Sangita Lokadrishti
₹295.00
Author: Sumangala
ತಂದೆ-ಮಗಳ ಸುರಬಹಾರಿನ ಸಂಗೀತಬಂಧದ ಚಿತ್ರಣದಿಂದ ಆರಂಭಗೊಳ್ಳುವ ಈ ಕಿರುಕೃತಿಯು ಸಾಗರ ವೀಣೆ ರೂಪುಗೊಳಿಸಿದ ಇನ್ನೊಂದು ತಂದೆ-ಮಗಳ ಸಂಗೀತಬಂಧದ ಚಿತ್ರಣದೊಂದಿಗೆ ಮುಕ್ತಾಯವಾಗುತ್ತದೆ. ಇಲ್ಲಿ ನಾಲ್ವರು ಸಂಗೀತಗಾರರ ಬದುಕಿನ ಕೆಲವು ಸನ್ನಿವೇಶಗಳು, ಸಂಗೀತಪಯಣದಲ್ಲಿ ಅವರು ಸಾಗಿದ ಹಾದಿ, ಕಠಿಣ ಸಂದರ್ಭಗಳು, ಅವರ ಸಾಂಗೀತಿಕ ಮನೋಧರ್ಮ, ರಾಗರೂಪದ ಕುರಿತ ದೃಷ್ಟಿಕೋನ, ಇತ್ಯಾದಿ ಅಂಶಗಳ ಸ್ಥೂಲ ಚಿತ್ರಣವಿದೆ.
ಸುರಬಹಾರಿನ ದಂತಕಥೆಯೆಂದೇ ಹೇಳಬಹುದಾದ ವಿದುಷಿ ಅನ್ನಪೂರ್ಣಾ ದೇವಿಯವರ ಖಾಸಗಿ ಬದುಕು, ಏಕಾಂತ ನಿಗೂಢವೆನ್ನಿಸುವ ಹಾಗೆಯೇ ಮೈಹರ್ ಘರಾನೆಯ ಸ್ವರಸಂಪತ್ತನ್ನು ಶಿಷ್ಯರಿಗೆ ಧಾರೆಯೆರೆದು ಕಲಿಸುತ್ತ, ಹಲವರನ್ನು ಮೇರು ಕಲಾವಿದರಾಗಿ ರೂಪುಗೊಳಿಸಿದ ಬಗೆಯೂ ಅನನ್ಯ. ಕೃತಿಯಲ್ಲಿ ಚಿತ್ರಿಸಿದ ಇನ್ನುಳಿದ ಮೂವರು ಸಂಗೀತಗಾರರು ನಮ್ಮ ನೆರೆಯ ಪಾಕಿಸ್ತಾನದ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಇನ್ನಷ್ಟು ಸಮೃದ್ಧಗೊಳಿಸಿದವರು.
“ಏ ದಯ್ಯಾ… ಕಹಾಂ ಗಯೇ ವೇ ಲೋಗ್… ಬ್ರಿಜ ಕೆ ಬಸಯ್ಯಾ…”
ಮನುಷ್ಯರ ನಡುವೆ ಹತ್ತುಹಲವು ಬಗೆಯ ದ್ವೇಷದ ಗೋಡೆಗಳು ಎದ್ದು ನಿಂತಿರುವ ಇಂದಿನ ದಿನಮಾನದಲ್ಲಿ ಭಿನ್ನತೆಗಳಿದ್ದರೂ ಪರಸ್ಪರ ಸಂವಾದ ನಡೆಸುತ್ತಿದ್ದ ಆ ಜನರನ್ನು, ಆ ಕಾಲಘಟ್ಟವನ್ನು ಮತ್ತೆ ಕಂಡುಕೊಳ್ಳಲು ಬಹುಶಃ ಇಂತಹ ಸಂಗೀತಗಾರರ ಕೊರಳೊಳಗಿನ, ಬೆರಳೊಳಗಿನ ಸ್ವರಗಳೇ ನಮ್ಮ ಕೈಹಿಡಿದು ಮುನ್ನಡೆಸಬೇಕಿದೆ.
