Puttakkana Highway
₹350.00
ಪುಸ್ತಕವು ಮೂಲ ಕಥೆಯಿಂದ ಪ್ರಶಸ್ತಿ ವಿಜೇತ ದೃಶ್ಯ ಚಿಕಿತ್ಸೆಯಾಗಿ ಪರಿವರ್ತನೆಗೊಂಡ ಪ್ರಯಾಣದ ಬಗ್ಗೆ ಹೇಳುತ್ತದೆ ಮತ್ತು ನಂತರ ಸ್ಕ್ರಿಪ್ಟ್, ವಿಮರ್ಶೆಗಳು ಮತ್ತು ಚರ್ಚೆಗಳೊಂದಿಗೆ ಪದ ರೂಪಕ್ಕೆ ತಿರುಗುತ್ತದೆ. ಸಂಶೋಧಕರಿಗೆ, ಇದು ಪದಗಳಿಂದ ಸ್ಕ್ರಿಪ್ಟ್ಗೆ ದೃಶ್ಯಗಳಿಗೆ ಮತ್ತು ಪದಗಳಿಗೆ ಹಿಂತಿರುಗುವ ಪ್ರಯಾಣದ ಕಲಿಕೆಯ ಅನುಭವವನ್ನು ನೀಡುತ್ತದೆ. ಚಲನಚಿತ್ರ ರಸಿಕರಿಗೆ ಇದು ಕಥೆಯು ಚಲನಚಿತ್ರವಾಗಿ ಹೇಗೆ ಹೊರಹೊಮ್ಮುತ್ತದೆ ಎಂಬುದರ ರಿಂಗ್ಸೈಡ್ ನೋಟವನ್ನು ನೀಡುತ್ತದೆ. ಅರ್ಥಶಾಸ್ತ್ರಜ್ಞರು ಮತ್ತು ಮಾನವ ಕಾರ್ಯಕರ್ತರಿಗೆ, ಇದು ಅಭಿವೃದ್ಧಿಯ ಸಮಸ್ಯೆಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಈ ಪುಸ್ತಕದಲ್ಲಿ “ಪುಟ್ಟಕ್ಕನ ಹೈವೇ” ಚಲನಚಿತ್ರದ ಚಿತ್ರಕಥೆ ಮಾತ್ರವೇ ಅಲ್ಲದೆ , ಚಿತ್ರದ ಕುರಿತಂತೆ ಬಂದ ವಿಮರ್ಶೆಗಳು, ಚಿತ್ರವನ್ನು ಕುರಿತಂತೆ ನಡೆದ ಸಂವಾದದ ವಿವರಗಳು, ಚಿತ್ರದ ಡಿವಿಡಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ಮೂಲಕಥೆ “ಪುಟ್ಟಕ್ಕನ ಮೆಡಿಕಲ್ ಕಾಲೇಜ್” ಸಹ ಇದೆ.
Interested readers may write to us at mup@manipal.edu about purchasing the book.
Related products
-
Sangeetha Lokadrishti
Author: Sumangala
ತಂದೆ-ಮಗಳ ಸುರಬಹಾರಿನ ಸಂಗೀತಬಂಧದ ಚಿತ್ರಣದಿಂದ ಆರಂಭಗೊಳ್ಳುವ ಈ ಕಿರುಕೃತಿಯು ಸಾಗರ ವೀಣೆ ರೂಪುಗೊಳಿಸಿದ ಇನ್ನೊಂದು ತಂದೆ-ಮಗಳ ಸಂಗೀತಬಂಧದ ಚಿತ್ರಣದೊಂದಿಗೆ ಮುಕ್ತಾಯವಾಗುತ್ತದೆ. ಇಲ್ಲಿ ನಾಲ್ವರು ಸಂಗೀತಗಾರರ ಬದುಕಿನ ಕೆಲವು ಸನ್ನಿವೇಶಗಳು, ಸಂಗೀತಪಯಣದಲ್ಲಿ ಅವರು ಸಾಗಿದ ಹಾದಿ, ಕಠಿಣ ಸಂದರ್ಭಗಳು, ಅವರ ಸಾಂಗೀತಿಕ ಮನೋಧರ್ಮ, ರಾಗರೂಪದ ಕುರಿತ ದೃಷ್ಟಿಕೋನ, ಇತ್ಯಾದಿ ಅಂಶಗಳ ಸ್ಥೂಲ ಚಿತ್ರಣವಿದೆ.
