಡು ಈ ಪರಂಪರೆಯನ್ನು ಮುಂದುವರಿಸಿದೆ. ಸ್ವತಃ ಓರ್ವ ಪ್ರತಿಭಾವಂತ ಕತೆಗಾರ-ಕಾದಂಬರಿಕಾರರಾಗಿರುವ ಪ್ರಕಾಶ್ ನಾಯಕ್ ಅವರ ಈ ಸರಳ ಸುಂದರ ಅನುವಾದವು ಕಮೂ ಕೃತಿಯ ಮರು ಓದು-ಹೊಸ ಓದುಗರನ್ನು ಆಹ್ವಾನಿಸುವಂತಿದೆ.

    Interested customers may write to us at mup@manipal.edu about purchasing the book. 

    Also available on
    170.00
  • Mahila Mahabharatha

    Author:  K Madhavan  Translator: Abhinaya H 

    ಮಹಿಳಾ ಮಹಾಭಾರತ, ಇದು ಜೆಎನ್‌ಯು ದೆಹಲಿಯ ವಿಶ್ರಾಂತ ಪ್ರಾಧ್ಯಾಪಕರಾದ ಕೆ. ಮಾಧವನ್ ರಚಿಸಿದ ನಾಟಕ. ರಂಗ ನಿರ್ದೇಶಕರೂ ಆಗಿರುವ ಮಾಧವನ್‌ರನ್ನು ೧೯೯೪ರಲ್ಲಿ ಯೂನಿವರ್ಸಿಟಿ ದು ಕ್ವಿಬೀ ಎ ಮಾನ್‌ಟ್ರಿಯಲ್ ವಿಶ್ವವಿದ್ಯಾನಿಲಯ ತನ್ನ ವಿದ್ಯಾರ್ಥಿಗಳಿಗೆ ರಂಗ ನಿರ್ದೇಶನದ ತರಬೇತಿ ನೀಡಲು ಆಹ್ವಾನಿಸಿತ್ತು. ಆಗ ಒಂದು ವರ್ಷ ನಡೆಸಿದ ರಂಗ ಕಾರ್ಯಾಗಾರದ ಭಾಗವಾಗಿ ೧೯೯೫ ರಲ್ಲಿ ಮಾಧವನ್ ಈ ನಾಟಕವನ್ನು ಫ್ರೆಂಚ್ ಭಾಷೆಯಲ್ಲಿ ರಚಿಸಿ ನಿರ್ದೇಶಿಸಿದ್ದರು. ನಂತರ ಇದು ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಆಯಾ ಪ್ರದೇಶದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟಿತು. ಹಾಗೆಯೇ ಭಾರತದಲ್ಲಿಯೂ ಅನೇಕ ನಗರಗಳಲ್ಲಿ ಈ ನಾಟಕ ಪ್ರದರ್ಶನ ಕಂಡಿದೆ. ೨೦೦೫ರಲ್ಲಿ ಈ ನಾಟಕದ ಇಂಗ್ಲಿಷ್ ಅವತರಣಿಕೆಯು ಥಿಯೇಟರ್ ಇಂಡಿಯಾದಿAದ ಪ್ರಕಟವಾಯಿತು. <br> ಎಲ್ಲ ಕಾಲದ ಮಹಿಳಾ ಜಗತ್ತಿನ ಆಂತರ್ಯದಲ್ಲಿ ನಡೆಯಬಹುದಾದ ಮಹಾಯುದ್ಧದ ಕಥನವೇ ಮಹಿಳಾ ಮಹಾಭಾರತ. ಇಲ್ಲಿ ಪುರಾಣ ಮತ್ತು ವಾಸ್ತವ ಜಗತ್ತಿನ ನಡುವಿನ ಗೆರೆಯೇ ಅಳಿಸಿ, ಪೌರಾಣಿಕತೆ ಮತ್ತು ವಾಸ್ತವಿಕತೆ ಮುಖಾಮುಖಿಯಾಗುತ್ತವೆ. ಮಹಾಭಾರತ ಕಥೆಯ ಪರಿಧಿಯಲ್ಲಿದ್ದಿರಬಹುದಾದ ಎಲ್ಲ ತಾಯಂದಿರೂ ಈ ನಾಟಕದಲ್ಲಿ ಕೇಂದ್ರದತ್ತ ಚಲಿಸಿ ಕತೆ ಹೇಳುತ್ತಾರಾದ್ದರಿಂದ, ಮಹಿಳಾ ಕಣ್ನೋಟದ ಮಹಾಭಾರತ ಇಲ್ಲಿ ಗೋಚರವಾಗುತ್ತದೆ. ವಿಶೇಷವೆಂದರೆ, ಈ ಇಡೀ ಕಥನದ ಸೂತ್ರಧಾರಿಣಿ, ಸಮಕಾಲೀನ ಜಗತ್ತಿನ ಅಸಹಾಯಕ, ಹತಾಶ ತಾಯಿ. ಇಲ್ಲಿ ಪುಟ್ಟ ಪೆಟ್ಟಿಗೆಯಲ್ಲಿ ಜೀವಶಕ್ತಿಯ ಬೀಜ ನೆಟ್ಟು ಅದು ಮೊಳಕೆಯೊಡೆದು ಬೃಹತ್ ವೃಕ್ಷವಾಗಿ ಅಡುಗೆ ಮನೆಯನ್ನೇ ಸ್ಪೋಟಿಸುವ ಹೆಣ್ಣುಗಳಿದ್ದಾರೆ, ಮರಕ್ಕೆ ಕಟ್ಟಿ ಸುಟ್ಟು ಹಾಕುತ್ತಿರುವ ಅಣ್ಣಂದಿರನ್ನೇ ನೋಡಿ ಗಹಗಹಿಸುವ ತಂಗಿಯರಿದ್ದಾರೆ, ಹೆಣ್ಣುಗಳ ನಿಟ್ಟುಸಿರ ತಾಪಕ್ಕೆ ಗುರಿಯಾಗಿ ನಲುಗುತ್ತಿರುವ ಗಂಡುಮಕ್ಕಳ ಸಂಕಟ ಕಂಡು ಮರುಗುತ್ತಿರುವ ತಾಯಂದಿರಿದ್ದಾರೆ. ಆದಿಯಿಂದ ಅಂತ್ಯದವರೆಗೆ ತೂಗುವ ತೊಟ್ಟಿಲು, ಅನುರಣಿಸುವ ಜೋಗುಳದ ಜೊತೆಗೆ ಹೆಮ್ಮಕ್ಕಳು ನೀಡುವ ಶಾಪದ ಸರಮಾಲೆಯೂ ಇಲ್ಲಿದೆ.