Interested readers may write to us at mup@manipal.edu about purchasing the book.
Related products
-
Malekaadina Kathegalu
Author: Malvika Tewari, Editor: Deepta Sateesh
Malekaadina Kathegalu is a fictional story set in the rich dense rainforest of Agumbe, narrating the journey of Nitya, a young girl who travels to the small village with her father, a conservationist. This book is the result of a research experiment responding to and reimagining the People’s Biodiversity Register (PBR), a tool used to document biological diversity of local communities. Set in the Western Ghats, the story weaves popular references like Malgudi Days in the narrative with the experiences of the people living in Agumbe, Karnataka.
To most people, the Western Ghats is a range of hills on the west coast of India with lush forests in the monsoon and a repository of minerals. It is also a UNESCO World Heritage site and a biodiversity hotspot. To the residents of Agumbe, it is much more: cultural relations, ritual practices, and connections with other-than-human sentient beings. The nature-culture understandings, which comprise of everyday practices of food, kitchen gardens, and medicinal practices, and wandering on foot are experienced by Nitya throughout the story.
Malekaadina Kathegalu reflects the realities and complexities surrounding countless changes in ancient ecologies due to pressures of rapid development, and the diverse aspirations of new generations in a time of environmental crisis. It records the rich diversity of other-than-human beings and material and atmospheric changes across time through primary research using creative mixed methods.
Interested customers may write to us at mup@manipal.edu about purchasing the book.
