Puttakkana Highway
₹350.00
ಪುಸ್ತಕವು ಮೂಲ ಕಥೆಯಿಂದ ಪ್ರಶಸ್ತಿ ವಿಜೇತ ದೃಶ್ಯ ಚಿಕಿತ್ಸೆಯಾಗಿ ಪರಿವರ್ತನೆಗೊಂಡ ಪ್ರಯಾಣದ ಬಗ್ಗೆ ಹೇಳುತ್ತದೆ ಮತ್ತು ನಂತರ ಸ್ಕ್ರಿಪ್ಟ್, ವಿಮರ್ಶೆಗಳು ಮತ್ತು ಚರ್ಚೆಗಳೊಂದಿಗೆ ಪದ ರೂಪಕ್ಕೆ ತಿರುಗುತ್ತದೆ. ಸಂಶೋಧಕರಿಗೆ, ಇದು ಪದಗಳಿಂದ ಸ್ಕ್ರಿಪ್ಟ್ಗೆ ದೃಶ್ಯಗಳಿಗೆ ಮತ್ತು ಪದಗಳಿಗೆ ಹಿಂತಿರುಗುವ ಪ್ರಯಾಣದ ಕಲಿಕೆಯ ಅನುಭವವನ್ನು ನೀಡುತ್ತದೆ. ಚಲನಚಿತ್ರ ರಸಿಕರಿಗೆ ಇದು ಕಥೆಯು ಚಲನಚಿತ್ರವಾಗಿ ಹೇಗೆ ಹೊರಹೊಮ್ಮುತ್ತದೆ ಎಂಬುದರ ರಿಂಗ್ಸೈಡ್ ನೋಟವನ್ನು ನೀಡುತ್ತದೆ. ಅರ್ಥಶಾಸ್ತ್ರಜ್ಞರು ಮತ್ತು ಮಾನವ ಕಾರ್ಯಕರ್ತರಿಗೆ, ಇದು ಅಭಿವೃದ್ಧಿಯ ಸಮಸ್ಯೆಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಈ ಪುಸ್ತಕದಲ್ಲಿ “ಪುಟ್ಟಕ್ಕನ ಹೈವೇ” ಚಲನಚಿತ್ರದ ಚಿತ್ರಕಥೆ ಮಾತ್ರವೇ ಅಲ್ಲದೆ , ಚಿತ್ರದ ಕುರಿತಂತೆ ಬಂದ ವಿಮರ್ಶೆಗಳು, ಚಿತ್ರವನ್ನು ಕುರಿತಂತೆ ನಡೆದ ಸಂವಾದದ ವಿವರಗಳು, ಚಿತ್ರದ ಡಿವಿಡಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ಮೂಲಕಥೆ “ಪುಟ್ಟಕ್ಕನ ಮೆಡಿಕಲ್ ಕಾಲೇಜ್” ಸಹ ಇದೆ.
Interested readers may write to us at mup@manipal.edu about purchasing the book.
