Moggina Mathu
₹350.00
Author: Kathyayini Kunjibettu
ಹಳೆಯ ಕಥೆಗಳು ಮತ್ತು ಲೇಖಕರನ್ನು ಹೊಸ ಸಾಹಿತ್ಯ, ಬರಹಗಾರರು ಬದಲಿಸುವುದು ಸಹಜ. ಕಳೆದುಹೋದ ಸಾಹಿತ್ಯದ ನೆನಪುಗಳನ್ನು ಜೀವಂತವಾಗಿಡುವ ಪ್ರಯತ್ನದಲ್ಲಿ, ಸಮಕಾಲೀನ ಲೇಖಕಿ ಡಾ.ಕಾತ್ಯಾಯನಿ ಕುಂಜಿಬೆಟ್ಟು ಅವರು ತಮ್ಮ ಇತ್ತೀಚಿನ ಪುಸ್ತಕ ಮೊಗ್ಗಿನ ಮಾತುಗಳಲ್ಲಿ ಶ್ರೀ ಪಾಲಕಲಾ ಸೀತಾರಾಮ ಭಟ್ ಅವರ ಕಥೆಗಳ ವಿಮರ್ಶೆಯನ್ನು ಪ್ರಸ್ತುತಪಡಿಸಿದ್ದಾರೆ. ಹಳೆಯ ತಲೆಮಾರಿನವರಿಗೆ ಇದು ನೆನಪಿನ ಹಾದಿಯಲ್ಲಿ ಒಂದು ಪ್ರವಾಸವಾಗಿದೆ ಮತ್ತು ಕಿರಿಯರಿಗೆ ಶ್ರೀ ಸೀತಾರಾಮ್ ಭಟ್ ಅವರ ಕೃತಿಗಳನ್ನು ಓದಲು ಮತ್ತು ಅವರ ಜೀವನವನ್ನು ಉತ್ಕೃಷ್ಟಗೊಳಿಸಲು ಸ್ಫೂರ್ತಿಯಾಗಿದೆ.ಹೊಸ ಹೊಸ ಸಾಹಿತ್ಯಸೃಷ್ಟಿಯಿಂದಾಗಿ ಹಳೆಯ ಸಾಹಿತ್ಯ ಹಿನ್ನಲೆಗೆ ಸರಿಯುವುದು ಸಹಜ . ಆಧುನಿಕ ಸಾಹಿತ್ಯದಲ್ಲಿ ಒಂದಿಷ್ಟು ವೇಗವಾಗಿಯೇ ಸಂಭವಿಸುತ್ತಿರುವ ಇಂಥ ಕ್ರಿಯೆಯಿಂದಾಗಿ ಹಳೆಯ ತಲೆಮಾರಿನ ಸಾಹಿತಿಗಳು ವಿಸ್ಮೃತಿಗೆ ಒಳಗಾಗುತಿದ್ದಾರೆ. ಸಮಗ್ರ ಅಭ್ಯಾಸದ ಮೂಲಕ ಇಂಥವರನ್ನು, ಇಂಥವರ ಸಾಹಿತ್ಯವನ್ನು ಮುನ್ನೆಲೆಗೆ ತರುವುದು ನಿರಂತರ ನಡೆಯಬೇಕಾಗುತ್ತದೆ. ಈ ಬಗೆಯ ಅಧ್ಯಯನವಾಗಿದೆ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರನ್ನು ಕುರಿತ ‘ಮೊಗ್ಗಿನ ಮಾತು ‘.