-
Grama Sannidhya
ಗ್ರಾಮ ಸಾನ್ನಿಧ್ಯಗ್ರಾಮ ಭಾರತವೇ ನೈಜ ಭಾರತವೆಂಬ ಉಕ್ತಿಯೊಂದಿದೆ. ಈ ಉಕ್ತಿ ಅತಿಶಯೋಕ್ತಿಯಲ್ಲ. ಪಂಜಾಬ ಸಿಂಧ, ಗುಜರಾತ, ಮರಾಠ, ದ್ರಾವಿಡ, ಉತ್ಕಲ, ವಂಗ ಎನ್ನುವಾಗ ಅಥವಾ ಸುಜಲಾಂ, ಸುಫಲಾಂ, ಮಲಯಜ ಶೀತಲಾಂ, ಸಸ್ಯಶಾಮಲಾಂ, ಮಾತರಂ… ವಂದೇ ಮಾತರಂ ಎನ್ನುವಾಗ ನಮ್ಮ ಕಣ್ಣೆದುರು ಬಂದು ನಿಲ್ಲುವುದು ಭಾರತದ ವೈವಿಧ್ಯಪೂರ್ಣ ಗ್ರಾಮಗಳು, ಅಲ್ಲಿನ ಜನ-ಅವರ ಜನಜೀವನ. ಬದಲಾದ ಹಾಗೂ ಬದಲಾಗುತ್ತಿರುವ ಭಾರತೀಯ ಸಂದರ್ಭದಲ್ಲಿ, ಕೊಳ್ಳುಬಾಕ, ನಗರೀಕೃತ ನಾಗರೀಕತೆ, ಗ್ರಾಮೀಣ ಬದುಕಿಗಿಂತ ಶ್ರೇಷ್ಠವಾದುದೆಂಬ ಒಂದು ಸಿದ್ಧಾಂತ ಯುವಪೀಳಿಗೆಯನ್ನು ಅನಾವಶ್ಯಕ ಅನುಮಾನಗಳಿಗೆ ತಳ್ಳುತ್ತಿದೆ. ಇದೊಂದು ಅರೆಬೆಂದ ಚಿಂತನೆ. ಭೂತಾನದಂತಹ ರಾಷ್ಟ್ರಗಳಲ್ಲಿ ಮನುಷ್ಯನ ಸಂತೋಷ- ಸಂತೃಪ್ತಿಯನ್ನು ಅವನ ಅಭಿವೃದ್ಧಿ ಮಾಪನವಾಗಿ ಬಳಸಲಾಗುತ್ತಿದೆ. ಈ ತೆರನಾದ ಅಭಿವೃದ್ಧಿ ಪ್ರಕೃತಿ ಸಹ್ಯ ಗ್ರಾಮೀಣ ವಾತಾವರಣದಲ್ಲಷ್ಟೇ ಸಾಧ್ಯ-ಷಹರಗಳಲ್ಲಿ ಅಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಪುಸ್ತಕವನ್ನು ರಚಿಸಲಾಗಿದೆ. ಅಂತಿಮವಾಗಿ ಅಭಿವೃದ್ಧಿ’ ಎಂಬ ಪದದ ನಿಜಾರ್ಥವೇನೆಂಬ ಪ್ರಶ್ನೆ’ ಪುಸ್ತಕದುದ್ದಕ್ಕೂ ಕಾಡುತ್ತ ಹೋಗುತ್ತದೆ. ಹಲವು ವರ್ಷಗಳಿಂದ ಲೇಖಕನನ್ನು ಕಾಡುತ್ತ ಬಂದ ಪ್ರಶ್ನೆ’, ಪುಸ್ತಕದ ವಿವಿಧ ಅಧ್ಯಾಯಗಳಲ್ಲಿ ತಲೆ ಎತ್ತಿ, ಗೊಂದಲ ಸೃಷ್ಟಿಸುತ್ತವೆ. ಸುಮಾರು ಆರು ದಶಕಗಳಿಗೂ ಹೆಚ್ಚಿನ ಗ್ರಾಮೀಣ ನೆಲದ ಸಂಪರ್ಕ, ವಿಶಿಷ್ಟ ಅನುಭವಗಳು, ಅಪಾರ ಸಂದೇಶಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಗ್ರಾಮೀಣ ಬದುಕಿನ ಅನನ್ಯತೆಯನ್ನು ಅನಾವರಣಗೊಳಿಸುವ ಕಾಯಕವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಐವತ್ತನೆಯ ದಶಕದ ಗ್ರಾಮೀಣ ಬದುಕನ್ನು, ಅಂದಗಾರಿನ ಊರು, ದೇವಸ್ಥಾನ, ಶಾಲೆ, ಗ್ರಾಮೀಣರು, ಅವರ ಬದುಕಿನ ಪರಿ, ಜೀವನಾನುಭವ, ಸ್ನೇಹ ಭಾವ, ಸಜ್ಜನಿಕೆ, ತೃಪ್ತ ಜೀವನ ಇನ್ನಿತರ ವಿವರಗಳೊಡನೆ ದಾಖಲಿಸಲಾಗಿದೆ. ಅದಕ್ಕೆ ಪರ್ಯಯವಾಗಿ, ಬದಲಾದ ಇಂದಿನ ಅಂದಗಾರನ್ನು (2020) ಚಿತ್ರಿಸಲಾಗಿದೆ. ಇದರ ನಡುವೆ ರಾಜ್ಯದ ಬೇರೆ ರಾಷ್ಟ್ರಗಳ ಗ್ರಾಮೀಣ ಬದುಕಿನ ವಿವರಗಳನ್ನು ಕೊಡಲಾಗಿದೆ. ಲೇಖಕನ ಬದುಕಿನಲ್ಲಿ ಹಾದು ಹೋದ ಗ್ರಾಮವರೇಣ್ಯರ ನೆನಪು ಈ ಪುಸ್ತಕದಲ್ಲಿದೆ. ಗಾಂಧೀಜಿ ಪ್ರಣೀತ ಪ್ರಕೃತಿಯೊಡನೆ ಸದಾ ಅನುಸಂಧಾನದಲ್ಲಿರುವ, ಸ್ನೇಹ, ಸಹೃದಯತೆ ಸದಾಚಾರ, ಸಹಬಾಳ್ವೆ, ಸಂತೃಪ್ತಿಯ ತಂಗುದಾಣಗಳಾದ ಸಹಸ್ರಾರು ಹಳ್ಳಿಗಳ ರೂಪಕವೊಂದನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ‘ಗ್ರಾಮ ಸಾನ್ನಿಧ್ಯ’ ಕೃತಿಯಲ್ಲಿದೆ.