Related products
-
Sangeetashastragranthachandrike Volume-2
Author: S Karthik
ಸಂಗೀತಶಾಸ್ತ್ರಗ್ರಂಥಚಂದ್ರಿಕೆ ಯ ಎರಡನೆಯ ಸಂಪುಟವು ಭಾರತೀಯ ಸಂಗೀತದ ಶಾಸ್ತ್ರಕಾರರು ಮತ್ತು ಶಾಸ್ತ್ರಗ್ರಂಥಗಳ ಚರಿತ್ರೆಯನ್ನು ಒಳಗೊಂಡ ಕೃತಿಯಾಗಿದೆ. ಇದರಲ್ಲಿ ಪ್ರಕಟಿತ, ಅಪ್ರಕಟಿತ, ಲಭ್ಯ, ಅಲಭ್ಯ ಶಾಸ್ತ್ರಗ್ರಂಥಗಳ ಬಗೆಗೆ ಮೂಲ ಆಕರಗಳನ್ನೇ ಆಮೂಲಾಗ್ರವಾಗಿ ಗಮನಿಸಿ, ವಿಶದವಾಗಿ ಪರಿಚಯ ಮಾಡಿಕೊಡಲಾಗಿದೆ. ಎಷ್ಟೋ ಜನ ಅಜ್ಞಾತಶಾಸ್ತ್ರಕಾರರು ಮತ್ತು ಶಾಸ್ತ್ರಕೃತಿಗಳ ಬಗೆಗೆ ಖಚಿತವಾದ ಮಾಹಿತಿ ಆಕರ ಸಾಮಗ್ರಿಯ ಸಹಿತ ಇಲ್ಲಿ ದೊರಕುತ್ತದೆ. ಕರ್ನಾಟಕ ಸಂಗೀತ ಎಂಬ ಹೆಸರು ಹೇಗೆ ಬಂತೆಂಬ ವಿಚಾರದಲ್ಲಿ ಸ್ಪಷ್ಟವಾದ ವಿವರಗಳು ಇಲ್ಲಿ ದಾಖಲಾಗಿವೆ. ಹಿಂದಿನ ಅಧ್ಯಯನಗಳಿಗಿಂತ ಹೆಚ್ಚು ವಸ್ತುನಿಷ್ಠ ಮಾಹಿತಿ ಇಲ್ಲಿ ದೊರಕುತ್ತದೆ. ಕ್ರಿ.ಶ.ಸು ೧೨೫೦-೧೪೦೦ರ ನಡುವಿನ ಅವಧಿಯಲ್ಲಿದ್ದ ಶಾಸ್ತ್ರಕಾರರು ಮತ್ತು ಆ ಅವಧಿಯಲ್ಲಿ ರಚಿತವಾಗಿರುವ ಶಾಸ್ತ್ರಗ್ರಂಥಗಳ ಬಗೆಗೆ ರಚಿತವಾಗಿರುವ ಈ ಕೃತಿಯ ದ್ವಿತೀಯ ಸಂಪುಟವು ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ವಿರಳ ಅಪರೂಪದ ಕೃತಿಗಳಲ್ಲಿ ಒಂದಾಗಿದೆ.
Interested customers may write to us at mup@manipal.edu about purchasing the book.
-
Mahila Mahabharatha
Author: K Madhavan Translator: Abhilasha S
ಮಹಿಳಾ ಮಹಾಭಾರತ, ಇದು ಜೆಎನ್ಯು ದೆಹಲಿಯ ವಿಶ್ರಾಂತ ಪ್ರಾಧ್ಯಾಪಕರಾದ ಕೆ. ಮಾಧವನ್ ರಚಿಸಿದ ನಾಟಕ. ರಂಗ ನಿರ್ದೇಶಕರೂ ಆಗಿರುವ ಮಾಧವನ್ರನ್ನು ೧೯೯೪ರಲ್ಲಿ ಯೂನಿವರ್ಸಿಟಿ ದು ಕ್ವಿಬೀ ಎ ಮಾನ್ಟ್ರಿಯಲ್ ವಿಶ್ವವಿದ್ಯಾನಿಲಯ ತನ್ನ ವಿದ್ಯಾರ್ಥಿಗಳಿಗೆ ರಂಗ ನಿರ್ದೇಶನದ ತರಬೇತಿ ನೀಡಲು ಆಹ್ವಾನಿಸಿತ್ತು. ಆಗ ಒಂದು ವರ್ಷ ನಡೆಸಿದ ರಂಗ ಕಾರ್ಯಾಗಾರದ ಭಾಗವಾಗಿ ೧೯೯೫ ರಲ್ಲಿ ಮಾಧವನ್ ಈ ನಾಟಕವನ್ನು ಫ್ರೆಂಚ್ ಭಾಷೆಯಲ್ಲಿ ರಚಿಸಿ ನಿರ್ದೇಶಿಸಿದ್ದರು. ನಂತರ ಇದು ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಆಯಾ ಪ್ರದೇಶದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟಿತು. ಹಾಗೆಯೇ ಭಾರತದಲ್ಲಿಯೂ ಅನೇಕ ನಗರಗಳಲ್ಲಿ ಈ ನಾಟಕ ಪ್ರದರ್ಶನ ಕಂಡಿದೆ. ೨೦೦೫ರಲ್ಲಿ ಈ ನಾಟಕದ ಇಂಗ್ಲಿಷ್ ಅವತರಣಿಕೆಯು ಥಿಯೇಟರ್ ಇಂಡಿಯಾದಿAದ ಪ್ರಕಟವಾಯಿತು. <br> ಎಲ್ಲ ಕಾಲದ ಮಹಿಳಾ ಜಗತ್ತಿನ ಆಂತರ್ಯದಲ್ಲಿ ನಡೆಯಬಹುದಾದ ಮಹಾಯುದ್ಧದ ಕಥನವೇ ಮಹಿಳಾ ಮಹಾಭಾರತ. ಇಲ್ಲಿ ಪುರಾಣ ಮತ್ತು ವಾಸ್ತವ ಜಗತ್ತಿನ ನಡುವಿನ ಗೆರೆಯೇ ಅಳಿಸಿ, ಪೌರಾಣಿಕತೆ ಮತ್ತು ವಾಸ್ತವಿಕತೆ ಮುಖಾಮುಖಿಯಾಗುತ್ತವೆ. ಮಹಾಭಾರತ ಕಥೆಯ ಪರಿಧಿಯಲ್ಲಿದ್ದಿರಬಹುದಾದ ಎಲ್ಲ ತಾಯಂದಿರೂ ಈ ನಾಟಕದಲ್ಲಿ ಕೇಂದ್ರದತ್ತ ಚಲಿಸಿ ಕತೆ ಹೇಳುತ್ತಾರಾದ್ದರಿಂದ, ಮಹಿಳಾ ಕಣ್ನೋಟದ ಮಹಾಭಾರತ ಇಲ್ಲಿ ಗೋಚರವಾಗುತ್ತದೆ. ವಿಶೇಷವೆಂದರೆ, ಈ ಇಡೀ ಕಥನದ ಸೂತ್ರಧಾರಿಣಿ, ಸಮಕಾಲೀನ ಜಗತ್ತಿನ ಅಸಹಾಯಕ, ಹತಾಶ ತಾಯಿ. ಇಲ್ಲಿ ಪುಟ್ಟ ಪೆಟ್ಟಿಗೆಯಲ್ಲಿ ಜೀವಶಕ್ತಿಯ ಬೀಜ ನೆಟ್ಟು ಅದು ಮೊಳಕೆಯೊಡೆದು ಬೃಹತ್ ವೃಕ್ಷವಾಗಿ ಅಡುಗೆ ಮನೆಯನ್ನೇ ಸ್ಪೋಟಿಸುವ ಹೆಣ್ಣುಗಳಿದ್ದಾರೆ, ಮರಕ್ಕೆ ಕಟ್ಟಿ ಸುಟ್ಟು ಹಾಕುತ್ತಿರುವ ಅಣ್ಣಂದಿರನ್ನೇ ನೋಡಿ ಗಹಗಹಿಸುವ ತಂಗಿಯರಿದ್ದಾರೆ, ಹೆಣ್ಣುಗಳ ನಿಟ್ಟುಸಿರ ತಾಪಕ್ಕೆ ಗುರಿಯಾಗಿ ನಲುಗುತ್ತಿರುವ ಗಂಡುಮಕ್ಕಳ ಸಂಕಟ ಕಂಡು ಮರುಗುತ್ತಿರುವ ತಾಯಂದಿರಿದ್ದಾರೆ. ಆದಿಯಿಂದ ಅಂತ್ಯದವರೆಗೆ ತೂಗುವ ತೊಟ್ಟಿಲು, ಅನುರಣಿಸುವ ಜೋಗುಳದ ಜೊತೆಗೆ ಹೆಮ್ಮಕ್ಕಳು ನೀಡುವ ಶಾಪದ ಸರಮಾಲೆಯೂ ಇಲ್ಲಿದೆ.
Interested readers may write to us at mup@manipal.edu about purchasing the book.
