Aparichita (Camus – The Stranger)

By (author)Prakash Nayak

170.00

ತರ್ಕವಾಗಲೀ ವಿಜ್ಞಾನವಾಗಲೀ ಮೂಲತಃ ಯಾವ ಅರ್ಥವನ್ನೂ ಅಡಗಿಸಿಕೊಂಡಿರದ ಈ ಅಸಂಬದ್ಧ ಬದುಕನ್ನು ವಿವರಿಸಲಾರವು. ಆದರೆ, ಅದಕ್ಕಾಗಿ ಅತೀಂದ್ರಿಯ ಶಕ್ತಿಯೊಂದನ್ನು ನಂಬುವುದು `ತಾತ್ವಿಕ ಆತ್ಮಹತ್ಯೆ’. ಇಂತಹ ತಾತ್ವಿಕ ಅಥವಾ ದೈಹಿಕ ಆತ್ಮಹತ್ಯೆಗಳು ಜಗತ್ತಿನ ಅರ್ಥರಾಹಿತ್ಯಕ್ಕೆ ಉತ್ತರಗಳಲ್ಲ. ಅಸಂಬದ್ಧತೆಯನ್ನು ಗುರುತಿಸಿ ಬದುಕುವುದೊಂದೇ ಅದಕ್ಕಿರಬಹುದಾದ ಉತ್ತರ ಎಂದು ವ್ಯಾಖ್ಯಾನಿಸಿದ ಫ್ರೆಂಚ್ ಲೇಖಕ, ತತ್ವಜ್ಞಾನಿ ಮತ್ತು ಪತ್ರಕರ್ತ ಆಲ್ಬರ್ಟ್ ಕಮೂ ಬರೆದಿರುವುದು ಕೆಲವೇ ಕಾದಂಬರಿಗಳು ಮತ್ತು ಕೆಲವು ವ್ಯಾಖ್ಯಾನಗಳು.  ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾದ ಅಲ್ಬರ್ಟ್ ಕಮೂನ ಸುಪ್ರಸಿದ್ದ ಕಾದಂಬರಿ “ದ ಸ್ಟ್ರೇಂಜರ್” ಕನ್ನಡವೂ ಸೇರಿದಂತೆ ವಿಶ್ವದ ಹಲವು ಭಾಷೆಗಳಲ್ಲಿ ಅನುವಾದಗೊಂಡು ಹಲವು ಪೀಳಿಗೆಗಳ ಓದುಗರನ್ನು ವಿವಿಧ ರೀತಿಗಳಲ್ಲಿ ಆಕರ್ಷಿಸುತ್ತ ಬಂದಿದೆ. ೧೯೪೨ರಲ್ಲಿ ಮೊದಲು ಪ್ರಕಟವಾದ ಈ ಫ್ರೆಂಚ್ ಕಾದಂಬರಿ ಕಳೆದ ಎಂಟು ದಶಕಗಳಲ್ಲಿ ಪಡೆದುಕೊಂಡಿರುವ ವಿಮರ್ಶಾತ್ಮಕ ಪ್ರತಿಕ್ರಿಯೆ- ಪ್ರತಿಸ್ಪಂದನೆಗಳೂ ವೈವಿಧ್ಯಮಯವಾಗಿವೆ. ಪ್ರತಿವೊಂದು ಪೀಳಿಗೆಯೂ ಈ ಕೃತಿಯನ್ನು ಹೊಸದಾಗಿ ಓದುತ್ತ, ಅನುವಾದಿಸಿಕೊಳ್ಳುತ್ತ, ವಿಮರ್ಶಿಸುತ್ತ, ಇಂಥ ಅನುವಾದಗಳ, ವ್ಯಾಖಾನಗಳ ಒಂದು ಪರಂಪರೆಯೇ ಸೃಷ್ಟಿಯಾಗಿದೆ. ಕನ್ನಡದಲ್ಲಿ ಈ ಮೊದಲೇ, ೧೯೭ ೦ರಲ್ಲಿ, “ಅನ್ಯ” ಎಂಬ ಹೆಸರಿನಲ್ಲಿ ಡಾ. ಡಿ. ಎ. ಶಂಕರ್ ಅವರಿಂದ ಅನುವಾದಗೊಂಡಿದ್ದ ಈ ಕಾದಂಬರಿಯು ಅರ್ಧ ಶತಮಾನದ ನಂತರ ಮತ್ತೆ “ಅಪರಿಚಿತ” ಎಂಬ ಹೆಸರಿನಿಂದ ಶ್ರೀ ಪ್ರಕಾಶ್ ನಾಯಕ್ ಅವರಿಂದ ಹೊಸದಾಗಿ ಅನುವಾದಗೊಂಡು ಈ ಪರಂಪರೆಯನ್ನು ಮುಂದುವರಿಸಿದೆ. ಸ್ವತಃ ಓರ್ವ ಪ್ರತಿಭಾವಂತ ಕತೆಗಾರ-ಕಾದಂಬರಿಕಾರರಾಗಿರುವ ಪ್ರಕಾಶ್ ನಾಯಕ್ ಅವರ ಈ ಸರಳ ಸುಂದರ ಅನುವಾದವು ಕಮೂ ಕೃತಿಯ ಮರು ಓದು-ಹೊಸ ಓದುಗರನ್ನು ಆಹ್ವಾನಿಸುವಂತಿದೆ.

Interested customers may write to us at mup@manipal.edu about purchasing the book. 

Also available on