Interested overseas customers may write to us at mup@manipal.edu about purchasing the book.
-
Tapaalu Mani
Author: Rabhindranath Tagore, Translator: Mounesh Badiger
ರಾಷ್ಟ್ರಕವಿ ರವೀಂದ್ರನಾಥ ಠಾಕೂರರ ‘ಡಾಕ್ ಘರ್’ ಬಹಳ ಪ್ರಸಿದ್ಧ ನಾಟಕ. ಮಗುವಿನ ಮನೋದೈಹಿಕ ಸಾಧ್ಯತೆಗಳನ್ನು ಕಲೆಯ ಸೂಕ್ಷ್ಮಕಣ್ಣಿನಿಂದ ನೋಡುವ ಎರಡಂಕದ ಪುಟ್ಟ ನಾಟಕವಿದು. ಇದು ಸೃಷ್ಟಿಸುವ ಮಾಯಾವಾಸ್ತವ ಬಹಳ ಅಪರೂಪವಾದದ್ದು. ಇದರ ಮುಖ್ಯ ಪಾತ್ರ ಮಗುವೇ ಆಗಿದ್ದರೂ ಇದರ ವಸ್ತು ಮಕ್ಕಳಿಗಳಿಂತ ಹೆಚ್ಚಾಗಿ ದೊಡ್ಡವರಿಗೇ ಅನ್ವಯವಾಗುವಂತಿದೆ. ಮೌನೇಶ ಬಡಿಗೇರರು ಇದನ್ನು ಉತ್ತರಕರ್ನಾಟಕದ ಭಾಷೆಗೆ ತಂದು ಕನ್ನಡದ ನಾಟಕವೇ ಎನ್ನುವಷ್ಟು ರೂಪಾಂತರಿಸಿದ್ದಾರೆ. ಇದರ ಪ್ರಯೋಗದ ಹೊಸ ಹೊಸ ಸಾಧ್ಯತೆಗಳನ್ನು ಕನ್ನಡ ರಂಗಭೂಮಿ ಇನ್ನೂ ಶೋಧಿಸಬೇಕಿದೆ.
Interested readers may write to us at mup@manipal.edu about purchasing the book.
Also available on
-
Inti Dvadasha Akhyana
ಸತ್ಯವತಿ ಹರಿಕೃಷ್ಣನ್ ಹಾಸ್ಯಬರವಣಿಗೆಯಲ್ಲಿ ಸುಮಾರು ಎರಡು ದಶಕಗಳಿಂದ ತನ್ನನ್ನು ತೊಡಗಿಸಿಕೊಂಡಿರುವ ಕವಯಿತ್ರಿ. ಇವರ ಹಾಸ್ಯಲೇಖನಗಳು ತರಂಗ, ತುಷಾರ, ಮಯೂರ, ಕರ್ಮವೀರದಂಥ ನಿಯತಕಾಲಿಕಗಳಲ್ಲಿ, ಉದಯವಾಣಿ, ಪ್ರಜಾವಾಣಿ ಮುಂತಾದವುಗಳಲ್ಲಿಯೂ ಪ್ರಕಟಗೊಂಡಿವೆ. 2002ರಲ್ಲಿ ಡೆಟ್ರಾಯಿಟ್ ನಲ್ಲಿ ನಡೆದ “ಅಕ್ಕ” ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಇವರ “ಗುಂಡ್ರಾಮನ ಚಿಕಿತ್ಸಾಯಣ’ ಎಂಬ ಕೃತಿ ಪ್ರಕಟವಾಗಿದೆ. ಸನ್ಮಾನ್ಯರಾದ ದೇಜಗೌ ಮತ್ತು