ಸುರಬಹಾರಿನ ದಂತಕಥೆಯೆಂದೇ ಹೇಳಬಹುದಾದ ವಿದುಷಿ ಅನ್ನಪೂರ್ಣಾ ದೇವಿಯವರ ಖಾಸಗಿ ಬದುಕು, ಏಕಾಂತ ನಿಗೂಢವೆನ್ನಿಸುವ ಹಾಗೆಯೇ ಮೈಹರ್ ಘರಾನೆಯ ಸ್ವರಸಂಪತ್ತನ್ನು ಶಿಷ್ಯರಿಗೆ ಧಾರೆಯೆರೆದು ಕಲಿಸುತ್ತ, ಹಲವರನ್ನು ಮೇರು ಕಲಾವಿದರಾಗಿ ರೂಪುಗೊಳಿಸಿದ ಬಗೆಯೂ ಅನನ್ಯ. ಕೃತಿಯಲ್ಲಿ ಚಿತ್ರಿಸಿದ ಇನ್ನುಳಿದ ಮೂವರು ಸಂಗೀತಗಾರರು ನಮ್ಮ ನೆರೆಯ ಪಾಕಿಸ್ತಾನದ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಇನ್ನಷ್ಟು ಸಮೃದ್ಧಗೊಳಿಸಿದವರು.
“ಏ ದಯ್ಯಾ… ಕಹಾಂ ಗಯೇ ವೇ ಲೋಗ್… ಬ್ರಿಜ ಕೆ ಬಸಯ್ಯಾ…”
ಮನುಷ್ಯರ ನಡುವೆ ಹತ್ತುಹಲವು ಬಗೆಯ ದ್ವೇಷದ ಗೋಡೆಗಳು ಎದ್ದು ನಿಂತಿರುವ ಇಂದಿನ ದಿನಮಾನದಲ್ಲಿ ಭಿನ್ನತೆಗಳಿದ್ದರೂ ಪರಸ್ಪರ ಸಂವಾದ ನಡೆಸುತ್ತಿದ್ದ ಆ ಜನರನ್ನು, ಆ ಕಾಲಘಟ್ಟವನ್ನು ಮತ್ತೆ ಕಂಡುಕೊಳ್ಳಲು ಬಹುಶಃ ಇಂತಹ ಸಂಗೀತಗಾರರ ಕೊರಳೊಳಗಿನ, ಬೆರಳೊಳಗಿನ ಸ್ವರಗಳೇ ನಮ್ಮ ಕೈಹಿಡಿದು ಮುನ್ನಡೆಸಬೇಕಿದೆ.
Interested readers may write to us at mup@manipal.edu about purchasing the book.
