Showing all 8 results

• Grama Sannidhya
ಗ್ರಾಮ ಸಾನ್ನಿಧ್ಯ

ಗ್ರಾಮ ಭಾರತವೇ ನೈಜ ಭಾರತವೆಂಬ ಉಕ್ತಿಯೊಂದಿದೆ. ಈ ಉಕ್ತಿ ಅತಿಶಯೋಕ್ತಿಯಲ್ಲ.  ಪಂಜಾಬ ಸಿಂಧ, ಗುಜರಾತ, ಮರಾಠ, ದ್ರಾವಿಡ, ಉತ್ಕಲ, ವಂಗ ಎನ್ನುವಾಗ ಅಥವಾ ಸುಜಲಾಂ, ಸುಫಲಾಂ, ಮಲಯಜ ಶೀತಲಾಂ, ಸಸ್ಯಶಾಮಲಾಂ, ಮಾತರಂ… ವಂದೇ ಮಾತರಂ ಎನ್ನುವಾಗ ನಮ್ಮ ಕಣ್ಣೆದುರು ಬಂದು ನಿಲ್ಲುವುದು ಭಾರತದ ವೈವಿಧ್ಯಪೂರ್ಣ ಗ್ರಾಾಮಗಳು, ಅಲ್ಲಿನ ಜನ-ಅವರ ಜನಜೀವನ.

ಬದಲಾದ ಹಾಗೂ ಬದಲಾಗುತ್ತಿರುವ ಭಾರತೀಯ ಸಂದರ್ಭದಲ್ಲಿ, ಕೊಳ್ಳುಬಾಕ, ನಗರೀಕೃತ ನಾಗರೀಕತೆ, ಗ್ರಾಾಮೀಣ ಬದುಕಿಗಿಂತ ಶ್ರೇಷ್ಠವಾದುದೆಂಬ ಒಂದು ಸಿದ್ಧಾಂತ ಯುವಪೀಳಿಗೆಯನ್ನು ಅನಾವಶ್ಯಕ ಅನುಮಾನಗಳಿಗೆ ತಳ್ಳುತ್ತಿದೆ. ಇದೊಂದು ಅರೆಬೆಂದ ಚಿಂತನೆ. ಭೂತಾನದಂತಹ ರಾಷ್ಟ್ರಗಳಲ್ಲಿ ಮನುಷ್ಯನ ಸಂತೋಷ- ಸಂತೃಪ್ತಿಿಯನ್ನು ಅವನ ಅಭಿವೃದ್ಧಿ ಮಾಪನವಾಗಿ ಬಳಸಲಾಗುತ್ತಿದೆ. ಈ ತೆರನಾದ ಅಭಿವೃದ್ಧಿ ಪ್ರಕೃತಿ ಸಹ್ಯ ಗ್ರಾಾಮೀಣ ವಾತಾವರಣದಲ್ಲಷ್ಟೇ ಸಾಧ್ಯ-ಷಹರಗಳಲ್ಲಿ ಅಲ್ಲ.

ಈ ಹಿನ್ನೆಲೆಯಲ್ಲಿ ಪ್ರಸಕ್ತ ಪುಸ್ತಕವನ್ನು ರಚಿಸಲಾಗಿದೆ. ಅಂತಿಮವಾಗಿ ಅಭಿವೃದ್ಧಿ’ ಎಂಬ ಪದದ ನಿಜಾರ್ಥವೇನೆಂಬ ಪ್ರಶ್ನೆ’ ಪುಸ್ತಕದುದ್ದಕ್ಕೂ  ಕಾಡುತ್ತ ಹೋಗುತ್ತದೆ.

ಹಲವು ವರ್ಷಗಳಿಂದ ಲೇಖಕನನ್ನು ಕಾಡುತ್ತ ಬಂದ ಪ್ರಶ್ನೆ’, ಪುಸ್ತಕದ  ವಿವಿಧ  ಅಧ್ಯಾಯಗಳಲ್ಲಿ ತಲೆ ಎತ್ತಿ, ಗೊಂದಲ ಸೃಷ್ಟಿಸುತ್ತವೆ. ಸುಮಾರು ಆರು ದಶಕಗಳಿಗೂ ಹೆಚ್ಚಿನ ಗ್ರಾಾಮೀಣ ನೆಲದ ಸಂಪರ್ಕ,  ವಿಶಿಷ್ಟ ಅನುಭವಗಳು, ಅಪಾರ ಸಂದೇಶಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಗ್ರಾಮೀಣ ಬದುಕಿನ ಅನನ್ಯತೆಯನ್ನು ಅನಾವರಣಗೊಳಿಸುವ ಕಾಯಕವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.