ಜಿಟಿನಾರವರ ಸಂಪಾದಕತ್ವದಲ್ಲಿ ಪ್ರಕಟವಾದ “ಪುಸ್ತಕ ಪ್ರಪಂಚ’ದಲ್ಲಿ ಇವರ ಅನುವಾದಿತ ಲೇಖನಗಳು ಪಡಿಮೂಡಿವೆ. “ಕುಂಬಾಸ’, “ನುಗ್ಗೇಹಳ್ಳಿ ಪಂಕಜ’ವೇ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುವ ಸತ್ಯವತಿಯವರು ಈಗಾಗಲೇ ಐದು ಹಾಸ್ಯ ಸಂಕಲನಗಳನ್ನು ರಚಿಸಿದ್ದಾರೆ. ಅವರ ಆರನೆಯ ಹಾಸ್ಯ ಸಂಕಲನವೇ – “ಇಂತಿ ದ್ವಾದಶ ಆಖ್ಯಾನ’. ಹಾಸ್ಯದಲ್ಲಿ ಅಪಹಾಸ್ಯ, ತಿಳಿಹಾಸ್ಯ, ವ್ಯಂಗ್ಯ ಮುಂತಾದ ಪ್ರಭೇದಗಳಿವೆ. ವ್ಯಂಗ್ಯಮಿಶ್ರಿತವಾದ ತಿಳಿಹಾಸ್ಯ ಒಂದೇ ಕಾಲದಲ್ಲಿ ಎರಡು ಉದ್ದೇಶಗಳನ್ನು ಹೊಂದಿರುತ್ತವೆ. ಅದು ಮೇಲ್ನೋಟಕ್ಕೆ ಮನೋರಂಜನೆಯಾಗಿ ಕಂಡರೂ, ಅದರ ಇಂಗಿತ ಓದುಗರನ್ನು ಗಂಭೀರ ಚಿಂತನೆಗೆ ತೊಡಗುವಂತೆ ಮಾಡುವುದಾಗಿರುತ್ತದೆ. ವ್ಯಕ್ತಿಯನ್ನು ನೋಯಿಸದೇ ಲಘುಹಾಸ್ಯ-ವ್ಯಂಗ್ಯಗಳಿಂದ ಸ್ವವಿಮರ್ಶೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಹಾಸ್ಯದ ಕಲಾತ್ಮಕ ಪ್ರಕ್ರಿಯೆ. ಶ್ರೀಮತಿ ಸತ್ಯವತಿಯವರ ಈ ಕೃತಿಯಲ್ಲಿ ಇಂತಹ ಒಂದು ಪ್ರಯತ್ನವನ್ನು ನಾವು ಕಾಣಬಹುದು. “ಇಂತಿ ದ್ವಾದಶ ಆಖ್ಯಾನ’ದಲ್ಲಿ ಹನ್ನೆರಡು ವೈವಿಧ್ಯಮಯ ಸಣ್ಣ ಹಾಸ್ಯಲೇಖನಗಳಿವೆ. ಸತ್ಯವತಿಯವರು ನಮ್ಮ ಜೀವನದ ಸಾಮಾನ್ಯ ಘಟನೆಗಳನ್ನೇ ರಂಗುರಂಗಾಗಿ ತಿಳಿಹಾಸ್ಯದ ಮೂಲಕ ಈ ಕೃತಿಯಲ್ಲಿ ತೋರಿಸಿದ್ದಾರೆ. ಕಾಲ್ಪನಿಕ ಘಟನೆಗಳಲ್ಲಿ ಹಾಸ್ಯದ ಪಾತ್ರಗಳನ್ನು ಸೃಷ್ಟಿಸಿ, ಗಂಭೀರ ವಿಚಾರಗಳನ್ನು ಮನಮುಟ್ಟುವಂತೆ ನಿರೂಪಿಸುವ ಲೇಖಕಿಯ ಶೈಲಿಯು ಅಪೂರ್ವವಾದದ್ದು. ಪ್ರತಿ ಕತೆಯ ಶೀರ್ಷಿಕೆಯಲ್ಲೇ ಹಾಸ್ಯ ತುಂಬಿರುವ ಈ ಕೃತಿಯು ಓದುಗರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ.
Interested customers may write to us at mup@manipal.edu about purchasing the book.
Also available on
-
Nanna Parni Shaale
Author: Thakur S Powdyel Translator: N T Bhat
ನನ್ನ ಪರ್ಣ ಶಾಲೆ ಠಾಕೂರ್ ಎಸ್ ಪಡೆಯಲು ಅವರು ಇಂಗ್ಲಿಷಿನಲ್ಲಿ ರಚಿಸಿದ ಪುಸ್ತಕದ ಕನ್ನಡ ಅನುವಾದ, ಭೂತಾನ್ ರಾಜ್ಯದಲ್ಲಿ ರಾಷ್ಟ್ರವ್ಯಾಪಿಯಾಗಿ ಅಳವಡಿಸಲಾದ ಶಿಕ್ಷಣ ಯೋಜನೆಯನ್ನು ಪೌಡಿಯಲ್ “ಮೈ ಗ್ರೀನ್ ಸ್ಕೂಲ್” ಎಂಬ ಹೆಸರಿನಲ್ಲಿ ವಿವರಿಸಿದ್ದಾರೆ. ಮೂಲದ ಇಂಗ್ಲಿಷ್ ಶೀರ್ಷಿಕೆ ಹೊಂದಿಕೊಳ್ಳುವಂತ ಈ ಅನುವಾದಕ್ಕೆ ಪರ್ಣ ಶಾಲೆ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ವಿದ್ಯಾರ್ಥಿ ವ್ಯಕ್ತಿತ್ವ ವನ್ನು ಸರ್ವಾಂಗೀಣ ವಾಗಿ ರೂಪಿಸುವ ಉದಾತ್ತ ಧೈರ್ಯವನ್ನು ಶಿಕ್ಷಣವು ಹೊಂದಿರಬೇಕೆಂಬುದನ್ನು ಈ ಪುಸ್ತಕದಲ್ಲಿ ಗಂಭೀರವಾಗಿ ಪ್ರತಿ ಪಾದಿಸುತ್ತಾರೆ. ಮನುಷ್ಯನು ಪ್ರಕೃತಿಯೊಂದಿಗೆ ತಾದಾತ್ಮ್ಯ ಭಾವವನ್ನು ಹೊಂದಿಕೊಳ್ಳುವುದು ಸರ್ವಾಂಗೀಣ ವ್ಯಕ್ತಿತ್ವದಲ್ಲಿ ಆಂತರ್ಗತವಾಗಿದೆ. ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ಈ ಲಕ್ಷ್ಯವೂ ಇರಬೇಕೆಂಬುದು ಸ್ವತಸ್ಸಿದ್ದ. ಈ ನಿಟ್ಟಿನಲ್ಲಿ ಉದಾತ್ತ ಶಿಕ್ಷಣ ನೀಡುವ ಶಾಲೆಯನ್ನು ಗ್ರೀನ್ ಸ್ಕೂಲ್ ಎಂದು ಕರೆಯುವುದು ಸರ್ವಥಾ ಸ ರಿ. ಅಂತೆಯೇ ಈ ಶಿಕ್ಷಣ ನೀತಿಯನ್ನು ಭಾರತದಲ್ಲೂ ವ್ಯಾಪಕವಾಗಿ ಅಳವಡಿಸುವುದು ಅಪೇಕ್ಷಣೀಯ.