-
Kempu Kanagile and Chitra
Author: Rabindranath Tagore, Translator: Sudha Adukkala
ಕೆಂಪು ಕಣಗಿಲೆ: ಅದೆಂಥ ಗಾಢಾಂಧಕಾರವೇ ಇರಲಿ, ಪುಟ್ಟ ಹಣತೆಯೊಂದು ಅದನ್ನು ತೊಡೆಯಬಲ್ಲುದೆಂಬುದು ಸಾರ್ವಕಾಲಿಕ ಸತ್ಯ. ಅಂಥದೊAದು ಸಂಘರ್ಷದ ಕಥನವನ್ನು ಗುರುದೇವ ರವೀಂದ್ರರು ತಮ್ಮ ಈ ನಾಟಕದಲ್ಲಿ ಹೇಳಿದ್ದಾರೆ. ‘ಕೆಂಪು ಕಣಗಿಲೆ’ ತೆರೆದಿಡುವ ಕೌರ್ಯದ ಜಗತ್ತು ಇಂದು ಈ ಕಾಲಘಟ್ಟದಲ್ಲಿ ನಿಂತು ಬರೆದರೇನೋ ಎಂಬಷ್ಟು ತಾಜಾ ಆಗಿದೆ. ಇಲ್ಲಿಯ ರಂಜನ ಕೇವಲ ಒಂದು ಪಾತ್ರವಲ್ಲ; ನಾವೆಲ್ಲರೂ ನಮ್ಮೊಳಗೆ ತುಂಬಿಸಿಕೊಳ್ಳಬೇಕಾದ ಜೀವನ ಪ್ರೀತಿಯ ವಿವಿಧ ಆಯಾಮಗಳ ಪ್ರತಿನಿಧಿ. ಇಲ್ಲಿಯ ನಂದಿನಿ ಇಂದು ಜಗವ ಸಂತೈಸಬೇಕಾದ ತಾಯಿಹೃದಯದ ಪ್ರತೀಕವಾಗಿದ್ದಾಳೆ.
ಚಿತ್ರಾ: ಪೌರಾಣಿಕ ಕಥಾನಕವೊಂದರ ಪುನರ್ಲೇಖನದ ಈ ನಾಟಕವು ಹೆಣ್ಣು ಮತ್ತು ರಾಷ್ಟçವನ್ನು ಒಂದು ಸಂಕಥನವನ್ನಾಗಿ ಚರ್ಚಿಸುತ್ತದೆ. ಹೆಣ್ಣು-ಗಂಡಿನ ಘನತೆಯ ಬದುಕನ್ನು ಕನಸುವ ನಿರೂಪಣೆ ನಾವು ಕಟ್ಟಬೇಕಾಗಿರುವ ರಾಷ್ಟçದ ರೂಪುರೇಷೆಗಳನ್ನೂ ತನ್ನೊಳಗೆ ಆಡಕ ಮಾಡಿಕೊಂಡಿದೆ. ನಮ್ಮ ಅನನ್ಯತೆಯನ್ನು ಉಳಿಸಿಕೊಳ್ಳುತ್ತಲೇ ಇನ್ನೊಬ್ಬರೊಂದಿಗೆ ಸಹಬಾಳ್ವೆಯನ್ನು ನಡೆಸುವ ಬಗೆಯನ್ನು ಮಂಡಿಸುತ್ತದೆ. ತಾನು ಆರೋಪಿಸಿಕೊಂಡ ಕೃತಕ ತೆರೆಯನ್ನು ಸರಿಸುವ ಚಿತ್ರಾ ನಮ್ಮೊಳಗಿನ ಅರಿವಿಗೆ ತೊಡಕಾಗಿರುವ ಸಂಕುಚಿತತೆಯ ಪರದೆಯನ್ನೂ ಸರಿಸುತ್ತಾಳೆ.
Interested overseas readers may write to us at mup@manipal.edu about purchasing the book. -
Chandrayana
Author: Parvathi Pitagi
`ಚಂದ್ರಯಾನ’ ಒಂದು ಅಪೂರ್ವ ಮಾದರಿಯ ಕಾದಂಬರಿ. ಇದರಲ್ಲಿ ಫ್ಯಾಂಟಸಿ ಇದೆ, ಸಾಮಾಜಿಕತೆ ಇದೆ, ಸ್ತ್ರೀಪರ ಚಿಂತನೆ ಇದೆ, ರಾಜಕೀಯ ಇದೆ, ಎಲ್ಲವೂ ಇವೆೆ. ಇದರ ನಿರೂಪಣೆಯಲ್ಲಿಯೂ ಸರಳತೆ ಇದೆ, ಲಾಲಿತ್ಯ ಇದೆ. ಉತ್ತರಕರ್ನಾಟಕದ ಭಾಷಿಕ ಸೊಗಡು ಈ ಕಾದಂಬರಿಯನ್ನು ಅನನ್ಯವಾಗಿಸಿದೆ. ಇದನ್ನು ಓದುವುದೆಂದರೆ ರೋಚಕ ಲೋಕದಲ್ಲಿ ವಿಹರಿಸಿದಂತೆ.