ಐವತ್ತನೆಯ ದಶಕದ ಗ್ರಾಾಮೀಣ ಬದುಕನ್ನು, ಅಂದಗಾರಿನ ಊರು, ದೇವಸ್ಥಾಾನ, ಶಾಲೆ, ಗ್ರಾಮೀಣರು, ಅವರ ಬದುಕಿನ ಪರಿ, ಜೀವನಾನುಭವ, ಸ್ನೇಹ ಭಾವ, ಸಜ್ಜನಿಕೆ, ತೃಪ್ತ ಜೀವನ ಇನ್ನಿತರ ವಿವರಗಳೊಡನೆ ದಾಖಲಿಸಲಾಗಿದೆ. ಅದಕ್ಕೆ ಪರ್ಯಯವಾಗಿ, ಬದಲಾದ ಇಂದಿನ ಅಂದಗಾರನ್ನು (2020) ಚಿತ್ರಿಸಲಾಗಿದೆ. ಇದರ ನಡುವೆ ರಾಜ್ಯದ ಬೇರೆ ರಾಷ್ಟ್ರಗಳ ಗ್ರಾಾಮೀಣ ಬದುಕಿನ ವಿವರಗಳನ್ನು ಕೊಡಲಾಗಿದೆ. ಲೇಖಕನ ಬದುಕಿನಲ್ಲಿ ಹಾದು ಹೋದ ಗ್ರಾಮವರೇಣ್ಯರ ನೆನಪು ಈ ಪುಸ್ತಕದಲ್ಲಿದೆ. ಗಾಂಧೀಜಿ ಪ್ರಣೀತ ಪ್ರಕೃತಿಯೊಡನೆ ಸದಾ ಅನುಸಂಧಾನದಲ್ಲಿರುವ, ಸ್ನೇಹ, ಸಹೃದಯತೆ ಸದಾಚಾರ, ಸಹಬಾಳ್ವೆ, ಸಂತೃಪ್ತಿಯ ತಂಗುದಾಣಗಳಾದ ಸಹಸ್ರಾರು ಹಳ್ಳಿಗಳ ರೂಪಕವೊಂದನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ‘ಗ್ರಾಾಮ ಸಾನ್ನಿಧ್ಯ’ ಕೃತಿಯಲ್ಲಿದೆ.

