ರಾಸೀನ್‍ನ ಫೀದ್ರಾ ನಾಟಕವು ಪಾಶ್ಚಿಮಾತ್ಯ ನಾಟಕ ಸಾಹಿತ್ಯದಲ್ಲೇ ಒಂದು ಆಯಕಟ್ಟಿನ ಕೃತಿ. ಗ್ರೀಕ್ ಮತ್ತು ಎಲಿಜಬೆಥನ್ ನಾಟಕಗಳಲ್ಲಿ ಕಾಣಸಿಗದ ಹೊಸ ಬಗೆಯ ಮನೋಲೋಕವೊಂದನ್ನು ತನ್ನ ಪಾತ್ರಗಳಿಗೆ ಧಾರಣೆ ಮಾಡಿಸಿದ ಈ ನಾಟಕವು ಆ ಮೂಲಕವೇ ಈ ಪರಂಪರೆಯಲ್ಲಿ ಮನೋವಿಜ್ಞಾನಕ್ಕೆ ಒಂದು ಖಾಯಂ ಸ್ಥಾನವನ್ನು ಒದಗಿಸಿಕೊಟ್ಟಿತು. ಮುಂದೆ ಬಹುತೇಕ ಪಾಶ್ಚಿಮಾತ್ಯ ನಾಟಕಗಳು ಈ ಪರಂಪರೆಯನ್ನು ಮುಂದುವರಿಸಿದವು; ರಂಗಭೂಮಿಯಲ್ಲೂ ಮನೋಲೋಕವನ್ನು ಮುಂದಕ್ಕೆ ತರುವ ವಿಭಿನ್ನ ಪ್ರಯೋಗಗಳಿಗೆ ಈ ಪರಂಪರೆಯು ಚಾಲ್ತಿ ನೀಡಿತು. ಈ ಸಂಪ್ರದಾಯಕ್ಕೆ ವಿರೋಧಿಯಾದ ಫ್ರಾನ್ಸಿನ ಪ್ರಸಿದ್ಧ ರಂಗಕರ್ಮಿ ಆಂತೋನಿನ್ ಆರ್ತೋನ ಮಾತುಗಳನ್ನು ಕೇಳುವುದಾದರೆ, ಪಾಶ್ಚಿಮಾತ್ಯ ರಂಗಭೂಮಿಯಲ್ಲಿ ‘ಸೈಕಾಲಜಿಯ ದುರ್ಬೀಜ’ ಬಿತ್ತಿದ ಕೃತಿ ಇದು! ಹಾಗಿರುವುದರಿಂದ, ನಾವು ಈ ನಾಟಕವನ್ನು ಹೇಗೇ ಓದಲಿ, ಓದದೆ ಇದ್ದರೆ ಅಷ್ಟರ ಮಟ್ಟಿಗೆ ಪಾಶ್ಚಾತ್ಯ ನಾಟಕ ಸಂಪ್ರದಾಯದ ಅರಿವು ಅಪೂರ್ಣ. ಅಂಥ ಪ್ರಮುಖ ನಾಟಕವೊಂದು ಇನ್ನೂ ಕನ್ನಡಕ್ಕೆ ಬಾರದೆ ಉಳಿದಿತ್ತು; ಆ ಲೋಪವನ್ನು ಈ ಅನುವಾದವು ಸಮರ್ಥವಾಗಿಯೇ ತುಂಬಿಸಿದೆ. ಮೂಲದ ನಿಷ್ಠೆಯೊಂದಿಗೆ ಭಾಷಾಗಾಂಭೀರ್ಯ ಮತ್ತು ಮಾತಿನ ಸುಭಗತೆ ಎರಡನ್ನೂ ಒಟ್ಟಿಗೇ ಹಿಡಿಯಲು ಯತ್ನಿಸಿರುವ ಈ ಅನುವಾದವನ್ನು ನಾನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ.
Phedra
₹ 180.00
Out stock
ಗ್ರೀಕ್ ಪುರಾಣದ ಪ್ರಸಿದ್ಧ ಕಥಾನಕವೊಂದನ್ನು ಆಧರಿಸಿ ‘ಫೀದ್ರಾ’ ನಾಟಕವನ್ನು ಜೀನ್ ರ್ಯಾಸೀನ್ ಬರೆದದ್ದು 1677ರಲ್ಲಿ. ಫ್ರೆಂಚ್ ಭಾಷೆಯ ಈ ನಾಟಕವು ಹಲವು ಬಾರಿ ಇಂಗ್ಲೀಷಿಗೆ ಅನುವಾದವಾದಗೊಂಡಿದೆ. ಕಳೆದ ಹಲವು ದಶಕಗಳಿಂದಲೂ ಕನ್ನಡ ವಿದ್ವಾಂಸರ, ವಿಮರ್ಶಕರ ಮನ್ನಣೆಗೆ ಪಾತ್ರವಾಗಿರುವ ‘ಫೀದ್ರಾ’ ನಾಟಕದ ಮೊದಲ ಕನ್ನಡ ಅನುವಾದ ಇದು. ಈ ಅನುವಾದವು ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಪ್ರದರ್ಶಿತಗೊಂಡು ರಂಗಪ್ರಯೋಗವಾಗಿಯೂ ಯಶಸ್ವಿಯಾಗಿದೆ.
Available on
Out of stock
Reviews
There are no reviews yet.