Also available on
eBook available on
-
Daddal Kaadina Mouna
Author: Shashiraj Kavoor
ದಡ್ಡಾಲ್ ಕಾಡಿನ ಮೌನ’ ಕಿರು ಕಾದಂಬರಿಯಲ್ಲಿ ಶಶಿರಾಜ್ ಅವರು ಕೊರಗ ಸಮುದಾಯದ ಬಗ್ಗೆ ಸಾಕಷ್ಟು ಕ್ಷೇತ್ರಕಾರ್ಯದ ಅಧ್ಯಯನ ನಡೆಸಿ, ಆಧುನಿಕತೆಯ ಸಂಕ್ರಮಣಕಾಲದಲ್ಲಿನ ಕೊರಗರ ಬದುಕಿನ ಸಂಗತಿಗಳನ್ನು ಸಾಂಸ್ಕೃತಿಕ ನೆಲೆಯಲ್ಲಿ ನೋಡಲು ಪ್ರಯತ್ನಿಸಿದ್ದಾರೆ. ಅದರ ಜೊತೆಗೆಯೇ ತುಳುವ ಸಂಸ್ಕೃತಿಯ ಗುತ್ತುವಿನಂತಹ ಪರಂಪರೆಯ ಆಡಳಿತದ ಚೌಕಟ್ಟಿನಲ್ಲಿ ನಡೆಯುತ್ತಿದ್ದ ದೈವಾರಾಧನೆಯ ಸ್ವರೂಪ ಮತ್ತು ಸಮಸ್ಯೆಗಳನ್ನು ಕೂಡಾ ಪೋಣಿಸಿದ್ದಾರೆ. ಕೆಲವು ದಶಕಗಳ ಹಿಂದೆ ತುಳುನಾಡಿನಲ್ಲಿ ನಡೆಯುತ್ತಿದ್ದಂತಹ ವಿದ್ಯಮಾನಗಳನ್ನು ಕುರಿತ ಕೆಲವು ಸೂಕ್ಷ್ಮ ನೋಟಗಳು ಇಲ್ಲಿನ ಕಥಾ ಸಂವಿಧಾನದಲ್ಲಿ ಸೇರಿಕೊಂಡಿವೆ. ಇನ್ನೊಂದು ಕಡೆ ಆಧುನಿಕ ವೈದ್ಯಕೀಯ ಪದ್ಧತಿಯು ಬಂದ ಬಳಿಕವೂ ದೇಸಿ ಪರಂಪರೆಯ ವೈದ್ಯಪದ್ಧತಿ ಮತ್ತು ನಂಬಿಕೆಗಳು ಕ್ರಿಯಾಶೀಲವಾಗಿ ಇರುವುದರ ವಾಸ್ತವದ ಚಿತ್ರಣವೂ ಅನಾವರಣವಾಗಿದೆ. ಒಂದು ವ್ಯವಸ್ಥೆಯ ಒಳಗಿನ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಏಕಕಾಲಕ್ಕೆ ಕ್ರಿಯಾಶೀಲವಾಗಿ ಇರುವ ವೈರುಧ್ಯದ ಸಂಗತಿಗಳೂ ಇಲ್ಲಿ ಕಾಣಿಸುತ್ತವೆ. ಕೊರಗಸಮುದಾಯದ ಸಂಕೀರ್ಣ ಭಾವನೆಗಳ ತೊಳಲಾಟವನ್ನು ಇಲ್ಲಿ ಗ್ರಹಿಸಬಹುದು. ಕುಲಸಂಬಂಧಿ ಆಚರಣೆಗಳನ್ನು ಮಾಡುತ್ತಲೂ ಅವುಗಳಲ್ಲಿನ ಅಮಾನವೀಯ ಅಂಶಗಳನ್ನು ತೊಡೆದುಹಾಕುವ ಮನೋಧರ್ಮವು ಕಾದಂಬರಿಯ ಬೆಳವಣಿಗೆಯಲ್ಲಿ ಕಾಣಿಸುತ್ತದೆ.
Interested readers may write to us at mup@manipal.edu about purchasing the book.
