Bhashantara Jijnase, Pratyakshike

 395.00

Out stock

“ಭಾಷಾಂತರವೆಂದರೆ ಎರಡು ಭಾಷಿಕರ ನಡುವೆ ಸಂವಹನವನ್ನು ಏರ್ಪಡಿಸುವ ಕಾರ್ಯವಿಧಾನ. ಒಂದು ಭಾಷೆಯಲ್ಲಿ ಕಥಿಸಿದ್ದನ್ನು, ವಿವರಿಸಿದ್ದನ್ನು, ಸಂಭಾಷಿಸಿದ್ದನ್ನು, ಭಾವನೆಗಳನ್ನು ವ್ಯಕ್ತಪಡಿಸಿದ್ದನ್ನು, ವಿಶ್ಲೇಷಿಸಿದ್ದನ್ನು, ವರ್ಣಿಸಿದ್ದನ್ನು, ವಾದಿಸಿದ್ದನ್ನು ಅದಕ್ಕನುಗುಣವಾಗಿ ಇನ್ನೊಂದು ಭಾಷೆಗೆ ಪರಿವರ್ತಿಸುವುದು ಭಾಷಾಂತರವೆಂಬ ಪ್ರಕ್ರಿಯೆ. ಒಂದು ಭಾಷೆಯಲ್ಲಿರುವ ಭಾವಲಹರಿ, ವಿಚಾರಧಾರೆಗಳನ್ನು ಇನ್ನೊಂದು ಭಾಷೆಗೆ ಸ್ಥಳಾಂತರಮಾಡುವುದು ಭಾಷಾಂತರವೆಂದು ಸ್ಥೂಲವಾಗಿ ತಿಳಿದುಕೊಳ್ಳಬಹುದು.”

“ಪ್ರಪಂಚದ ಒಂದು ಮೂಲೆಯಲ್ಲಿ ಕಂಡುಕೊಂಡ ಹೊಸ ಸಿದ್ಧಾಂತಗಳು, ಆವಿಷ್ಕಾರಗಳು ಇನ್ನೊಂದು ಮೂಲೆಯ ಇನ್ನೊಂದು ಭಾಷೆಯನ್ನಾಡುವ ಜನರಿಗೆ ತಲುಪಿದಾಗ ಅವುಗಳ ಪ್ರಯೋಜನವನ್ನು ಪಡೆಯುವ ಜನರ ಸಂಖ್ಯೆ ಸ್ವಾಭಾವಿಕವಾಗಿಯೇ ಹೆಚ್ಚುತ್ತದೆ. ಪ್ರಪಂಚದಲ್ಲಿ ಹೆಚ್ಚು ಭಾಷೆಗಳನ್ನು ಕಲಿಸಿದಷ್ಟೂ ಭಾಷಾಂತರದ ಅಗತ್ಯ ಕೆಲವು ಸ್ತರಗಳಲ್ಲಿ ಕಡಿಮೆಯಾದೀತು. ಆದರೆ, ಅದರಿಂದಾಗಿ ಭಾಷಾಂತರಗಳಿಗೆ ಅವಕಾಶ ಹೆಚ್ಚುತ್ತಾ ಹೋಗುತ್ತದೆ.’’