300.00
• Madhavi Kathana Kavya
ಹೊಸ ಪುಸ್ತಕ

ವ್ಯಾಸ ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುವ ಒಂದು ಉಪಾಖ್ಯಾನವನ್ನಾಧರಿಸಿ ಬರೆದ ಒಂದು ಕಾವ್ಯವಿದು. ಮೂಲಕಥೆಯಲ್ಲಿ ಮಾಧವಿಯ ಶೋಷಣೆ ಎದ್ದು ಕಾಣುವುದಿಲ್ಲ. ವಿಶ್ವಾಮಿತ್ರ ಶಿಷ್ಯನಾದ ಗಾಲವನು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಹೊರಡುವಾಗ ‘ಗುರುದಕ್ಷಿಣೆಯಾಗಿ ಏನನ್ನು ಕೊಡಲಿ?’ ಎಂದು ಕೇಳುತ್ತಾನೆ. ವಿಶ್ವಾಮಿತ್ರರು ಗುರುದಕ್ಷಿಣೆ ಬೇಡವೆಂದರೂ ಕೇಳುವುದಿಲ್ಲ. ಕೊನೆಗೆ ವಿಶ್ವಾಮಿತ್ರರು, ‘ಒಂದು ಕಿವಿ ಮಾತ್ರ ಕಪ್ಪಾಗಿರುವ ಎಂಟುನೂರು ಶ್ವೇತಾಶ್ವಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಬಾ’ ಎಂದು ಹೇಳುತ್ತಾರೆ. ಆದರೆ, ಅಂಥ ವಿಶೇಷ ಗುಣದ ಕುದುರೆಗಳು ಬಹಳ ದುರ್ಲಭವಾದುವೆಂಬುದನ್ನು ಅರಿತಾಗ ಗಾಲವ ದಾನಶೂರ ಯಯಾತಿ ಮಹಾರಾಜನ ಬಳಿ ಸಹಾಯ ಬೇಡಲು ಹೋಗುತ್ತಾನೆ. ಆಗಷ್ಟೇ ದೊಡ್ಡದೊಂದು ಯಾಗ ಮುಗಿಸಿದ ಯಯಾತಿಯ ಬಳಿ ಅಶ್ವಗಳಿಲ್ಲ. ಆದರೆ, ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಯಯಾತಿ ತನ್ನ ಮಗಳು ಮಾಧವಿಯನ್ನು ಗಾಲವನ ವಶಕ್ಕೆ ಬಿಟ್ಟು ‘ರೂಪಸಿಯಾದ ಈಕೆಯನ್ನು ಬೇಕಾದ ಹಾಗೆ ಬಳಸಿಕೊಂಡು ನಿನಗೆ ಬೇಕಾದ ಅಶ್ವಗಳನ್ನು ಪಡೆ’ ಅನ್ನುತ್ತಾನೆ. ಹಾಗೆ ಗಾಲವನು ಮಾಧವಿಯನ್ನು ಮೂರು ಮಂದಿ ರಾಜರ ಬಳಿಗೆ ಕರೆದೊಯ್ದು ಅವರಿಂದ ತಲಾ ಇನ್ನೂರು ಅಶ್ವಗಳನ್ನು ಪಡೆದು ಆ ರಾಜರುಗಳಿಗೆ ಒಂದು ವರ್ಷದ ಮಟ್ಟಿಗೆ ಉಪಯೋಗಿಸಿಕೊಳ್ಳಲು ಮಾಧವಿಯನ್ನು ಒಪ್ಪಿಸುತ್ತಾನೆ. ಮೂಲ ಕಥೆಯಲ್ಲಿ ಮಾಧವಿಯ ಮನಸ್ಸಿನ ಸಂಘರ್ಷಗಳು ವ್ಯಕ್ತವಾಗಿಲ್ಲ. ‘ಪುರುಷರಿಂದ ಲೈಂಗಿಕವಾಗಿ ಎಷ್ಟು ಸಾರಿ ಬಳಸಲ್ಪಟ್ಟರೂ ನನ್ನ ಕನ್ಯತ್ವ ಉಳಿಯುವಂಥ ವರ ನÀನಗಿದೆಯಾದ್ದರಿಂದ ನಾನು ನಿ£ಗ É ಸಹಾಯ ಮಾಡಬಲ್ಲೆ’ ಎಂದು ಗಾಲವನ ಬಳಿ ಅವ¼ೀÉ ಹೇಳುತ್ತಾ¼.É ಓಎನ್‍ವಿ ಕುರುಪ್ ಬರೆದ ಈ ಕೃತಿಯಲ್ಲಿ ಅವರು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿ ಇಡೀ ಕಥೆಯನ್ನು ಪುರುಷರಿಂದ ಘೋರ ಅನ್ಯಾಯಕ್ಕೊಳಗಾಗಿ ಮಾನಸಿಕ ಯಾತನೆಯನ್ನು ಅನುಭವಿಸಿರಬಹುದಾದ ಮಾಧವಿಯ ದೃಷ್ಟಿಯಿಂದ ಬರೆಯಲಾಗಿದೆ. ಆದ್ದರಿಂದ ಇದರ ಸ್ತ್ರೀವಾದಿ ಓದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ.