Category: | Kannada |
---|
Author | |
---|---|
Format |
Related products
-
Dodda Samagara Nalmoga
Author: Dinesh Uppoora
ದೊಡ್ಡ ಸಾಮಗರೆಂದೇ ಪ್ರಸಿದ್ಧರಾದ ಮಲ್ಪೆ ಶಂಕರನಾರಾಯಣ ಸಾಮಗರು ಬಹುಮುಖ ವ್ಯಕ್ತಿತ್ವವುಳ್ಳ ಒಬ್ಬ ಮಹಾನ್ ದಾರ್ಶನಿಕ. ಸ್ವಾತಂತ್ರ್ಯ ಹೋರಾಟಗಾರರಾಗಿ ಬ್ರಿಟಿಷರ ಆಡಳಿತದ ಧೋರಣೆಗಳ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದವರು, ಹರಿಕಥಾದಾಸರಾಗಿ ತನ್ನ ವಿಚಾರಧಾರೆಯನ್ನು ಸಮಾಜಕ್ಕೆ ಪ್ರಚುರಪಡಿಸಿದವರು, ತನ್ನ ಪ್ರತ್ಯುತ್ಪನ್ನಮತಿತ್ವದಿಂದ, ಅಗಾಧವಾದ ಪಾಂಡಿತ್ಯದಿಂದ ತಾಳಮದ್ದಳೆ ಅರ್ಥಧಾರಿಗಳಾಗಿ ಕಲಾರಸಿಕರ ಮನಗೆದ್ದವರು. ಉತ್ತಮ ವೇಷಧಾರಿಗಳಾಗಿ ಬೇಡಿಕೆಯ ಕಲಾವಿದರಾದವರು, ಸರಳ ಜೀವನದ ಆದರ್ಶ ವ್ಯಕ್ತಿತ್ವದಿಂದ ಗಾಂಧಿವಾದಿಗಳಾಗಿ ಬದುಕಿದವರು. ಇವರು 1911 ರ ಡಿಸೆಂಬರ್ 11 ರಂದು ಜನಿಸಿ, 1999 ರ ಆಗಸ್ಟ್ 1 ರಂದು ನಿಧನರಾದರು.
ಅವರ ಜೀವನದ ಘಟನೆಗಳನ್ನು ಆಧರಿಸಿ ಬರೆದ “ದೊಡ್ಡ ಸಾಮಗರ ನಾಲ್ಮೊಗ”ವನ್ನು ದಿನೇಶ ಉಪ್ಪೂರರು ಹಲವಾರು ಗ್ರಂಥ, ಸ್ನೇಹಿತರು, ಅಂತರ್ಜಾಲ ಇತ್ಯಾದಿಗಳಿಂದ ಸಂಗ್ರಹಿಸಿ ಅನಾವರಣಗೊಳಿಸಿದ್ದಾರೆ.
Interested readers may write to us at mup@manipal.edu about purchasing the book.
-
Nanna Parni Shaale
Author: Thakur S Powdyel Translator: N T Bhat
ನನ್ನ ಪರ್ಣ ಶಾಲೆ ಠಾಕೂರ್ ಎಸ್ ಪಡೆಯಲು ಅವರು ಇಂಗ್ಲಿಷಿನಲ್ಲಿ ರಚಿಸಿದ ಪುಸ್ತಕದ ಕನ್ನಡ ಅನುವಾದ, ಭೂತಾನ್ ರಾಜ್ಯದಲ್ಲಿ ರಾಷ್ಟ್ರವ್ಯಾಪಿಯಾಗಿ ಅಳವಡಿಸಲಾದ ಶಿಕ್ಷಣ ಯೋಜನೆಯನ್ನು ಪೌಡಿಯಲ್ “ಮೈ ಗ್ರೀನ್ ಸ್ಕೂಲ್” ಎಂಬ ಹೆಸರಿನಲ್ಲಿ ವಿವರಿಸಿದ್ದಾರೆ. ಮೂಲದ ಇಂಗ್ಲಿಷ್ ಶೀರ್ಷಿಕೆ ಹೊಂದಿಕೊಳ್ಳುವಂತ ಈ ಅನುವಾದಕ್ಕೆ ಪರ್ಣ ಶಾಲೆ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ವಿದ್ಯಾರ್ಥಿ ವ್ಯಕ್ತಿತ್ವ ವನ್ನು ಸರ್ವಾಂಗೀಣ ವಾಗಿ ರೂಪಿಸುವ ಉದಾತ್ತ ಧೈರ್ಯವನ್ನು ಶಿಕ್ಷಣವು ಹೊಂದಿರಬೇಕೆಂಬುದನ್ನು ಈ ಪುಸ್ತಕದಲ್ಲಿ ಗಂಭೀರವಾಗಿ ಪ್ರತಿ ಪಾದಿಸುತ್ತಾರೆ. ಮನುಷ್ಯನು ಪ್ರಕೃತಿಯೊಂದಿಗೆ ತಾದಾತ್ಮ್ಯ ಭಾವವನ್ನು ಹೊಂದಿಕೊಳ್ಳುವುದು ಸರ್ವಾಂಗೀಣ ವ್ಯಕ್ತಿತ್ವದಲ್ಲಿ ಆಂತರ್ಗತವಾಗಿದೆ. ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ಈ ಲಕ್ಷ್ಯವೂ ಇರಬೇಕೆಂಬುದು ಸ್ವತಸ್ಸಿದ್ದ. ಈ ನಿಟ್ಟಿನಲ್ಲಿ ಉದಾತ್ತ ಶಿಕ್ಷಣ ನೀಡುವ ಶಾಲೆಯನ್ನು ಗ್ರೀನ್ ಸ್ಕೂಲ್ ಎಂದು ಕರೆಯುವುದು ಸರ್ವಥಾ ಸ ರಿ. ಅಂತೆಯೇ ಈ ಶಿಕ್ಷಣ ನೀತಿಯನ್ನು ಭಾರತದಲ್ಲೂ ವ್ಯಾಪಕವಾಗಿ ಅಳವಡಿಸುವುದು ಅಪೇಕ್ಷಣೀಯ.
Also available on
eBook available on
-
The Prince
Author: K N Venkatasubba Rao
ಮೆಖೈವಲ್ಲಿ ನವೋದಯ ರಾಜತಾಂತ್ರಿಕ, ತತ್ವಜ್ಞಾನಿ, ಬರಹಗಾರ. ಇಟಲಿಯ ಫ್ಲಾರೆನ್ಸ್ ನಗರದ ಬಡಕುಟುಂಬದಲ್ಲಿ 1469ರಲ್ಲಿ ಜನಿಸಿದ ಮೆಖೈವಲ್ಲಿ ತನ್ನ 21ನೆಯ ವಯಸ್ಸಿನಲ್ಲಿ ಫ್ಲಾರೆಂಟೈನ್ ಪ್ರಾಂತ್ಯದ ರಾಜಕೀಯ ರಂಗ ಪ್ರವೇಶಿಸಿದ. ಫ್ಲಾರೆನ್ಸಿನ ಆಡಳಿತಕ್ಕೆ ಅಗತ್ಯ ಬೇಹುಗಾರಿಕೆ ಮಾಹಿತಿ ಒದಗಿಸುವುದು ಮೆಖೈವಲ್ಲಿಯ ಹೊಣೆಯಾಗಿತ್ತು. ಅಧಿಕಾರದ ಗಳಿಕೆ, ಬಳಕೆ ಮತ್ತು ರಕ್ಷಣೆಯ ನಿಟ್ಟಿನಲ್ಲಿ ಮನುಷ್ಯ ಪ್ರಪಂಚಕ್ಕೇ ಅನ್ವಯವಾಗಬಲ್ಲಂತಹ ಮಾರ್ಮಿಕವಾದ ಬೃಹತ್ ವಿನ್ಯಾಸ ಅವನೊಳಗೆ ರೂಪುಗೊಳ್ಳುತ್ತಿತ್ತು. ಈ ಸಂದರ್ಭದಲ್ಲೇ ಫ್ಲಾರೆನ್ಸ್ ಗಣರಾಜ್ಯ ಪತನಗೊಂಡಿತು. ರಾಜಕುಟುಂಬದ ವಿರುದ್ಧ ಪಿತೂರಿಯ ಆರೋಪಕ್ಕೆ ಗುರಿಯಾಗಿ ಮೆಖೈವಲ್ಲಿ ಅಧಿಕಾರಭ್ರಷ್ಟನಾಗಬೇಕಾಯಿತು. ತನ್ನ ಜೀವಿತದ ಮುಂದಿನ ದಿನಗಳನ್ನು ಬರವಣಿಗೆಗೆ ಮೀಸಲಿಟ್ಟಿದ್ದ ಮೆಖೈವಲ್ಲಿ ಐವತ್ತೆಂಟನೆಯ ವಯಸ್ಸಿನಲ್ಲಿ ಅಂದರೆ 1527ರಲ್ಲಿ ವಿಧಿವಶನಾದ. 1532ರಲ್ಲಿ ಅಚ್ಚು ಕಂಡ ಅವನ `ಪ್ರಿನ್ಸಿಪೆ’, ಇಂಗ್ಲಿಷಿನಲ್ಲಿ `ದ ಪ್ರಿನ್ಸ್ ‘ ಆಗಿ 1640ರಲ್ಲಿ ಅಧಿಕೃತವಾಗಿ ಪ್ರಕಟಗೊಂಡಿತ್ತು. ಯುರೋಪಿನ ವ್ಯಾಪ್ತಿಯೊಳಗೆಯೇ ಸಾಕಷ್ಟು ವದಂತಿಗಳಿಗೆ ಒಳಗಾಗಿದ್ದ `ಪ್ರಿನ್ಸಿಪೆ’, `ದ ಪ್ರಿನ್ಸ್ ‘ ಆಗಿ ಮೆಚ್ಚುಗೆ ಮತ್ತು ಟೀಕೆಗಳನ್ನು ಇಂದಿಗೂ ಎದುರಿಸುತ್ತಲೇ ಇದೆ. ಮೆಖೈವಲ್ಲಿ `ಆಧುನಿಕ ರಾಜತಂತ್ರದ ಜನಕ’ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅವನನ್ನು ಅರ್ಥಶಾಸ್ತ್ರದ ಕರ್ತೃ ಕೌಟಿಲ್ಯನೊಡನೆ ಹೋಲಿಸುವ ವಾಡಿಕೆ ಇದೆ. ಇದು ಎಷ್ಟು ಸಮಂಜಸ ಎಂಬುದರ ಬಗ್ಗೆಯೂ ಪ್ರಾಜ್ಞರ ನಡುವೆ ಜಿಜ್ಞಾಸೆಯಿದೆ.
Interested customers may write to us at mup@manipal.edu about purchasing the book.
Also available on
-
Ati Sannakathe: Swarupa, Siddhi Mattu Sadhyate
Author: T P Ashoka Translator: Prakash Nayak