    Interested readers may write to us at mup@manipal.edu about purchasing the book. 

     

    Also available on

     

    160.00
  • Kempu Kanagile and Chitra

    Author: Rabindranath Tagore, Translator: Sudha Adukkala

    ಕೆಂಪು ಕಣಗಿಲೆ: ಅದೆಂಥ ಗಾಢಾಂಧಕಾರವೇ ಇರಲಿ, ಪುಟ್ಟ ಹಣತೆಯೊಂದು ಅದನ್ನು ತೊಡೆಯಬಲ್ಲುದೆಂಬುದು ಸಾರ್ವಕಾಲಿಕ ಸತ್ಯ. ಅಂಥದೊAದು ಸಂಘರ್ಷದ ಕಥನವನ್ನು ಗುರುದೇವ ರವೀಂದ್ರರು ತಮ್ಮ ಈ ನಾಟಕದಲ್ಲಿ ಹೇಳಿದ್ದಾರೆ. ‘ಕೆಂಪು ಕಣಗಿಲೆ’ ತೆರೆದಿಡುವ ಕೌರ್ಯದ ಜಗತ್ತು ಇಂದು ಈ ಕಾಲಘಟ್ಟದಲ್ಲಿ ನಿಂತು ಬರೆದರೇನೋ ಎಂಬಷ್ಟು ತಾಜಾ ಆಗಿದೆ. ಇಲ್ಲಿಯ ರಂಜನ ಕೇವಲ ಒಂದು ಪಾತ್ರವಲ್ಲ; ನಾವೆಲ್ಲರೂ ನಮ್ಮೊಳಗೆ ತುಂಬಿಸಿಕೊಳ್ಳಬೇಕಾದ ಜೀವನ ಪ್ರೀತಿಯ ವಿವಿಧ ಆಯಾಮಗಳ ಪ್ರತಿನಿಧಿ. ಇಲ್ಲಿಯ ನಂದಿನಿ ಇಂದು ಜಗವ ಸಂತೈಸಬೇಕಾದ ತಾಯಿಹೃದಯದ ಪ್ರತೀಕವಾಗಿದ್ದಾಳೆ.