ಮಲಯಾಳದ e್ಞÁನಪೀಠ ಪ್ರಶಸ್ತಿ ವಿಜೇತ ಸಾಹಿತಿ ಓಎನ್‍ವಿಕುರುಪ್ ಅವರ ‘ಸ್ವಯಂವರಂ’ ಎಂಬ ಖಂಡಕಾವ್ಯದÀ ಭಾವಾನುವಾದವಿದು. ಮಹಾಭಾರತದ `ಉದ್ಯೋಗ ಪರ್ವ’ ದಲ್ಲಿ ಬರುವ ಒಂದು ಉಪಾಖ್ಯಾನದಲ್ಲಿ ಪುರುಷ ವರ್ಗದಿಂದ ಘೋರವಾಗಿ ಶೋಷಣೆಗೊಳಗಾದ ಮಾಧವಿ ಈ ಕಥೆಯ ನಾಯಕಿಯಾಗಿದ್ದು ಇಡೀ ಕಾವ್ಯವೇ ಅವಳ ದೃಷ್ಟಿಕೋನದಿಂದ ರಚಿತವಾಗಿದ್ದರಿಂದ ಸ್ತ್ರೀವಾದಿ ಓದಿಗೆ ಒಳಪಡಿಸಲು ಅತ್ಯಂತ ಸೂಕ್ತವಾದ ಕೃತಿಯಿದು ಎಂದೆÀನ್ನಿಸಿ ಂಲ್ಥ್ಫ್ದೈ¨್ಥಕಿ ಅದರ ಶೀರ್ಷಿಕೆಯನ್ನು ‘ಮಾಧವಿ ಕಥನ ಕಾವ್ಯ’ವೆಂದು ಬದಲಾಯಿಸಿ¨್ದª್ರೀ. ಇದÀನ್ನು ಓದಿದಾಗೆಲ್ಲ ರಾಮಾಯಣದ ಸೀತೆಯ ನೆನಪಾಗುತ್ತದೆ.

195.00
• Administrative and Social History of Mysore Under the Wodeyars of Mysore (1600-1800 CE)

ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳೆಂದು ಹೆಸರಾಗಿರುವ ಮೈಸೂರಿನ ಒಡೆಯರು ಕರ್ನಾಟಕದ ಇತಿಹಾಸಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ, ಸಾಂಸ್ಕöÈತಿಕ, ಸಾಹಿತ್ಯಿಕ ಹಾಗೂ ಕಲಾರಂಗಗಳಲ್ಲೂ ಮೈಸೂರು ಅರಸರು ವಿಜಯನಗರದ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿದರು. ರಾಜಒಡೆಯರ್, ರಣಧೀರ ಕಂಠೀರವ, ಚಿಕ್ಕದೇವರಾಜ ಒಡೆಯರ್ ಅವರ ಆಳ್ವಿಕೆಯ ಕಾಲಘಟ್ಟದಲ್ಲಿ ಮೈಸೂರು ಸರ್ವಾಂಗೀಣ ಪ್ರಗತಿ ಸಾಧಿಸಿತು. ಈ ವಂಶದ ಮೊದಲ ಪ್ರಮುಖ ಅರಸು ರಾಜ ಒಡೆಯರ್‌ರಿಂದ ಆರಂಭಿಸಿ ಮೈಸೂರು ಆಂಗ್ಲರ ಅಧೀನವಾಗುವವರೆಗಿನ ಆಡಳಿತ ಹಾಗು ಸಾಮಾಜಿಕ ಇತಿಹಾಸ ಇಲ್ಲಿದೆ. ಮೈಸೂರು ಸಂಸ್ಥಾನದ ಎರಡು ಮಹತ್ವಪೂರ್ಣ ಶತಮಾನಗಳ ಕಾಲದ ಆಡಳಿತ, ಕಂದಾಯ ನೀತಿಗಳು, ನ್ಯಾಯಾಡಳಿತ, ಸೈನ್ಯ ವ್ಯವಸ್ಥೆ, ಪ್ರಾಂತೀಯ ಹಾಗೂ ಸ್ಥಳೀಯ ಆಡಳಿತ, ಸಾಮಾಜಿಕ ಜೀವನ ಹಾಗೂ ಧರ್ಮ, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಮತ್ತು ಆಸ್ಥಾನ ಸಂಸ್ಕöÈತಿ ಹೀಗೆ ಬಹುಮುಖೀ ನೆಲೆಗಳ ವಿಸ್ತಾರವಾದ, ಅಧ್ಯಯನಪೂರ್ಣ ಸಂಶೋಧನಾ ವರದಿಯಾಗಿ ಇದು ಸ್ವಾತಂತ್ರೋತ್ತರ ತಲೆಮಾರಿನ ವಿದ್ವಾಂಸರ ಸಂಶೋಧನಾ ವೈಖರಿಗೆ ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು. ಕರ್ನಾಟಕದ ಅದರಲ್ಲೂ ಮೈಸೂರಿನ ಒಡೆಯರ ಇತಿಹಾಸದ ಬಗೆಗೆ ಸಂಶೋಧನೆಗಳು ಇನ್ನೂ ಕಣ್ತೆರೆಯುತ್ತಿದ್ದ ಕಾಲದಲ್ಲಿ ಡಿ. ಎಸ್. ಅಚ್ಯುತರಾಯರ ಈ ಸಂಶೋಧನ ಕಾರ್ಯ ಮಹತ್ವಪೂರ್ಣವಾದುದು. ಅಂದಿಗೆ ಲಭ್ಯವಿದ್ದ ಎಲ್ಲಾ ಬಗೆಯ ಮೂಲ ಹಾಗೂ ಆನುಷಂಗೀಕ ಆಕರಗಳನ್ನು ಬಳಸಿಕೊಂಡು, ಸಂಶೋಧನೆಯ ಎಲ್ಲಾ ಚೌಕಟ್ಟಿನೊಳಗೆ ವಸ್ತುನಿಷ್ಠವಾಗಿ ರೂಫುಗೊಂಡಿದೆ ಈ ಕೃತಿ. ಸಾಮಾಜಿಕ ಇತಿಹಾಸವನ್ನು ಪುನರ್ ರೂಪಿಸುವಾಗಲಂತೂ ಸಮಕಾಲೀನ ಸಾಹಿತ್ಯದ ಎಲ್ಲಾ ರೂಪಗಳನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಅಗತ್ಯ ವಿರುವೆಡೆಯಲ್ಲಿ ಒಂದಕ್ಕಿAತ ಹೆಚ್ಚಿನ ಸಂಖ್ಯೆಯಲ್ಲಿನ ಉಲ್ಲೇಖಗಳು, ಟಿಪ್ಪಣಿಗಳೂ, ವಿವರಣೆಗಳೂ ಈ ಸಂಶೋಧನೆಯ ಮೌಲ್ಯವನ್ನು ಹೆಚ್ಚಿಸಿವೆ. ಸಂಶೋಧನೆಗೆ ಪೂರಕವಾಗಿ ಗ್ರಂಥಋಣ, ನಕ್ಷೆಗಳು, ಸಂಕ್ಷೇಪಾಕ್ಷರಗಳು ಹಾಗೂ ಒಡೆಯರ ವಂಶಾವಳಿ ನೀಡಲಾಗಿದೆ. ಆಧಾರಗಳ ಮೇಲಿನ ಟಿಪ್ಪಣಿಯು ಸಂಶೋಧಕರಿಗೆ ತಮ್ಮ ಕಾರ್ಯಕ್ಷೇತ್ರದ ಮೇಲಿನ ಒಡೆತನದ ದ್ಯೋತಕ. ಅಪಾರ ಸಂಖ್ಯೆಯ ಹಸ್ತಪ್ರತಿಗಳ ಮತ್ತು ಶಾಸನಗಳ ಬಳಕೆ ಈ ಕೃತಿಯ ಹೆಗ್ಗಳಿಕೆ.