Also available on
-
Chandrayana
Author: Parvathi Pitagi
`ಚಂದ್ರಯಾನ’ ಒಂದು ಅಪೂರ್ವ ಮಾದರಿಯ ಕಾದಂಬರಿ. ಇದರಲ್ಲಿ ಫ್ಯಾಂಟಸಿ ಇದೆ, ಸಾಮಾಜಿಕತೆ ಇದೆ, ಸ್ತ್ರೀಪರ ಚಿಂತನೆ ಇದೆ, ರಾಜಕೀಯ ಇದೆ, ಎಲ್ಲವೂ ಇವೆೆ. ಇದರ ನಿರೂಪಣೆಯಲ್ಲಿಯೂ ಸರಳತೆ ಇದೆ, ಲಾಲಿತ್ಯ ಇದೆ. ಉತ್ತರಕರ್ನಾಟಕದ ಭಾಷಿಕ ಸೊಗಡು ಈ ಕಾದಂಬರಿಯನ್ನು ಅನನ್ಯವಾಗಿಸಿದೆ. ಇದನ್ನು ಓದುವುದೆಂದರೆ ರೋಚಕ ಲೋಕದಲ್ಲಿ ವಿಹರಿಸಿದಂತೆ.
ಕಥಾನಾಯಕಿ ರೋಹಿಣಿ ಚಿಕ್ಕಂದಿನಿAದಲೂ ಆಗಸ, ಆಕಾಶಕಾಯಗಳ ಬಗ್ಗೆ ಸಾಕಷ್ಟು ಕೌತುಕ ಹೊಂದಿರುತ್ತಾಳೆ. ಅದೇ ರೀತಿ ತಾನು ಬೆಳೆದಂತೆಲ್ಲ ಆಸಕ್ತಿ ಯನ್ನು ಬೆಳೆಸಿಕೊಳ್ಳುತ್ತಾ ಮುಂದೊAದು ದಿನ ಗಗನ ಯಾತ್ರೆ ಕೈಗೊಳ್ಳುವ ಕನಸುಹೊತ್ತು ಆ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ ತನ್ನ ಓದನ್ನು ಮುಂದುವರೆಸುತ್ತಾಳೆ. ಆಕೆಯ ಬಾಲ್ಯದ ಗೆಳೆಯ ಚಂದ್ರಶೇಖರ ಹುಟ್ಟುರಾಜಕಾರಣಿ. ಚಿಕ್ಕಂದಿನಿAದಲೇ ಆಕೆಯನ್ನು ಬಯಸುತ್ತಿದ್ದ. ಆತ ಬೆಳೆದ ನಂತರ ಆಕೆಯನ್ನು ಮದುವೆಯಾಗಲು ಇಷ್ಟಪಡುತ್ತಾನೆ. ಆಕೆ ಗಗನ ಯಾತ್ರೆಗೆ ಆಯ್ಕೆಯಾದಲ್ಲಿ ತನಗೆ ದಕ್ಕುವುದಿಲ್ಲವೆಂದು ಮಂತ್ರಿಯಾದ ಆತ ಅಡ್ಡಗಾಲು ಹಾಕುತ್ತಾನೆ.ಎಲ್ಲ ಅಡೆತಡೆಗಳನ್ನು ಮೀರಿ ರೋಹಿಣಿ ಕೊನೆಗೂ ಯಶಸ್ವಿಯಾಗಿ ಉಪಗ್ರಹದ ಮೇಲಿಂದ ಸುಂದರ ಭಾರತವನ್ನು ಕಂಡು `ಸಾರೆ ಜಹಾಂಸೆ ಅಚ್ಛಾ’ ಎಂದು ಉದ್ಗರಿಸುತ್ತಾಳೆ.ಅದು ಇಡೀ ಕಾದಂಬರಿಯ ಭರತವಾಕ್ಯವೂ ಹೌದು.
Interested overseas readers may write to us at mup@manipal.edu about purchasing the book.