ಕಲ್ಪನೆ ಎಂಬುದು ಸತ್ಯಕ್ಕಿಂತ ಹೆಚ್ಚು ಸತ್ಯ, ಕನಸು ಎಂಬುದು ವಾಸ್ತವಕ್ಕಿಂತ ಹೆಚ್ಚು ವಾಸ್ತವ ಎಂಬುದು ಅತಿ ಸಣ್ಣಕತೆಗಳು ನಮಗೆ ಮನದಟ್ಟು ಮಾಡಿಕೊಡುವಂತೆ ಕಾಣುತ್ತವೆ. ಹೆಚ್ಚಿನ ಅತಿ ಸಣ್ಣಕತೆಗಳು ವಾಸ್ತವವಾದೀ ಮಾರ್ಗವನ್ನು ಬಿಟ್ಟುಕೊಟ್ಟಿರುವುದಕ್ಕೆ ಪ್ರಾಯಶಃ ಇದೇ ಕಾರಣ. ವಿವರಣೆ-ವರ್ಣನೆಗಳ ಹಂಗು ಇಲ್ಲದಿರುವುದರಿಂದ ಸಂಕ್ಷಿಪ್ತತೆ ಮತ್ತು ಸಾಂದ್ರತೆಗಳು ಇವುಗಳ ಸಹಜ ಲಕ್ಷಣಗಳಾಗಿವೆ. ಅಂತರಂಗದ ಆಳವನ್ನು, ಅಮೂರ್ತವನ್ನು, ಸಾಂಕೇತಿಕವಾದುದದ್ದನ್ನು ಮತ್ತೊಂದೇ ಸ್ತರದಲ್ಲಿ ಗ್ರಹಿಸಿ ಅಭಿವ್ಯಕ್ತಿಸಲು ಲೇಖಕರಿಗೆ ಈ ಪ್ರಕಾರ ಹೇಳಿ ಮಾಡಿಸಿದಂತಿದೆ. ಹಾಗಾಗಿ ಜಗತ್ತಿನ ಎಲ್ಲ ಭಾಷೆಗಳ ದೊಡ್ಡ ಲೇಖಕರು, ದೀರ್ಘವಾದ ಕತೆ-ಕಾದಂಬರಿಗಳನ್ನು ಬರೆದವರನ್ನೂ ಸೇರಿಸಿಕೊಂಡು, ಈ ಪ್ರಕಾರದಲ್ಲಿ ಕೃಷಿಮಾಡಿದ್ದಾರೆ. ತುಂಬ ಸೂಕ್ಷ್ಮವಾದ, ನಾಜೂಕಾದ ಸಂಗತಿಗಳನ್ನು ಸೂಚ್ಯವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಇನ್ನೂ ಕೆಲವು ವೇಳೆ ಮುಚ್ಚಿಟ್ಟು ಹೇಳಲು ಈ ಪ್ರಕಾರವು ತನ್ನ ಸ್ವರೂಪದ ಕಾರಣದಿಂದಲೇ ಅನುವು ಮಾಡಿಕೊಡುತ್ತದೆ. ಇದು ಆಧುನಿಕ ಪೂರ್ವದ ದಂತಕತೆ, ನೀತಿಕತೆ, ದೃಷ್ಟಾಂತ ಕತೆಗಳ ಆಧುನಿಕ ರೂಪವಾಗಿ ಕಂಡರೂ ಆಶ್ಚರ್ಯವಿಲ್ಲ.
Also available on
eBook available on
-
Chandrayana
Author: Parvathi Pitagi
`ಚಂದ್ರಯಾನ’ ಒಂದು ಅಪೂರ್ವ ಮಾದರಿಯ ಕಾದಂಬರಿ. ಇದರಲ್ಲಿ ಫ್ಯಾಂಟಸಿ ಇದೆ, ಸಾಮಾಜಿಕತೆ ಇದೆ, ಸ್ತ್ರೀಪರ ಚಿಂತನೆ ಇದೆ, ರಾಜಕೀಯ ಇದೆ, ಎಲ್ಲವೂ ಇವೆೆ. ಇದರ ನಿರೂಪಣೆಯಲ್ಲಿಯೂ ಸರಳತೆ ಇದೆ, ಲಾಲಿತ್ಯ ಇದೆ. ಉತ್ತರಕರ್ನಾಟಕದ ಭಾಷಿಕ ಸೊಗಡು ಈ ಕಾದಂಬರಿಯನ್ನು ಅನನ್ಯವಾಗಿಸಿದೆ. ಇದನ್ನು ಓದುವುದೆಂದರೆ ರೋಚಕ ಲೋಕದಲ್ಲಿ ವಿಹರಿಸಿದಂತೆ.