ಕಥಾನಾಯಕಿ ರೋಹಿಣಿ ಚಿಕ್ಕಂದಿನಿAದಲೂ ಆಗಸ, ಆಕಾಶಕಾಯಗಳ ಬಗ್ಗೆ ಸಾಕಷ್ಟು ಕೌತುಕ ಹೊಂದಿರುತ್ತಾಳೆ. ಅದೇ ರೀತಿ ತಾನು ಬೆಳೆದಂತೆಲ್ಲ ಆಸಕ್ತಿ ಯನ್ನು ಬೆಳೆಸಿಕೊಳ್ಳುತ್ತಾ ಮುಂದೊAದು ದಿನ ಗಗನ ಯಾತ್ರೆ ಕೈಗೊಳ್ಳುವ ಕನಸುಹೊತ್ತು ಆ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ ತನ್ನ ಓದನ್ನು ಮುಂದುವರೆಸುತ್ತಾಳೆ. ಆಕೆಯ ಬಾಲ್ಯದ ಗೆಳೆಯ ಚಂದ್ರಶೇಖರ ಹುಟ್ಟುರಾಜಕಾರಣಿ. ಚಿಕ್ಕಂದಿನಿAದಲೇ ಆಕೆಯನ್ನು ಬಯಸುತ್ತಿದ್ದ. ಆತ ಬೆಳೆದ ನಂತರ ಆಕೆಯನ್ನು ಮದುವೆಯಾಗಲು ಇಷ್ಟಪಡುತ್ತಾನೆ. ಆಕೆ ಗಗನ ಯಾತ್ರೆಗೆ ಆಯ್ಕೆಯಾದಲ್ಲಿ ತನಗೆ ದಕ್ಕುವುದಿಲ್ಲವೆಂದು ಮಂತ್ರಿಯಾದ ಆತ ಅಡ್ಡಗಾಲು ಹಾಕುತ್ತಾನೆ.ಎಲ್ಲ ಅಡೆತಡೆಗಳನ್ನು ಮೀರಿ ರೋಹಿಣಿ ಕೊನೆಗೂ ಯಶಸ್ವಿಯಾಗಿ ಉಪಗ್ರಹದ ಮೇಲಿಂದ ಸುಂದರ ಭಾರತವನ್ನು ಕಂಡು `ಸಾರೆ ಜಹಾಂಸೆ ಅಚ್ಛಾ’ ಎಂದು ಉದ್ಗರಿಸುತ್ತಾಳೆ.ಅದು ಇಡೀ ಕಾದಂಬರಿಯ ಭರತವಾಕ್ಯವೂ ಹೌದು.
Interested overseas readers may write to us at mup@manipal.edu about purchasing the book.