– ನೀರ್ಕಜೆ ತಿರುಮಲೇಶ್ವರ ಭಟ್


Available on

Amazon

Out of stock

Categories: ,

ಜಾಗತಿಕ ನೆಲೆಯಲ್ಲಿ ಅನುವಾದ/ಭಾಷಾಂತರ ಎನ್ನುವುದು ಒಂದು ಮುಖ್ಯ ಜ್ಞಾನಶಿಸ್ತು ಆಗಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿದೆ. ಈ ಕುರಿತು ಸೈದ್ಧಾಂತಿಕವಾಗಿ ಸಾಕಷ್ಟು ಅಧ್ಯಯನಗಳು ನಡೆದಿವೆ, ಗ್ರಂಥಗಳು ಪ್ರಕಟವಾಗಿವೆ. ಕನ್ನಡದಲ್ಲಿ ಕೂಡ ಅನುವಾದ/ಭಾಷಾಂತರದ ಬಗ್ಗೆ ಕೆಲವು ಕೃತಿಗಳು ರಚನೆಯಾಗಿವೆ. ಇವುಗಳಲ್ಲಿ ಸೈದ್ಧಾಂತಿಕ ಸಂಗತಿಗಳೂ ಪ್ರಾಯೋಗಿಕ ನಿದರ್ಶನಗಳೂ ಸೇರಿಕೊಂಡಿವೆ. ಆದರೆ, ಎನ್. ಟಿ. ಭಟ್ಟರ ಈ ಕೃತಿಯು ಇವೆಲ್ಲವುಗಳಿಗಿಂತ ಭಿನ್ನವಾಗಿದೆ ಮತ್ತು ಅನನ್ಯವಾಗಿದೆ. ತಮ್ಮ ದೀರ್ಘಕಾಲದ ಪ್ರಾಯೋಗಿಕ ಅನುಭವದ ವಿಭಿನ್ನ ನಿದರ್ಶನಗಳ ಮೂಲಕ ಭಾಷಾಂತರ/ಅನುವಾದದ ಮಾರ್ಗದರ್ಶಿ ಸೂತ್ರಗಳನ್ನು ವಿಶಿಷ್ಟವಾಗಿ ಅವರು ರೂಪಿಸಿದ್ದಾರೆ.

ಡಾ. ಎನ್. ಟಿ. ಭಟ್ಟರ `ಭಾಷಾಂತರ: ಜಿಜ್ಞಾಸೆ-ಪ್ರಾತ್ಯಕ್ಷಿಕೆ’ ಗ್ರಂಥವು ಕನ್ನಡ ಅನುವಾದಮೀಮಾಂಸೆಯ ಕ್ಷೇತ್ರದಲ್ಲಿ ಒಂದು ಆಚಾರ್ಯಕೃತಿ. ಅದೊಂದು ಪ್ರಾಯೋಗಿಕ ಮಾರ್ಗದರ್ಶಿ ಗ್ರಂಥವಾಗಿ ಅನುವಾದ ಕ್ಷೇತ್ರಕ್ಕೆ ಹೊಸಬೆಳಕನ್ನು ಕೊಡಲು ಶಕ್ತವಾಗಿದೆ. ಅನುವಾದ ಎನ್ನುವುದು ಈ ಶತಮಾನದ ಪ್ರಭುತ್ವಾತ್ಮಕ ಅಗತ್ಯ ಎನ್ನುವುದು ಮನವರಿಕೆ ಆಗಿರುವಾಗ ಮತ್ತು ಆ ಕ್ಷೇತ್ರದಲ್ಲಿ ಪಾವೀಣ್ಯವನ್ನು ಪಡೆಯುವ ಸ್ಪಷ್ಟ ಮಾರ್ಗದರ್ಶನ ಇಲ್ಲದಿರುವಾಗ ಡಾ. ಎನ್. ಟಿ. ಭಟ್ಟರ ಈ ಗ್ರಂಥವು ಅಪೂರ್ವ ಕೈದೀವಿಗೆಯಾಗಿ ಕನ್ನಡವನ್ನು ಜಾಗತಿಕಭಾಷೆಯಾಗಿ ಸ್ಥಾಪಿಸಲು ನೆರವಾಗಲಿ ಎಂದು ಹಾರೈಸುತ್ತೇನೆ. ಇಂತಹ ಅನುಭವಪ್ರಣೀತ ಅನುವಾದ ಮೀಮಾಂಸೆಯನ್ನು ತಮ್ಮ ನಿಡುಗಾಲದ ಭಾಷಾಂತರ ಕಾಯಕದ ಮೂಲಕ ಸಾಧಿಸಿದ ವಿದ್ವಾಂಸ ಸ್ನೇಹಿತರಾದ
ಡಾ. ಎನ್. ಟಿ. ಭಟ್ಟರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

– ಬಿ. ಎ. ವಿವೇಕ ರೈ

Reviews

There are no reviews yet.

Be the first to review “Bhashantara Jijnase, Pratyakshike”

Your email address will not be published. Required fields are marked *