ಕಥಾನಾಯಕಿ ರೋಹಿಣಿ ಚಿಕ್ಕಂದಿನಿAದಲೂ ಆಗಸ, ಆಕಾಶಕಾಯಗಳ ಬಗ್ಗೆ ಸಾಕಷ್ಟು ಕೌತುಕ ಹೊಂದಿರುತ್ತಾಳೆ. ಅದೇ ರೀತಿ ತಾನು ಬೆಳೆದಂತೆಲ್ಲ ಆಸಕ್ತಿ ಯನ್ನು ಬೆಳೆಸಿಕೊಳ್ಳುತ್ತಾ ಮುಂದೊAದು ದಿನ ಗಗನ ಯಾತ್ರೆ ಕೈಗೊಳ್ಳುವ ಕನಸುಹೊತ್ತು ಆ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ ತನ್ನ ಓದನ್ನು ಮುಂದುವರೆಸುತ್ತಾಳೆ. ಆಕೆಯ ಬಾಲ್ಯದ ಗೆಳೆಯ ಚಂದ್ರಶೇಖರ ಹುಟ್ಟುರಾಜಕಾರಣಿ. ಚಿಕ್ಕಂದಿನಿAದಲೇ ಆಕೆಯನ್ನು ಬಯಸುತ್ತಿದ್ದ. ಆತ ಬೆಳೆದ ನಂತರ ಆಕೆಯನ್ನು ಮದುವೆಯಾಗಲು ಇಷ್ಟಪಡುತ್ತಾನೆ. ಆಕೆ ಗಗನ ಯಾತ್ರೆಗೆ ಆಯ್ಕೆಯಾದಲ್ಲಿ ತನಗೆ ದಕ್ಕುವುದಿಲ್ಲವೆಂದು ಮಂತ್ರಿಯಾದ ಆತ ಅಡ್ಡಗಾಲು ಹಾಕುತ್ತಾನೆ.ಎಲ್ಲ ಅಡೆತಡೆಗಳನ್ನು ಮೀರಿ ರೋಹಿಣಿ ಕೊನೆಗೂ ಯಶಸ್ವಿಯಾಗಿ ಉಪಗ್ರಹದ ಮೇಲಿಂದ ಸುಂದರ ಭಾರತವನ್ನು ಕಂಡು `ಸಾರೆ ಜಹಾಂಸೆ ಅಚ್ಛಾ’ ಎಂದು ಉದ್ಗರಿಸುತ್ತಾಳೆ.ಅದು ಇಡೀ ಕಾದಂಬರಿಯ ಭರತವಾಕ್ಯವೂ ಹೌದು.
Interested overseas readers may write to us at mup@manipal.edu about purchasing the book.
-
Wodeyara Kaalada Mysurina Adalitha matthu Saamajika Ithihasa
Author: Pavamana R D, D S Achuta Rao
ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳೆಂದು ಹೆಸರಾಗಿರುವ ಮೈಸೂರಿನ ಒಡೆಯರು ಕರ್ನಾಟಕದ ಇತಿಹಾಸಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕಲಾರಂಗಗಳಲ್ಲೂ ಮೈಸೂರು ಅರಸರು ವಿಜಯನಗರದ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿದರು. ರಾಜಒಡೆಯರ್, ರಣಧೀರ ಕಂಠೀರವ, ಚಿಕ್ಕದೇವರಾಜ ಒಡೆಯರ್ ಅವರ ಆಳ್ವಿಕೆಯ ಕಾಲಘಟ್ಟದಲ್ಲಿ ಮೈಸೂರು ಸರ್ವಾಂಗೀಣ ಪ್ರಗತಿ ಸಾಧಿಸಿತು. ಈ ವಂಶದ ಮೊದಲ ಪ್ರಮುಖ ಅರಸು ರಾಜ ಒಡೆಯರ್ರಿಂದ ಆರಂಭಿಸಿ ಮೈಸೂರು ಆಂಗ್ಲರ ಅಧೀನವಾಗುವವರೆಗಿನ ಆಡಳಿತ ಹಾಗೂ ಸಾಮಾಜಿಕ ಇತಿಹಾಸ ಇಲ್ಲಿದೆ. ಮೈಸೂರು ಸಂಸ್ಥಾನದ ಎರಡು ಮಹತ್ವಪೂರ್ಣ ಶತಮಾನಗಳ ಕಾಲದ ಆಡಳಿತ, ಕಂದಾಯ ನೀತಿಗಳು, ನ್ಯಾಯಾಡಳಿತ, ಸೈನ್ಯ ವ್ಯವಸ್ಥೆ, ಪ್ರಾಂತೀಯ ಹಾಗೂ ಸ್ಥಳೀಯ ಆಡಳಿತ, ಸಾಮಾಜಿಕ ಜೀವನ ಹಾಗೂ ಧರ್ಮ, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಮತ್ತು ಆಸ್ಥಾನ ಸಂಸ್ಕೃತಿ ಹೀಗೆ ಬಹುಮುಖೀ ನೆಲೆಗಳ ವಿಸ್ತಾರವಾದ, ಅಧ್ಯಯನಪೂರ್ಣ ಸಂಶೋಧನಾ ವರದಿಯಾಗಿ ಇದು ಸ್ವಾತಂತ್ರೋತ್ತರ ತಲೆಮಾರಿನ ವಿದ್ವಾಂಸರ ಸಂಶೋಧನಾ ವೈಖರಿಗೆ ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು. ಕರ್ನಾಟಕದ ಅದರಲ್ಲೂ ಮೈಸೂರಿನ ಒಡೆಯರ ಇತಿಹಾಸದ ಬಗೆಗೆ ಸಂಶೋಧನೆಗಳು ಇನ್ನೂ ಕಣ್ತೆರೆಯುತ್ತಿದ್ದ ಕಾಲದಲ್ಲಿ ಡಿ. ಎಸ್. ಅಚ್ಯುತರಾಯರ ಈ ಸಂಶೋಧನ ಕಾರ್ಯ ಮಹತ್ವಪೂರ್ಣವಾದುದು. ಅಂದಿಗೆ ಲಭ್ಯವಿದ್ದ ಎಲ್ಲಾ ಬಗೆಯ ಮೂಲ ಹಾಗೂ ಆನುಷಂಗೀಕ ಆಕರಗಳನ್ನು ಬಳಸಿಕೊಂಡು, ಸಂಶೋಧನೆಯ ಎಲ್ಲಾ ಚೌಕಟ್ಟಿನೊಳಗೆ ವಸ್ತುನಿಷ್ಠವಾಗಿ ರೂಫುಗೊಂಡಿದೆ ಈ ಕೃತಿ. ಸಾಮಾಜಿಕ ಇತಿಹಾಸವನ್ನು ಪುನರ್ ರೂಪಿಸುವಾಗಲಂತೂ ಸಮಕಾಲೀನ ಸಾಹಿತ್ಯದ ಎಲ್ಲಾ ರೂಪಗಳನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಅಗತ್ಯ ವಿರುವೆಡೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿನ ಉಲ್ಲೇಖಗಳು, ಟಿಪ್ಪಣಿಗಳೂ, ವಿವರಣೆಗಳೂ ಈ ಸಂಶೋಧನೆಯ ಮೌಲ್ಯವನ್ನು ಹೆಚ್ಚಿಸಿವೆ. ಸಂಶೋಧನೆಗೆ ಪೂರಕವಾಗಿ ಗ್ರಂಥಋಣ, ನಕ್ಷೆಗಳು, ಸಂಕ್ಷೇಪಾಕ್ಷರಗಳು ಹಾಗೂ ಒಡೆಯರ ವಂಶಾವಳಿ ನೀಡಲಾಗಿದೆ. ಆಧಾರಗಳ ಮೇಲಿನ ಟಿಪ್ಪಣಿಯು ಸಂಶೋಧಕರಿಗೆ ತಮ್ಮ ಕಾರ್ಯಕ್ಷೇತ್ರದ ಮೇಲಿನ ಒಡೆತನದ ದ್ಯೋತಕ. ಅಪಾರ ಸಂಖ್ಯೆಯ ಹಸ್ತಪ್ರತಿಗಳ ಮತ್ತು ಶಾಸನಗಳ ಬಳಕೆ ಈ ಕೃತಿಯ ಹೆಗ್ಗಳಿಕೆ.
Interested readers may write to us at mup@manipal.edu about purchasing the book.