600.00
• Bhagavantana Kandammagalu

ಅನುಪೂರ್ವಾ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಅಮೇರಿಕಾ ಬಿಟ್ಟು ಭಾರತಕ್ಕೆ ಬರಬೇಕಾಯಿತು. ಕಲಾಶಿಕ್ಷಕಿಯಾಗಿ ಅಲ್ಲವಳ ಜೀವನ ಸುವ್ಯವಸ್ಥಿತವಾಗಿ ಸಾಗುತ್ತಿತ್ತು. ಭಾರತಕ್ಕೆ ಹಿಂದಿರುಗಿದ ನಂತರ ಅವಳ ಬದುಕು ಆಮೂಲಾಗ್ರವಾಗಿ ಬದಲಾಯಿಸಬಹುದೆಂದು ಅವಳು ಕನಸು-ಮನಸಲ್ಲೂ ಎಣಿಸಿರಲಿಲ್ಲ. ಒಮ್ಮೆ ಅವಳ ಕಾಲೇಜಿನ ಗೆಳತಿಯೊಬ್ಬಳು ಸೆರೆಬ್ರಲ್ ಪಾಲ್ಸಿ (ಮೆದುಳಿನ ಲಕ್ವ)ಯಿಂದ ಬಳಲುತ್ತಿರುವ ಮಕ್ಕಳ ಶಾಲೆ ‘ಆಶಾಜ್ಯೋತಿ’ಯ ಪರಿಚಯ ಮಾಡಿಸಿದಳು. ಅಲ್ಲಿಯೇ ಸ್ವಲ್ಪಕಾಲ ಆರ್ಟ್ ಟೀಚರ್ ರೂಪದಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವ ಅವಕಾಶವೂ ದೊರೆಯಿತು. ಚಿತ್ರಗಳನ್ನು ಬಿಡಿಸುವುದು ಹೇಗೆ, ಅದಕ್ಕೆ ಹೇಗೆ ಬಣ್ಣ ತುಂಬಬೇಕು ಇತ್ಯಾದಿ ವಿಷಯಗಳನ್ನು ಅಲ್ಲಿಯ ಮಕ್ಕಳಿಗೆ ಹೇಳಿಕೊಡಲಾರಂಭಿಸಿದಳು. ಆದರೆ ಆ ಮಕ್ಕಳು ಅವಳಿಗರಿವಿಲ್ಲದಂತೆ ಗೆಳೆತನದ, ಪ್ರೇಮದ, ನಗುವಿನ, ಎಲ್ಲಕ್ಕಿಂತಲೂ ಮಿಗಿಲಾಗಿ ರೋಗದೊಂದಿಗೆ ಹೋರಾಡುವ ಪಾಠ ಅರ್ಥಾತ್ ಬದುಕಿನ ವಾಸ್ತವಿಕತೆಯ ಪಾಠ ಕಲಿಸಬಹುದೆಂದು ಅವಳಿಗೇನು ಗೊತ್ತಿತ್ತು! ಹೊರಜಗತ್ತು ಅವರನ್ನು ಶಾರೀರಿಕ ಅಥವಾ ಮಾನಸಿಕ ದೃಷ್ಟಿಯಿಂದ ದುರ್ಬಲರೆಂದು ತಿಳಿದುಕೊಳ್ಳಲಿ! ಆದರೆ ಅವರ ಅಂತರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಪಾರ ಕ್ಷಮತೆ ಅಡಗಿದೆ ಎಂಬುದು ಅವಳ ಅರಿವಿನ ಕ್ಷಿತಿಜವನ್ನೇ ವಿಸ್ತರಿಸಿತು. ಅನುಪೂರ್ವಾ ಮತ್ತಾರೂ ಅಲ್ಲ, ಸ್ವಯಂ ಲೇಖಕಿಯೇ! ಈ ಮಕ್ಕಳ ಅಂತರಂಗದ ಪುಟಗಳನ್ನು ಅತ್ಯಂತ ಹತ್ತಿರದಿಂದ ನೋಡಿದ್ದಾರೆ; ತಿಳಿದಿದ್ದಾರೆ; ಮತ್ತದನ್ನು ಶಬ್ದಗಳ ಮೂಲಕ ಕಾದಂಬರಿಯ ರೂಪದಲ್ಲಿ ಜೋಡಿಸಿದ್ದಾರೆ. ಈ ಒಂದು ರೋಚಕವಾದ ಕಥೆ ಒಡಿಯಾದಲ್ಲಿ ‘ದೇಬಶಿಶು’ವಾಗಿದ್ದುದು, ಅಜಯ್ ಪಟ್ನಾಯಕ್‌ರು ಅದನ್ನು ‘ದೇವಶಿಶು’ ವಾಗಿ ಹಿಂದಿಗೆ ಅನುವಾದಿಸಿದರು. ಆ ಹಿಂದಿ ಅನುವಾದವು ಜ್ಞಾನಪೀಠ ಪ್ರಕಾಶನದಿಂದ ಪ್ರಕಟಗೊಂಡಿದೆ. ಈ ಕೃತಿಯು ಬಿಕ್ರಮ್ ಕೆ. ದಾಸ್‌ರಿಂದ ‘Children of Better God’ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೂ ಅನುವಾದಗೊಂಡಿದೆ. ಇದೀಗ ‘ಭಗವಂತನ ಕಂದಮ್ಮಗಳು’ ರೂಪದಲ್ಲಿ ಕನ್ನಡದ ಓದುಗರ ಮುಂದಿದೆ.