-
Bhagavantana Kandammagalu
Author: Susmita Bagchi, Translator: Madhavi S Bhandary
ಅನುಪೂರ್ವಾ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಅಮೇರಿಕಾ ಬಿಟ್ಟು ಭಾರತಕ್ಕೆ ಬರಬೇಕಾಯಿತು. ಕಲಾಶಿಕ್ಷಕಿಯಾಗಿ ಅಲ್ಲವಳ ಜೀವನ ಸುವ್ಯವಸ್ಥಿತವಾಗಿ ಸಾಗುತ್ತಿತ್ತು. ಭಾರತಕ್ಕೆ ಹಿಂದಿರುಗಿದ ನಂತರ ಅವಳ ಬದುಕು ಆಮೂಲಾಗ್ರವಾಗಿ ಬದಲಾಯಿಸಬಹುದೆಂದು ಅವಳು ಕನಸು-ಮನಸಲ್ಲೂ ಎಣಿಸಿರಲಿಲ್ಲ. ಒಮ್ಮೆ ಅವಳ ಕಾಲೇಜಿನ ಗೆಳತಿಯೊಬ್ಬಳು ಸೆರೆಬ್ರಲ್ ಪಾಲ್ಸಿ (ಮೆದುಳಿನ ಲಕ್ವ)ಯಿಂದ ಬಳಲುತ್ತಿರುವ ಮಕ್ಕಳ ಶಾಲೆ ‘ಆಶಾಜ್ಯೋತಿ’ಯ ಪರಿಚಯ ಮಾಡಿಸಿದಳು. ಅಲ್ಲಿಯೇ ಸ್ವಲ್ಪಕಾಲ ಆರ್ಟ್ ಟೀಚರ್ ರೂಪದಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವ ಅವಕಾಶವೂ ದೊರೆಯಿತು. ಚಿತ್ರಗಳನ್ನು ಬಿಡಿಸುವುದು ಹೇಗೆ, ಅದಕ್ಕೆ ಹೇಗೆ ಬಣ್ಣ ತುಂಬಬೇಕು ಇತ್ಯಾದಿ ವಿಷಯಗಳನ್ನು ಅಲ್ಲಿಯ ಮಕ್ಕಳಿಗೆ ಹೇಳಿಕೊಡಲಾರಂಭಿಸಿದಳು. ಆದರೆ ಆ ಮಕ್ಕಳು ಅವಳಿಗರಿವಿಲ್ಲದಂತೆ ಗೆಳೆತನದ, ಪ್ರೇಮದ, ನಗುವಿನ, ಎಲ್ಲಕ್ಕಿಂತಲೂ ಮಿಗಿಲಾಗಿ ರೋಗದೊಂದಿಗೆ ಹೋರಾಡುವ ಪಾಠ ಅರ್ಥಾತ್ ಬದುಕಿನ ವಾಸ್ತವಿಕತೆಯ ಪಾಠ ಕಲಿಸಬಹುದೆಂದು ಅವಳಿಗೇನು ಗೊತ್ತಿತ್ತು! ಹೊರಜಗತ್ತು ಅವರನ್ನು ಶಾರೀರಿಕ ಅಥವಾ ಮಾನಸಿಕ ದೃಷ್ಟಿಯಿಂದ ದುರ್ಬಲರೆಂದು ತಿಳಿದುಕೊಳ್ಳಲಿ! ಆದರೆ ಅವರ ಅಂತರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಪಾರ ಕ್ಷಮತೆ ಅಡಗಿದೆ ಎಂಬುದು ಅವಳ ಅರಿವಿನ ಕ್ಷಿತಿಜವನ್ನೇ ವಿಸ್ತರಿಸಿತು. ಅನುಪೂರ್ವಾ ಮತ್ತಾರೂ ಅಲ್ಲ, ಸ್ವಯಂ ಲೇಖಕಿಯೇ! ಈ ಮಕ್ಕಳ ಅಂತರಂಗದ ಪುಟಗಳನ್ನು ಅತ್ಯಂತ ಹತ್ತಿರದಿಂದ ನೋಡಿದ್ದಾರೆ; ತಿಳಿದಿದ್ದಾರೆ; ಮತ್ತದನ್ನು ಶಬ್ದಗಳ ಮೂಲಕ ಕಾದಂಬರಿಯ ರೂಪದಲ್ಲಿ ಜೋಡಿಸಿದ್ದಾರೆ. ಈ ಒಂದು ರೋಚಕವಾದ ಕಥೆ ಒಡಿಯಾದಲ್ಲಿ ‘ದೇಬಶಿಶು’ವಾಗಿದ್ದುದು, ಅಜಯ್ ಪಟ್ನಾಯಕ್ರು ಅದನ್ನು ‘ದೇವಶಿಶು’ ವಾಗಿ ಹಿಂದಿಗೆ ಅನುವಾದಿಸಿದರು. ಆ ಹಿಂದಿ ಅನುವಾದವು ಜ್ಞಾನಪೀಠ ಪ್ರಕಾಶನದಿಂದ ಪ್ರಕಟಗೊಂಡಿದೆ. ಈ ಕೃತಿಯು ಬಿಕ್ರಮ್ ಕೆ. ದಾಸ್ರಿಂದ ‘Children of Better God’ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೂ ಅನುವಾದಗೊಂಡಿದೆ. ಇದೀಗ ‘ಭಗವಂತನ ಕಂದಮ್ಮಗಳು’ ರೂಪದಲ್ಲಿ ಕನ್ನಡದ ಓದುಗರ ಮುಂದಿದೆ.
Interested customers may write to us at mup@manipal.edu about purchasing the book.
Also available on
-
Bhashantara Jijnase, Pratyakshike
Author: N T Bhat
“ಭಾಷಾಂತರವೆಂದರೆ ಎರಡು ಭಾಷಿಕರ ನಡುವೆ ಸಂವಹನವನ್ನು ಏರ್ಪಡಿಸುವ ಕಾರ್ಯವಿಧಾನ. ಒಂದು ಭಾಷೆಯಲ್ಲಿ ಕಥಿಸಿದ್ದನ್ನು, ವಿವರಿಸಿದ್ದನ್ನು, ಸಂಭಾಷಿಸಿದ್ದನ್ನು, ಭಾವನೆಗಳನ್ನು ವ್ಯಕ್ತಪಡಿಸಿದ್ದನ್ನು, ವಿಶ್ಲೇಷಿಸಿದ್ದನ್ನು, ವರ್ಣಿಸಿದ್ದನ್ನು, ವಾದಿಸಿದ್ದನ್ನು ಅದಕ್ಕನುಗುಣವಾಗಿ ಇನ್ನೊಂದು ಭಾಷೆಗೆ ಪರಿವರ್ತಿಸುವುದು ಭಾಷಾಂತರವೆಂಬ ಪ್ರಕ್ರಿಯೆ. ಒಂದು ಭಾಷೆಯಲ್ಲಿರುವ ಭಾವಲಹರಿ, ವಿಚಾರಧಾರೆಗಳನ್ನು ಇನ್ನೊಂದು ಭಾಷೆಗೆ ಸ್ಥಳಾಂತರಮಾಡುವುದು ಭಾಷಾಂತರವೆಂದು ಸ್ಥೂಲವಾಗಿ ತಿಳಿದುಕೊಳ್ಳಬಹುದು.”
“ಪ್ರಪಂಚದ ಒಂದು ಮೂಲೆಯಲ್ಲಿ ಕಂಡುಕೊಂಡ ಹೊಸ ಸಿದ್ಧಾಂತಗಳು, ಆವಿಷ್ಕಾರಗಳು ಇನ್ನೊಂದು ಮೂಲೆಯ ಇನ್ನೊಂದು ಭಾಷೆಯನ್ನಾಡುವ ಜನರಿಗೆ ತಲುಪಿದಾಗ ಅವುಗಳ ಪ್ರಯೋಜನವನ್ನು ಪಡೆಯುವ ಜನರ ಸಂಖ್ಯೆ ಸ್ವಾಭಾವಿಕವಾಗಿಯೇ ಹೆಚ್ಚುತ್ತದೆ. ಪ್ರಪಂಚದಲ್ಲಿ ಹೆಚ್ಚು ಭಾಷೆಗಳನ್ನು ಕಲಿಸಿದಷ್ಟೂ ಭಾಷಾಂತರದ ಅಗತ್ಯ ಕೆಲವು ಸ್ತರಗಳಲ್ಲಿ ಕಡಿಮೆಯಾದೀತು. ಆದರೆ, ಅದರಿಂದಾಗಿ ಭಾಷಾಂತರಗಳಿಗೆ ಅವಕಾಶ ಹೆಚ್ಚುತ್ತಾ ಹೋಗುತ್ತದೆ.’’