-
Kannadadalli Patthyaparishkarana- Ondu Kaipidi
Author: N T Bhat
ಸ್ವಾನುಭವವಷ್ಟನ್ನೇ ಬಂಡವಾಳವಾಗಿರಿಸಿಕೊಂಡು ತೊಡಗಿದ ಉದ್ಯಮ ಈ ಹೊತ್ತಗೆಯ ರಚನೆ. ಕನ್ನಡದಲ್ಲಿ ಕರಡಚ್ಚು ಪ್ರತಿಗಳನ್ನು ತಿದ್ದಿಕೊಟ್ಟ ಅನುಭವಗಳನ್ನು ತುಸು ವಿಸ್ತರಿಸಿ ಸಣ್ಣ ಕೈಪಿಡಿಯ ರೂಪದಲ್ಲಿ ತಂದರೆ ಒಳ್ಳೆಯದಲ್ಲವೇ ಎಂಬ ಆಲೋಚನೆ ಈ ಕಿರುಹೊತ್ತಗೆಯ ರಚನೆಯ ಮೂಲ. -ಎನ್. – ತಿರುಮಲೇಶ್ವರ ಭಟ್ಟ ಡಾ. ತಿರುಮಲೇಶ್ವರ ಭಟ್ಟರು ದೀರ್ಘಕಾಲ ಅನುವಾದಕ್ಷೇತ್ರದಲ್ಲಿ (ಇಂಗ್ಲಿಷ್ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್ಗೆ, ಜರ್ಮನ್ನಿಂದ ಇಂಗ್ಲಿಷ್ಗೆ, ಜರ್ಮನ್ನಿಂದ ಕನ್ನಡಕ್ಕೆ) ದುಡಿದವರು ಮತ್ತು ವಿವಿಧ ರೀತಿಯ ಪುಸ್ತಕಗಳ ಯೋಜನೆ, ಸಂಯೋಜನೆ, ಪುನರ್ನಿರೂಪಣೆ, ಸಂಪಾದನೆ ಮೊದಲಾದ ಕೆಲಸಗಳನ್ನು ಮಾಡಿದವರು. ಈಯೆಲ್ಲ ಕೆಲಸಗಳಲ್ಲಿ ಸತತವಾಗಿ ಒಳಗೊಂಡಿರುವುದು ಕರಡಚ್ಚು ತಿದ್ದುವ ಕೆಲಸ. ಯಾವುದೇ ಕಾರ್ಯಕ್ರಮದಲ್ಲಿದ್ದರೂ ಅದರ ಎಡೆಯೆಡೆಯ ಬಿಡುವಿನಲ್ಲಿ ಒಂದಿಷ್ಟು ಕರಡಚ್ಚು ತಿದ್ದುವ ಕೆಲಸವನ್ನು ಸತತವಾಗಿ ಮಾಡುತ್ತಲೇ ಬಂದವರು. ಪಠ್ಯಪರಿಷ್ಕರಣದ ಹಲವು ಹಂತಗಳನ್ನು ಚೆನ್ನಾಗಿ ಬಲ್ಲ ಅವರು ತಮ್ಮಲ್ಲಿರುವ ಮಾಹಿತಿಯನ್ನೂ ಅನುಭವವನ್ನೂ ಕ್ರೋಡೀಕರಿಸಿ ಕನ್ನಡದಲ್ಲಿ ಪಠ್ಯಪರಿಷ್ಕರಣದ ಆವಶ್ಯಕತೆಯೇನೆಂಬುದು ಸರಳವಾಗಿ ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಅವರಿಂದ ಭಾಷಾಕ್ಷೇತ್ರಕ್ಕೆ ಇನ್ನಷ್ಟು ಸೇವೆ ಸಲ್ಲಲಿ ಎಂಬುದು ಮನದಾಳದ ಆಶಯ. – ಪಾದೇಕಲ್ಲು ವಿಷ್ಣು ಭಟ್ಟ.
Interested readers may write to us at mup@manipal.edu about purchasing the book.