190.00
• Inti Dvadasha Akhyana

ಸತ್ಯವತಿ ಹರಿಕೃಷ್ಣನ್ ಹಾಸ್ಯಬರವಣಿಗೆಯಲ್ಲಿ ಸುಮಾರು ಎರಡು ದಶಕಗಳಿಂದ ತನ್ನನ್ನು ತೊಡಗಿಸಿಕೊಂಡಿರುವ ಕವಯಿತ್ರಿ. ಇವರ ಹಾಸ್ಯಲೇಖನಗಳು ತರಂಗ, ತುಷಾರ, ಮಯೂರ, ಕರ್ಮವೀರದಂಥ ನಿಯತಕಾಲಿಕಗಳಲ್ಲಿ, ಉದಯವಾಣಿ, ಪ್ರಜಾವಾಣಿ ಮುಂತಾದವುಗಳಲ್ಲಿಯೂ ಪ್ರಕಟಗೊಂಡಿವೆ. 2002ರಲ್ಲಿ ಡೆಟ್ರಾಯಿಟ್ ನಲ್ಲಿ ನಡೆದ “ಅಕ್ಕ” ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಇವರ “ಗುಂಡ್ರಾಮನ ಚಿಕಿತ್ಸಾಯಣ’ ಎಂಬ ಕೃತಿ ಪ್ರಕಟವಾಗಿದೆ. ಸನ್ಮಾನ್ಯರಾದ ದೇಜಗೌ ಮತ್ತು ಜಿಟಿನಾರವರ ಸಂಪಾದಕತ್ವದಲ್ಲಿ ಪ್ರಕಟವಾದ “ಪುಸ್ತಕ ಪ್ರಪಂಚ’ದಲ್ಲಿ ಇವರ ಅನುವಾದಿತ ಲೇಖನಗಳು ಪಡಿಮೂಡಿವೆ. “ಕುಂಬಾಸ’, “ನುಗ್ಗೇಹಳ್ಳಿ ಪಂಕಜ’ವೇ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುವ ಸತ್ಯವತಿಯವರು ಈಗಾಗಲೇ ಐದು ಹಾಸ್ಯ ಸಂಕಲನಗಳನ್ನು ರಚಿಸಿದ್ದಾರೆ. ಅವರ ಆರನೆಯ ಹಾಸ್ಯ ಸಂಕಲನವೇ – “ಇಂತಿ ದ್ವಾದಶ ಆಖ್ಯಾನ’. ಹಾಸ್ಯದಲ್ಲಿ ಅಪಹಾಸ್ಯ, ತಿಳಿಹಾಸ್ಯ, ವ್ಯಂಗ್ಯ ಮುಂತಾದ ಪ್ರಭೇದಗಳಿವೆ. ವ್ಯಂಗ್ಯಮಿಶ್ರಿತವಾದ ತಿಳಿಹಾಸ್ಯ ಒಂದೇ ಕಾಲದಲ್ಲಿ ಎರಡು ಉದ್ದೇಶಗಳನ್ನು ಹೊಂದಿರುತ್ತವೆ. ಅದು ಮೇಲ್ನೋಟಕ್ಕೆ ಮನೋರಂಜನೆಯಾಗಿ ಕಂಡರೂ, ಅದರ ಇಂಗಿತ ಓದುಗರನ್ನು ಗಂಭೀರ ಚಿಂತನೆಗೆ ತೊಡಗುವಂತೆ ಮಾಡುವುದಾಗಿರುತ್ತದೆ. ವ್ಯಕ್ತಿಯನ್ನು ನೋಯಿಸದೇ ಲಘುಹಾಸ್ಯ-ವ್ಯಂಗ್ಯಗಳಿಂದ ಸ್ವವಿಮರ್ಶೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಹಾಸ್ಯದ ಕಲಾತ್ಮಕ ಪ್ರಕ್ರಿಯೆ. ಶ್ರೀಮತಿ ಸತ್ಯವತಿಯವರ ಈ ಕೃತಿಯಲ್ಲಿ ಇಂತಹ ಒಂದು ಪ್ರಯತ್ನವನ್ನು ನಾವು ಕಾಣಬಹುದು. “ಇಂತಿ ದ್ವಾದಶ ಆಖ್ಯಾನ’ದಲ್ಲಿ ಹನ್ನೆರಡು ವೈವಿಧ್ಯಮಯ ಸಣ್ಣ ಹಾಸ್ಯಲೇಖನಗಳಿವೆ. ಸತ್ಯವತಿಯವರು ನಮ್ಮ ಜೀವನದ ಸಾಮಾನ್ಯ ಘಟನೆಗಳನ್ನೇ ರಂಗುರಂಗಾಗಿ ತಿಳಿಹಾಸ್ಯದ ಮೂಲಕ ಈ ಕೃತಿಯಲ್ಲಿ ತೋರಿಸಿದ್ದಾರೆ. ಕಾಲ್ಪನಿಕ ಘಟನೆಗಳಲ್ಲಿ ಹಾಸ್ಯದ ಪಾತ್ರಗಳನ್ನು ಸೃಷ್ಟಿಸಿ, ಗಂಭೀರ ವಿಚಾರಗಳನ್ನು ಮನಮುಟ್ಟುವಂತೆ ನಿರೂಪಿಸುವ ಲೇಖಕಿಯ ಶೈಲಿಯು ಅಪೂರ್ವವಾದದ್ದು. ಪ್ರತಿ ಕತೆಯ ಶೀರ್ಷಿಕೆಯಲ್ಲೇ ಹಾಸ್ಯ ತುಂಬಿರುವ ಈ ಕೃತಿಯು ಓದುಗರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ.