-
Kannadadalli Patthyaparishkarana- Ondu Kaipidi
Author: N T Bhat
ಸ್ವಾನುಭವವಷ್ಟನ್ನೇ ಬಂಡವಾಳವಾಗಿರಿಸಿಕೊಂಡು ತೊಡಗಿದ ಉದ್ಯಮ ಈ ಹೊತ್ತಗೆಯ ರಚನೆ. ಕನ್ನಡದಲ್ಲಿ ಕರಡಚ್ಚು ಪ್ರತಿಗಳನ್ನು ತಿದ್ದಿಕೊಟ್ಟ ಅನುಭವಗಳನ್ನು ತುಸು ವಿಸ್ತರಿಸಿ ಸಣ್ಣ ಕೈಪಿಡಿಯ ರೂಪದಲ್ಲಿ ತಂದರೆ ಒಳ್ಳೆಯದಲ್ಲವೇ ಎಂಬ ಆಲೋಚನೆ ಈ ಕಿರುಹೊತ್ತಗೆಯ ರಚನೆಯ ಮೂಲ. -ಎನ್. – ತಿರುಮಲೇಶ್ವರ ಭಟ್ಟ ಡಾ. ತಿರುಮಲೇಶ್ವರ ಭಟ್ಟರು ದೀರ್ಘಕಾಲ ಅನುವಾದಕ್ಷೇತ್ರದಲ್ಲಿ (ಇಂಗ್ಲಿಷ್ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್ಗೆ, ಜರ್ಮನ್ನಿಂದ ಇಂಗ್ಲಿಷ್ಗೆ, ಜರ್ಮನ್ನಿಂದ ಕನ್ನಡಕ್ಕೆ) ದುಡಿದವರು ಮತ್ತು ವಿವಿಧ ರೀತಿಯ ಪುಸ್ತಕಗಳ ಯೋಜನೆ, ಸಂಯೋಜನೆ, ಪುನರ್ನಿರೂಪಣೆ, ಸಂಪಾದನೆ ಮೊದಲಾದ ಕೆಲಸಗಳನ್ನು ಮಾಡಿದವರು. ಈಯೆಲ್ಲ ಕೆಲಸಗಳಲ್ಲಿ ಸತತವಾಗಿ ಒಳಗೊಂಡಿರುವುದು ಕರಡಚ್ಚು ತಿದ್ದುವ ಕೆಲಸ. ಯಾವುದೇ ಕಾರ್ಯಕ್ರಮದಲ್ಲಿದ್ದರೂ ಅದರ ಎಡೆಯೆಡೆಯ ಬಿಡುವಿನಲ್ಲಿ ಒಂದಿಷ್ಟು ಕರಡಚ್ಚು ತಿದ್ದುವ ಕೆಲಸವನ್ನು ಸತತವಾಗಿ ಮಾಡುತ್ತಲೇ ಬಂದವರು. ಪಠ್ಯಪರಿಷ್ಕರಣದ ಹಲವು ಹಂತಗಳನ್ನು ಚೆನ್ನಾಗಿ ಬಲ್ಲ ಅವರು ತಮ್ಮಲ್ಲಿರುವ ಮಾಹಿತಿಯನ್ನೂ ಅನುಭವವನ್ನೂ ಕ್ರೋಡೀಕರಿಸಿ ಕನ್ನಡದಲ್ಲಿ ಪಠ್ಯಪರಿಷ್ಕರಣದ ಆವಶ್ಯಕತೆಯೇನೆಂಬುದು ಸರಳವಾಗಿ ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಅವರಿಂದ ಭಾಷಾಕ್ಷೇತ್ರಕ್ಕೆ ಇನ್ನಷ್ಟು ಸೇವೆ ಸಲ್ಲಲಿ ಎಂಬುದು ಮನದಾಳದ ಆಶಯ. – ಪಾದೇಕಲ್ಲು ವಿಷ್ಣು ಭಟ್ಟ.
Interested readers may write to us at mup@manipal.edu about purchasing the book.
Also available on