    ಚಿತ್ರಾ: ಪೌರಾಣಿಕ ಕಥಾನಕವೊಂದರ ಪುನರ್ಲೇಖನದ ಈ ನಾಟಕವು ಹೆಣ್ಣು ಮತ್ತು ರಾಷ್ಟçವನ್ನು ಒಂದು ಸಂಕಥನವನ್ನಾಗಿ ಚರ್ಚಿಸುತ್ತದೆ. ಹೆಣ್ಣು-ಗಂಡಿನ ಘನತೆಯ ಬದುಕನ್ನು ಕನಸುವ ನಿರೂಪಣೆ ನಾವು ಕಟ್ಟಬೇಕಾಗಿರುವ ರಾಷ್ಟçದ ರೂಪುರೇಷೆಗಳನ್ನೂ ತನ್ನೊಳಗೆ ಆಡಕ ಮಾಡಿಕೊಂಡಿದೆ. ನಮ್ಮ ಅನನ್ಯತೆಯನ್ನು ಉಳಿಸಿಕೊಳ್ಳುತ್ತಲೇ ಇನ್ನೊಬ್ಬರೊಂದಿಗೆ ಸಹಬಾಳ್ವೆಯನ್ನು ನಡೆಸುವ ಬಗೆಯನ್ನು ಮಂಡಿಸುತ್ತದೆ. ತಾನು ಆರೋಪಿಸಿಕೊಂಡ ಕೃತಕ ತೆರೆಯನ್ನು ಸರಿಸುವ ಚಿತ್ರಾ ನಮ್ಮೊಳಗಿನ ಅರಿವಿಗೆ ತೊಡಕಾಗಿರುವ ಸಂಕುಚಿತತೆಯ ಪರದೆಯನ್ನೂ ಸರಿಸುತ್ತಾಳೆ.

    Interested overseas readers may write to us at mup@manipal.edu about purchasing the book.

     