120.00
• Vaidehi Dhvani

The present book is an attempt to document the voice and the narration of Vaidehi for the times to come. Her narration of stories stands tall in its richness of Kundapura dialect and also beyond that with a sense of oneness with the culture of Kannada. This book of five stories and seven poems are read by her. These select stories are already published ones but what makes it different is the way they are read. Every word, every punctuation, every pause ? seem so different in her voice. The name ?Vaidehi dhvani? is given to represent not only the tonal quality of her voice that is different but that also of her thought that generate new energy in the listener or the reader. The audio CD is also accompanied by a book in text form basically to facilitate those who want to study her stories. There are many students in different universities who take them as a matter of study.

275.00
• Saamajika Samanvayada Harikara – Kanaka Dasaru

ಕನಕದಾಸರ ಜೀವನವೇ ಸಮನ್ವಯತೆಯ ಪ್ರತಿಬಿಂಬವಾಗಿತ್ತು. ಹುಟ್ಟಿದ್ದು ಕುರುಬರ ಮನೆತನದಲ್ಲಿ; ಬೆಳೆದದ್ದು ಸಂಸಾರದ ಜಂಜಾಟದ ರಾಜಕೀಯ ಪರಿಸರದಲ್ಲಿ; ಜೀವನದ ಕೊನೆ ಕೊನೆಗೆ ಒಡನಾಟವನ್ನಿಟ್ಟುಕೊಂಡದ್ದು ಬ್ರಾಹ್ಮಣರ ಪರಿಸರದಲ್ಲಿ, ಅಂತಿಮವಾಗಿದ್ದದ್ದು ದಾಸಭಾವದ ನೆಲೆಗಟ್ಟಿನಲ್ಲಿ. ಹೀಗಾಗಿ, ಅವರು ಒಂದು ನೆಲೆಯಲ್ಲಿ ತಮ್ಮ ಸಮಗ್ರ ಜೀವನವನ್ನು ನಡೆಸಲಿಲ್ಲ. ಆದರೆ, ಅವರಿಗಿದ್ದುದು ಸಾಧಕನ ನೆಲೆ. ಹುಟ್ಟಿದ್ದು ಬೆಳೆದಿದ್ದು ನಾಯಕನ ಕುಲದಲ್ಲಿ, ಜೀವನದ ಹರೆಯ ಹಾಗೂ ಕೊನೆಯ ಕಾಲದಲ್ಲಿ ದೇವರ ದಾಸನಾಗುವ ಲವಲವಿಕೆಯನ್ನು ಬೆಳೆಸಿಕೊಂಡಿದ್ದು; ದ್ವೇಷ, ಕ್ರೌರ್ಯಗಳ ದಟ್ಟಿ ನಿಂದ ಭಕ್ತಿಯ ಮೆಟ್ಟಿಲುಗಳೆಡೆಗೆ ಸಾಗಿದ್ದು. ಹೀಗೆ ಕನಕದಾಸರ ಜೀವನವು ಪರಸ್ಪರ ವಿರೋಧಗಳ ಬೀಡಾಗಿದ್ದರೂ ಅಂತರಂಗದಲ್ಲಿ ಅದು ಸಮನ್ವಯತೆಯ ನೆಲೆಯನ್ನು ಮೈಗೂಡಿಸಿ ಕೊಂಡಿತ್ತು. ಕನಕದಾಸರು ಸಮಗ್ರವಾದ ಸಮನ್ವಯ ದೃಷ್ಟಿಯ ಹರಿಕಾರರೆನಿಸಿದರು.

285.00