Also available on
-
Christa Shaka 1800 Ra Modalina Mysooru ithihaasa
Author: D S Achuta Rao Translator: S Narendra Prasad
೧೮೦೦ ಕ್ರಿ. ಶ. ದ ಹಿಂದಿನ ಮೈಸೂರು ಇತಿಹಾಸವು ಪ್ರೊ. ಡಿ ಎಸ್ ಅಚ್ಯುತ ರಾವ್ ಅವರ ಜೀವನ ಮತ್ತು ಕೆಲಸದ ಬಗ್ಗೆ. ಮೈಸೂರು ಇತಿಹಾಸದ ಕುರಿತಾದ ಅವರ ಸಂಶೋಧನೆಯು 1940-65ರ ಅವಧಿಯಲ್ಲಿ ಅವರು ಪ್ರಕಟಿಸಿದ ಹತ್ತು ಸೂಚ್ಯಂಕ ಲೇಖನಗಳಿಂದ ಪ್ರತಿನಿಧಿಸುತ್ತದೆ. ಅವರು ಭಾರತದ ಇತಿಹಾಸ ಮತ್ತು ಅದರ ಅದ್ಭುತ ಭೂತಕಾಲವನ್ನು ಸಕ್ರಿಯವಾಗಿ ಜನಪ್ರಿಯಗೊಳಿಸಿದರು. ಮಹಾರಾಜಾಸ್ ಕಾಲೇಜ್ ಹಿಸ್ಟರಿ ಸೊಸೈಟಿ, ಭಾರತದ ವಸಾಹತು ಸಂಶೋಧಕರು ಮತ್ತು ಕನ್ನಡ ವಿಶ್ವಕೋಶದಲ್ಲಿ ಮೈಸೂರು ಸರ್ಕಾರದ ಉಪಕ್ರಮದಿಂದ ಭಾರತೀಯ ಇತಿಹಾಸದಲ್ಲಿ ಉಪಕ್ರಮಗಳನ್ನು ಪ್ರಸ್ತುತಪಡಿಸುವುದರಿಂದ ಅಂತಹ ಮೂರು ಲೇಖನಗಳನ್ನು ಸೇರಿಸಲಾಗಿದೆ. ಎರಡನೇ ಭಾಗದಲ್ಲಿ ಅವರ ಜೀವನಚರಿತ್ರೆಯಲ್ಲಿ, ಅವರ ವಿದ್ಯಾರ್ಥಿಗಳು ಮತ್ತು ಮಕ್ಕಳು ಶಿಕ್ಷಕ ಮತ್ತು ತಂದೆಯಾಗಿ ಅವರ ಜೀವನದ ಬಗ್ಗೆ ಬರೆದಿದ್ದಾರೆ, ಅವರ ಅವಧಿಯ ಸಂದರ್ಭವನ್ನು ಒದಗಿಸಿದ್ದಾರೆ. ಪುಸ್ತಕವು ಕಳೆದ ಶತಮಾನದ ಮಧ್ಯದಲ್ಲಿ ಇತಿಹಾಸ ಸಂಶೋಧನೆಗೆ ಆಸಕ್ತಿದಾಯಕ ವಿಂಡೋವನ್ನು ಪ್ರಸ್ತುತಪಡಿಸುತ್ತದೆ.
Interested readers may write to us at mup@manipal.edu about purchasing the book.
-
Tapaalu Mani
Author: Rabhindranath Tagore, Translator: Mounesh Badiger
ರಾಷ್ಟ್ರಕವಿ ರವೀಂದ್ರನಾಥ ಠಾಕೂರರ ‘ಡಾಕ್ ಘರ್’ ಬಹಳ ಪ್ರಸಿದ್ಧ ನಾಟಕ. ಮಗುವಿನ ಮನೋದೈಹಿಕ ಸಾಧ್ಯತೆಗಳನ್ನು ಕಲೆಯ ಸೂಕ್ಷ್ಮಕಣ್ಣಿನಿಂದ ನೋಡುವ ಎರಡಂಕದ ಪುಟ್ಟ ನಾಟಕವಿದು. ಇದು ಸೃಷ್ಟಿಸುವ ಮಾಯಾವಾಸ್ತವ ಬಹಳ ಅಪರೂಪವಾದದ್ದು. ಇದರ ಮುಖ್ಯ ಪಾತ್ರ ಮಗುವೇ ಆಗಿದ್ದರೂ ಇದರ ವಸ್ತು ಮಕ್ಕಳಿಗಳಿಂತ ಹೆಚ್ಚಾಗಿ ದೊಡ್ಡವರಿಗೇ ಅನ್ವಯವಾಗುವಂತಿದೆ. ಮೌನೇಶ ಬಡಿಗೇರರು ಇದನ್ನು ಉತ್ತರಕರ್ನಾಟಕದ ಭಾಷೆಗೆ ತಂದು ಕನ್ನಡದ ನಾಟಕವೇ ಎನ್ನುವಷ್ಟು ರೂಪಾಂತರಿಸಿದ್ದಾರೆ. ಇದರ ಪ್ರಯೋಗದ ಹೊಸ ಹೊಸ ಸಾಧ್ಯತೆಗಳನ್ನು ಕನ್ನಡ ರಂಗಭೂಮಿ ಇನ್ನೂ ಶೋಧಿಸಬೇಕಿದೆ.