    Also available on

    160.00
  • Ati Sannakathe: Swarupa, Siddhi Mattu Sadhyate

    Author:   Translator: Prakash Nayak

    ಕಲ್ಪನೆ ಎಂಬುದು ಸತ್ಯಕ್ಕಿಂತ ಹೆಚ್ಚು ಸತ್ಯ, ಕನಸು ಎಂಬುದು ವಾಸ್ತವಕ್ಕಿಂತ ಹೆಚ್ಚು ವಾಸ್ತವ ಎಂಬುದು ಅತಿ ಸಣ್ಣಕತೆಗಳು ನಮಗೆ ಮನದಟ್ಟು ಮಾಡಿಕೊಡುವಂತೆ ಕಾಣುತ್ತವೆ. ಹೆಚ್ಚಿನ ಅತಿ ಸಣ್ಣಕತೆಗಳು ವಾಸ್ತವವಾದೀ ಮಾರ್ಗವನ್ನು ಬಿಟ್ಟುಕೊಟ್ಟಿರುವುದಕ್ಕೆ ಪ್ರಾಯಶಃ ಇದೇ ಕಾರಣ. ವಿವರಣೆ-ವರ್ಣನೆಗಳ ಹಂಗು ಇಲ್ಲದಿರುವುದರಿಂದ ಸಂಕ್ಷಿಪ್ತತೆ ಮತ್ತು ಸಾಂದ್ರತೆಗಳು ಇವುಗಳ ಸಹಜ ಲಕ್ಷಣಗಳಾಗಿವೆ. ಅಂತರಂಗದ ಆಳವನ್ನು, ಅಮೂರ್ತವನ್ನು, ಸಾಂಕೇತಿಕವಾದುದದ್ದನ್ನು ಮತ್ತೊಂದೇ ಸ್ತರದಲ್ಲಿ ಗ್ರಹಿಸಿ ಅಭಿವ್ಯಕ್ತಿಸಲು ಲೇಖಕರಿಗೆ ಈ ಪ್ರಕಾರ ಹೇಳಿ ಮಾಡಿಸಿದಂತಿದೆ. ಹಾಗಾಗಿ ಜಗತ್ತಿನ ಎಲ್ಲ ಭಾಷೆಗಳ ದೊಡ್ಡ ಲೇಖಕರು, ದೀರ್ಘವಾದ ಕತೆ-ಕಾದಂಬರಿಗಳನ್ನು ಬರೆದವರನ್ನೂ ಸೇರಿಸಿಕೊಂಡು, ಈ ಪ್ರಕಾರದಲ್ಲಿ ಕೃಷಿಮಾಡಿದ್ದಾರೆ. ತುಂಬ ಸೂಕ್ಷ್ಮವಾದ, ನಾಜೂಕಾದ ಸಂಗತಿಗಳನ್ನು ಸೂಚ್ಯವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಇನ್ನೂ ಕೆಲವು ವೇಳೆ ಮುಚ್ಚಿಟ್ಟು ಹೇಳಲು ಈ ಪ್ರಕಾರವು ತನ್ನ ಸ್ವರೂಪದ ಕಾರಣದಿಂದಲೇ ಅನುವು ಮಾಡಿಕೊಡುತ್ತದೆ. ಇದು ಆಧುನಿಕ ಪೂರ್ವದ ದಂತಕತೆ, ನೀತಿಕತೆ, ದೃಷ್ಟಾಂತ ಕತೆಗಳ ಆಧುನಿಕ ರೂಪವಾಗಿ ಕಂಡರೂ ಆಶ್ಚರ್ಯವಿಲ್ಲ.

    Also available on
    eBook available on

     

    160.00
  • Tapaalu Mani

    Author: Rabhindranath Tagore, Translator: Mounesh Badiger

    ರಾಷ್ಟ್ರಕವಿ ರವೀಂದ್ರನಾಥ ಠಾಕೂರರ ‘ಡಾಕ್ ಘರ್’ ಬಹಳ ಪ್ರಸಿದ್ಧ ನಾಟಕ. ಮಗುವಿನ ಮನೋದೈಹಿಕ ಸಾಧ್ಯತೆಗಳನ್ನು ಕಲೆಯ ಸೂಕ್ಷ್ಮಕಣ್ಣಿನಿಂದ ನೋಡುವ ಎರಡಂಕದ ಪುಟ್ಟ ನಾಟಕವಿದು. ಇದು ಸೃಷ್ಟಿಸುವ ಮಾಯಾವಾಸ್ತವ ಬಹಳ ಅಪರೂಪವಾದದ್ದು. ಇದರ ಮುಖ್ಯ ಪಾತ್ರ ಮಗುವೇ ಆಗಿದ್ದರೂ ಇದರ ವಸ್ತು ಮಕ್ಕಳಿಗಳಿಂತ ಹೆಚ್ಚಾಗಿ ದೊಡ್ಡವರಿಗೇ ಅನ್ವಯವಾಗುವಂತಿದೆ. ಮೌನೇಶ ಬಡಿಗೇರರು ಇದನ್ನು ಉತ್ತರಕರ್ನಾಟಕದ ಭಾಷೆಗೆ ತಂದು ಕನ್ನಡದ ನಾಟಕವೇ ಎನ್ನುವಷ್ಟು ರೂಪಾಂತರಿಸಿದ್ದಾರೆ. ಇದರ ಪ್ರಯೋಗದ ಹೊಸ ಹೊಸ ಸಾಧ್ಯತೆಗಳನ್ನು ಕನ್ನಡ ರಂಗಭೂಮಿ ಇನ್ನೂ ಶೋಧಿಸಬೇಕಿದೆ.