– ನೀರ್ಕಜೆ ತಿರುಮಲೇಶ್ವರ ಭಟ್
Interested customers may write to us at mup@manipal.edu about purchasing the book.
Also available on
-
Ati Sannakathe: Swarupa, Siddhi Mattu Sadhyate
Author: T P Ashoka Translator: Prakash Nayak
ಕಲ್ಪನೆ ಎಂಬುದು ಸತ್ಯಕ್ಕಿಂತ ಹೆಚ್ಚು ಸತ್ಯ, ಕನಸು ಎಂಬುದು ವಾಸ್ತವಕ್ಕಿಂತ ಹೆಚ್ಚು ವಾಸ್ತವ ಎಂಬುದು ಅತಿ ಸಣ್ಣಕತೆಗಳು ನಮಗೆ ಮನದಟ್ಟು ಮಾಡಿಕೊಡುವಂತೆ ಕಾಣುತ್ತವೆ. ಹೆಚ್ಚಿನ ಅತಿ ಸಣ್ಣಕತೆಗಳು ವಾಸ್ತವವಾದೀ ಮಾರ್ಗವನ್ನು ಬಿಟ್ಟುಕೊಟ್ಟಿರುವುದಕ್ಕೆ ಪ್ರಾಯಶಃ ಇದೇ ಕಾರಣ. ವಿವರಣೆ-ವರ್ಣನೆಗಳ ಹಂಗು ಇಲ್ಲದಿರುವುದರಿಂದ ಸಂಕ್ಷಿಪ್ತತೆ ಮತ್ತು ಸಾಂದ್ರತೆಗಳು ಇವುಗಳ ಸಹಜ ಲಕ್ಷಣಗಳಾಗಿವೆ. ಅಂತರಂಗದ ಆಳವನ್ನು, ಅಮೂರ್ತವನ್ನು, ಸಾಂಕೇತಿಕವಾದುದದ್ದನ್ನು ಮತ್ತೊಂದೇ ಸ್ತರದಲ್ಲಿ ಗ್ರಹಿಸಿ ಅಭಿವ್ಯಕ್ತಿಸಲು ಲೇಖಕರಿಗೆ ಈ ಪ್ರಕಾರ ಹೇಳಿ ಮಾಡಿಸಿದಂತಿದೆ. ಹಾಗಾಗಿ ಜಗತ್ತಿನ ಎಲ್ಲ ಭಾಷೆಗಳ ದೊಡ್ಡ ಲೇಖಕರು, ದೀರ್ಘವಾದ ಕತೆ-ಕಾದಂಬರಿಗಳನ್ನು ಬರೆದವರನ್ನೂ ಸೇರಿಸಿಕೊಂಡು, ಈ ಪ್ರಕಾರದಲ್ಲಿ ಕೃಷಿಮಾಡಿದ್ದಾರೆ. ತುಂಬ ಸೂಕ್ಷ್ಮವಾದ, ನಾಜೂಕಾದ ಸಂಗತಿಗಳನ್ನು ಸೂಚ್ಯವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಇನ್ನೂ ಕೆಲವು ವೇಳೆ ಮುಚ್ಚಿಟ್ಟು ಹೇಳಲು ಈ ಪ್ರಕಾರವು ತನ್ನ ಸ್ವರೂಪದ ಕಾರಣದಿಂದಲೇ ಅನುವು ಮಾಡಿಕೊಡುತ್ತದೆ. ಇದು ಆಧುನಿಕ ಪೂರ್ವದ ದಂತಕತೆ, ನೀತಿಕತೆ, ದೃಷ್ಟಾಂತ ಕತೆಗಳ ಆಧುನಿಕ ರೂಪವಾಗಿ ಕಂಡರೂ ಆಶ್ಚರ್ಯವಿಲ್ಲ.