-
Chandrayana
Author: Parvathi Pitagi
`ಚಂದ್ರಯಾನ’ ಒಂದು ಅಪೂರ್ವ ಮಾದರಿಯ ಕಾದಂಬರಿ. ಇದರಲ್ಲಿ ಫ್ಯಾಂಟಸಿ ಇದೆ, ಸಾಮಾಜಿಕತೆ ಇದೆ, ಸ್ತ್ರೀಪರ ಚಿಂತನೆ ಇದೆ, ರಾಜಕೀಯ ಇದೆ, ಎಲ್ಲವೂ ಇವೆೆ. ಇದರ ನಿರೂಪಣೆಯಲ್ಲಿಯೂ ಸರಳತೆ ಇದೆ, ಲಾಲಿತ್ಯ ಇದೆ. ಉತ್ತರಕರ್ನಾಟಕದ ಭಾಷಿಕ ಸೊಗಡು ಈ ಕಾದಂಬರಿಯನ್ನು ಅನನ್ಯವಾಗಿಸಿದೆ. ಇದನ್ನು ಓದುವುದೆಂದರೆ ರೋಚಕ ಲೋಕದಲ್ಲಿ ವಿಹರಿಸಿದಂತೆ.
ಕಥಾನಾಯಕಿ ರೋಹಿಣಿ ಚಿಕ್ಕಂದಿನಿAದಲೂ ಆಗಸ, ಆಕಾಶಕಾಯಗಳ ಬಗ್ಗೆ ಸಾಕಷ್ಟು ಕೌತುಕ ಹೊಂದಿರುತ್ತಾಳೆ. ಅದೇ ರೀತಿ ತಾನು ಬೆಳೆದಂತೆಲ್ಲ ಆಸಕ್ತಿ ಯನ್ನು ಬೆಳೆಸಿಕೊಳ್ಳುತ್ತಾ ಮುಂದೊAದು ದಿನ ಗಗನ ಯಾತ್ರೆ ಕೈಗೊಳ್ಳುವ ಕನಸುಹೊತ್ತು ಆ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ ತನ್ನ ಓದನ್ನು ಮುಂದುವರೆಸುತ್ತಾಳೆ. ಆಕೆಯ ಬಾಲ್ಯದ ಗೆಳೆಯ ಚಂದ್ರಶೇಖರ ಹುಟ್ಟುರಾಜಕಾರಣಿ. ಚಿಕ್ಕಂದಿನಿAದಲೇ ಆಕೆಯನ್ನು ಬಯಸುತ್ತಿದ್ದ. ಆತ ಬೆಳೆದ ನಂತರ ಆಕೆಯನ್ನು ಮದುವೆಯಾಗಲು ಇಷ್ಟಪಡುತ್ತಾನೆ. ಆಕೆ ಗಗನ ಯಾತ್ರೆಗೆ ಆಯ್ಕೆಯಾದಲ್ಲಿ ತನಗೆ ದಕ್ಕುವುದಿಲ್ಲವೆಂದು ಮಂತ್ರಿಯಾದ ಆತ ಅಡ್ಡಗಾಲು ಹಾಕುತ್ತಾನೆ.ಎಲ್ಲ ಅಡೆತಡೆಗಳನ್ನು ಮೀರಿ ರೋಹಿಣಿ ಕೊನೆಗೂ ಯಶಸ್ವಿಯಾಗಿ ಉಪಗ್ರಹದ ಮೇಲಿಂದ ಸುಂದರ ಭಾರತವನ್ನು ಕಂಡು `ಸಾರೆ ಜಹಾಂಸೆ ಅಚ್ಛಾ’ ಎಂದು ಉದ್ಗರಿಸುತ್ತಾಳೆ.ಅದು ಇಡೀ ಕಾದಂಬರಿಯ ಭರತವಾಕ್ಯವೂ ಹೌದು.
Interested overseas readers may write to us at mup@manipal.edu about purchasing the book.