    Interested readers may write to us at mup@manipal.edu about purchasing the book. 

     

    Also available on
    140.00
  • Gombi Madhvi

    ಉತ್ತರ ಕರ್ನಾಟಕದ ಸಂಸ್ಕೃತಿಗೆ ಕನ್ನಡಿ ಹಿಡಿಯುವ ಈ ಕೃತಿಯಲ್ಲಿ ಬಡ, ಮುಗ್ಧ ಹುಡುಗಿಯೊಬ್ಬಳ ಕನಸುಗಳು, ಮಾನವೀಯತೆಯನ್ನು ಮೆರೆಯುವ ಹಲವು ಪಾತ್ರಗಳ ನಡುವೆ ವಿಧಿಯ ಕೈವಾಡದಿಂದ ಚದುರಿ ಹೋಗುವ, ಅಂತಃಕರಣವನ್ನು ಕಲಕುವ ಚಿತ್ರಣವಿದೆ. ಸ್ಥಳೀಯ ನಂಬಿಕೆ-ಆಚರಣೆ, ಆಶೋತ್ತರಗಳನ್ನು ದಟ್ಟವಾಗಿ ಹೆಣೆದುಕೊಳ್ಳುತ್ತ ಒಂದು ಪುಟ್ಟ ವಿಶ್ವವನ್ನೇ ಈ ನಾಟಕ ಸೃಷ್ಟಿಸುತ್ತದೆ. ರೇವತಿ ನಾಡಗೀರ ಅವರ ಚೊಚ್ಚಲ ಕೃತಿಯಾದ ಇದರಲ್ಲಿ, ಅವರ ಸಹೃದಯತೆ, ಉತ್ತರ ಕರ್ನಾಟಕದ ಸಂಸ್ಕೃತಿಯ ಅನುಭವ ಎದ್ದು ಕಾಣುತ್ತದೆ.

    Interested customers may write to us at mup@manipal.edu about purchasing the book. 