Also available on
eBook available on
-
Vaidehi Dhvani
Author: Vaidehi
ಪ್ರಸ್ತುತ ಪುಸ್ತಕವು ಮುಂದಿನ ಕಾಲಕ್ಕೆ ವೈದೇಹಿಯವರ ಧ್ವನಿ ಮತ್ತು ನಿರೂಪಣೆಯನ್ನು ದಾಖಲಿಸುವ ಪ್ರಯತ್ನವಾಗಿದೆ. ಅವರ ಕಥೆಗಳ ನಿರೂಪಣೆಯು ಕುಂದಾಪುರದ ಆಡುಭಾಷೆಯ ಶ್ರೀಮಂತಿಕೆಯಲ್ಲಿ ಮತ್ತು ಅದರಾಚೆಗೆ ಕನ್ನಡದ ಸಂಸ್ಕೃತಿಯೊಂದಿಗೆ ಏಕತೆಯ ಭಾವನೆಯೊಂದಿಗೆ ಎತ್ತರದಲ್ಲಿದೆ. ಐದು ಕಥೆಗಳು ಮತ್ತು ಏಳು ಕವಿತೆಗಳ ಈ ಪುಸ್ತಕವನ್ನು ಅವರು ಓದಿದ್ದಾರೆ. ಈ ಆಯ್ದ ಕಥೆಗಳು ಈಗಾಗಲೇ ಪ್ರಕಟವಾದವುಗಳಾಗಿವೆ ಆದರೆ ಅದನ್ನು ವಿಭಿನ್ನವಾಗಿಸುವುದು ಅವುಗಳನ್ನು ಓದುವ ವಿಧಾನವಾಗಿದೆ. ಪ್ರತಿ ಪದ, ಪ್ರತಿ ವಿರಾಮಚಿಹ್ನೆ, ಪ್ರತಿ ವಿರಾಮ, ಅವರ ಧ್ವನಿಯಲ್ಲಿ ತುಂಬಾ ವಿಭಿನ್ನವಾಗಿದೆ. “ವೈದೇಹಿ ಧ್ವನಿ” ಎಂಬ ಹೆಸರನ್ನು ಅವರ ಧ್ವನಿಯ ನಾದದ ಗುಣಮಟ್ಟವನ್ನು ಪ್ರತಿನಿಧಿಸಲು ನೀಡಲಾಗಿದೆ ಆದರೆ ಅದು ಕೇಳುಗ ಅಥವಾ ಓದುಗನಲ್ಲಿ ಹೊಸ ಶಕ್ತಿಯನ್ನು ಹುಟ್ಟುಹಾಕುತ್ತದೆ. ಆಕೆಯ ಕಥೆಗಳನ್ನು ಅಧ್ಯಯನ ಮಾಡಲು ಬಯಸುವವರಿಗೆ ಅನುಕೂಲವಾಗುವಂತೆ ಆಡಿಯೋ ಸಿಡಿಯು ಪಠ್ಯ ರೂಪದಲ್ಲಿ ಪುಸ್ತಕವನ್ನು ಸಹ ಹೊಂದಿದೆ. ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅನೇಕ ವಿದ್ಯಾರ್ಥಿಗಳು ಅಧ್ಯಯನದ ವಿಷಯವಾಗಿ ತೆಗೆದುಕೊಳ್ಳುತ್ತಾರೆ.
Interested readers may write to us at mup@manipal.edu about purchasing the book.
Also available on