Interested readers may write to us at mup@manipal.edu about purchasing the book.
Also available on
-
Dodda Samagara Nalmoga
Author: Dinesh Uppoora
ದೊಡ್ಡ ಸಾಮಗರೆಂದೇ ಪ್ರಸಿದ್ಧರಾದ ಮಲ್ಪೆ ಶಂಕರನಾರಾಯಣ ಸಾಮಗರು ಬಹುಮುಖ ವ್ಯಕ್ತಿತ್ವವುಳ್ಳ ಒಬ್ಬ ಮಹಾನ್ ದಾರ್ಶನಿಕ. ಸ್ವಾತಂತ್ರ್ಯ ಹೋರಾಟಗಾರರಾಗಿ ಬ್ರಿಟಿಷರ ಆಡಳಿತದ ಧೋರಣೆಗಳ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದವರು, ಹರಿಕಥಾದಾಸರಾಗಿ ತನ್ನ ವಿಚಾರಧಾರೆಯನ್ನು ಸಮಾಜಕ್ಕೆ ಪ್ರಚುರಪಡಿಸಿದವರು, ತನ್ನ ಪ್ರತ್ಯುತ್ಪನ್ನಮತಿತ್ವದಿಂದ, ಅಗಾಧವಾದ ಪಾಂಡಿತ್ಯದಿಂದ ತಾಳಮದ್ದಳೆ ಅರ್ಥಧಾರಿಗಳಾಗಿ ಕಲಾರಸಿಕರ ಮನಗೆದ್ದವರು. ಉತ್ತಮ ವೇಷಧಾರಿಗಳಾಗಿ ಬೇಡಿಕೆಯ ಕಲಾವಿದರಾದವರು, ಸರಳ ಜೀವನದ ಆದರ್ಶ ವ್ಯಕ್ತಿತ್ವದಿಂದ ಗಾಂಧಿವಾದಿಗಳಾಗಿ ಬದುಕಿದವರು. ಇವರು 1911 ರ ಡಿಸೆಂಬರ್ 11 ರಂದು ಜನಿಸಿ, 1999 ರ ಆಗಸ್ಟ್ 1 ರಂದು ನಿಧನರಾದರು.
ಅವರ ಜೀವನದ ಘಟನೆಗಳನ್ನು ಆಧರಿಸಿ ಬರೆದ “ದೊಡ್ಡ ಸಾಮಗರ ನಾಲ್ಮೊಗ”ವನ್ನು ದಿನೇಶ ಉಪ್ಪೂರರು ಹಲವಾರು ಗ್ರಂಥ, ಸ್ನೇಹಿತರು, ಅಂತರ್ಜಾಲ ಇತ್ಯಾದಿಗಳಿಂದ ಸಂಗ್ರಹಿಸಿ ಅನಾವರಣಗೊಳಿಸಿದ್ದಾರೆ.
Interested readers may write to us at mup@manipal.edu about purchasing the book.
-
Udupi – Manipal: A Pictorial Journey
Author: Astro Mohan
This picturesque book celebrates the history and life of Udupi and Manipal and takes the reader on a photographic tour. Most breath-taking locales are presented with rich, full-colour images taken by Astro Mohan. These images, combined with redolent text, in both English and Kannada, illustrates a plethora of visual wonders: ancient megaliths, scenic islands, magnificent artwork, white-sand seashores, rainforests, and both classic and innovative architecture. Loaded with information for each location, it is the perfect travel partner and comprehensive guide for an enriching and authentic travel experience in Udupi-Manipal. Experience well-known festivals such as Ganesh Chaturthi to lesser-known cultural fiestas like Bhootharadhane and Dollu Kunita or architectural wonders like the Kalluchappara or Katale Basadi with this. Immerse yourself in the temple city of Udupi and the cosmopolitan town of Manipal with this book. Begin your journey now!
Interested customers may write to us at mup@manipal.edu about purchasing the book.
Also available on