    Also available on
    130.00
  • Inti Dvadasha Akhyana

    ಸತ್ಯವತಿ ಹರಿಕೃಷ್ಣನ್ ಹಾಸ್ಯಬರವಣಿಗೆಯಲ್ಲಿ ಸುಮಾರು ಎರಡು ದಶಕಗಳಿಂದ ತನ್ನನ್ನು ತೊಡಗಿಸಿಕೊಂಡಿರುವ ಕವಯಿತ್ರಿ. ಇವರ ಹಾಸ್ಯಲೇಖನಗಳು ತರಂಗ, ತುಷಾರ, ಮಯೂರ, ಕರ್ಮವೀರದಂಥ ನಿಯತಕಾಲಿಕಗಳಲ್ಲಿ, ಉದಯವಾಣಿ, ಪ್ರಜಾವಾಣಿ ಮುಂತಾದವುಗಳಲ್ಲಿಯೂ ಪ್ರಕಟಗೊಂಡಿವೆ. 2002ರಲ್ಲಿ ಡೆಟ್ರಾಯಿಟ್ ನಲ್ಲಿ ನಡೆದ “ಅಕ್ಕ” ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಇವರ “ಗುಂಡ್ರಾಮನ ಚಿಕಿತ್ಸಾಯಣ’ ಎಂಬ ಕೃತಿ ಪ್ರಕಟವಾಗಿದೆ. ಸನ್ಮಾನ್ಯರಾದ ದೇಜಗೌ ಮತ್ತು ಜಿಟಿನಾರವರ ಸಂಪಾದಕತ್ವದಲ್ಲಿ ಪ್ರಕಟವಾದ “ಪುಸ್ತಕ ಪ್ರಪಂಚ’ದಲ್ಲಿ ಇವರ ಅನುವಾದಿತ ಲೇಖನಗಳು ಪಡಿಮೂಡಿವೆ. “ಕುಂಬಾಸ’, “ನುಗ್ಗೇಹಳ್ಳಿ ಪಂಕಜ’ವೇ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುವ ಸತ್ಯವತಿಯವರು ಈಗಾಗಲೇ ಐದು ಹಾಸ್ಯ ಸಂಕಲನಗಳನ್ನು ರಚಿಸಿದ್ದಾರೆ. ಅವರ ಆರನೆಯ ಹಾಸ್ಯ ಸಂಕಲನವೇ – “ಇಂತಿ ದ್ವಾದಶ ಆಖ್ಯಾನ’. ಹಾಸ್ಯದಲ್ಲಿ ಅಪಹಾಸ್ಯ, ತಿಳಿಹಾಸ್ಯ, ವ್ಯಂಗ್ಯ ಮುಂತಾದ ಪ್ರಭೇದಗಳಿವೆ. ವ್ಯಂಗ್ಯಮಿಶ್ರಿತವಾದ ತಿಳಿಹಾಸ್ಯ ಒಂದೇ ಕಾಲದಲ್ಲಿ ಎರಡು ಉದ್ದೇಶಗಳನ್ನು ಹೊಂದಿರುತ್ತವೆ. ಅದು ಮೇಲ್ನೋಟಕ್ಕೆ ಮನೋರಂಜನೆಯಾಗಿ ಕಂಡರೂ, ಅದರ ಇಂಗಿತ ಓದುಗರನ್ನು ಗಂಭೀರ ಚಿಂತನೆಗೆ ತೊಡಗುವಂತೆ ಮಾಡುವುದಾಗಿರುತ್ತದೆ. ವ್ಯಕ್ತಿಯನ್ನು ನೋಯಿಸದೇ ಲಘುಹಾಸ್ಯ-ವ್ಯಂಗ್ಯಗಳಿಂದ ಸ್ವವಿಮರ್ಶೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಹಾಸ್ಯದ ಕಲಾತ್ಮಕ ಪ್ರಕ್ರಿಯೆ. ಶ್ರೀಮತಿ ಸತ್ಯವತಿಯವರ ಈ ಕೃತಿಯಲ್ಲಿ ಇಂತಹ ಒಂದು ಪ್ರಯತ್ನವನ್ನು ನಾವು ಕಾಣಬಹುದು. “ಇಂತಿ ದ್ವಾದಶ ಆಖ್ಯಾನ’ದಲ್ಲಿ ಹನ್ನೆರಡು ವೈವಿಧ್ಯಮಯ ಸಣ್ಣ ಹಾಸ್ಯಲೇಖನಗಳಿವೆ. ಸತ್ಯವತಿಯವರು ನಮ್ಮ ಜೀವನದ ಸಾಮಾನ್ಯ ಘಟನೆಗಳನ್ನೇ ರಂಗುರಂಗಾಗಿ ತಿಳಿಹಾಸ್ಯದ ಮೂಲಕ ಈ ಕೃತಿಯಲ್ಲಿ ತೋರಿಸಿದ್ದಾರೆ. ಕಾಲ್ಪನಿಕ ಘಟನೆಗಳಲ್ಲಿ ಹಾಸ್ಯದ ಪಾತ್ರಗಳನ್ನು ಸೃಷ್ಟಿಸಿ, ಗಂಭೀರ ವಿಚಾರಗಳನ್ನು ಮನಮುಟ್ಟುವಂತೆ ನಿರೂಪಿಸುವ ಲೇಖಕಿಯ ಶೈಲಿಯು ಅಪೂರ್ವವಾದದ್ದು. ಪ್ರತಿ ಕತೆಯ ಶೀರ್ಷಿಕೆಯಲ್ಲೇ ಹಾಸ್ಯ ತುಂಬಿರುವ ಈ ಕೃತಿಯು ಓದುಗರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ.

    Interested customers may write to us at mup@manipal.edu about purchasing the book. 

    Also available on
    120.00