Sangeetashastragranthachandrike Volume-2
₹650.00
Author: S Karthik
ಸಂಗೀತಶಾಸ್ತ್ರಗ್ರಂಥಚಂದ್ರಿಕೆ ಯ ಎರಡನೆಯ ಸಂಪುಟವು ಭಾರತೀಯ ಸಂಗೀತದ ಶಾಸ್ತ್ರಕಾರರು ಮತ್ತು ಶಾಸ್ತ್ರಗ್ರಂಥಗಳ ಚರಿತ್ರೆಯನ್ನು ಒಳಗೊಂಡ ಕೃತಿಯಾಗಿದೆ. ಇದರಲ್ಲಿ ಪ್ರಕಟಿತ, ಅಪ್ರಕಟಿತ, ಲಭ್ಯ, ಅಲಭ್ಯ ಶಾಸ್ತ್ರಗ್ರಂಥಗಳ ಬಗೆಗೆ ಮೂಲ ಆಕರಗಳನ್ನೇ ಆಮೂಲಾಗ್ರವಾಗಿ ಗಮನಿಸಿ, ವಿಶದವಾಗಿ ಪರಿಚಯ ಮಾಡಿಕೊಡಲಾಗಿದೆ. ಎಷ್ಟೋ ಜನ ಅಜ್ಞಾತಶಾಸ್ತ್ರಕಾರರು ಮತ್ತು ಶಾಸ್ತ್ರಕೃತಿಗಳ ಬಗೆಗೆ ಖಚಿತವಾದ ಮಾಹಿತಿ ಆಕರ ಸಾಮಗ್ರಿಯ ಸಹಿತ ಇಲ್ಲಿ ದೊರಕುತ್ತದೆ. ಕರ್ನಾಟಕ ಸಂಗೀತ ಎಂಬ ಹೆಸರು ಹೇಗೆ ಬಂತೆಂಬ ವಿಚಾರದಲ್ಲಿ ಸ್ಪಷ್ಟವಾದ ವಿವರಗಳು ಇಲ್ಲಿ ದಾಖಲಾಗಿವೆ. ಹಿಂದಿನ ಅಧ್ಯಯನಗಳಿಗಿಂತ ಹೆಚ್ಚು ವಸ್ತುನಿಷ್ಠ ಮಾಹಿತಿ ಇಲ್ಲಿ ದೊರಕುತ್ತದೆ. ಕ್ರಿ.ಶ.ಸು ೧೨೫೦-೧೪೦೦ರ ನಡುವಿನ ಅವಧಿಯಲ್ಲಿದ್ದ ಶಾಸ್ತ್ರಕಾರರು ಮತ್ತು ಆ ಅವಧಿಯಲ್ಲಿ ರಚಿತವಾಗಿರುವ ಶಾಸ್ತ್ರಗ್ರಂಥಗಳ ಬಗೆಗೆ ರಚಿತವಾಗಿರುವ ಈ ಕೃತಿಯ ದ್ವಿತೀಯ ಸಂಪುಟವು ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ವಿರಳ ಅಪರೂಪದ ಕೃತಿಗಳಲ್ಲಿ ಒಂದಾಗಿದೆ.
Interested customers may write to us at mup@manipal.edu about purchasing the book.
Categories: | Indian Regional Languages, Kannada |
---|
Related products
-
The Prince
Author: K N Venkatasubba Rao
ಮೆಖೈವಲ್ಲಿ ನವೋದಯ ರಾಜತಾಂತ್ರಿಕ, ತತ್ವಜ್ಞಾನಿ, ಬರಹಗಾರ. ಇಟಲಿಯ ಫ್ಲಾರೆನ್ಸ್ ನಗರದ ಬಡಕುಟುಂಬದಲ್ಲಿ 1469ರಲ್ಲಿ ಜನಿಸಿದ ಮೆಖೈವಲ್ಲಿ ತನ್ನ 21ನೆಯ ವಯಸ್ಸಿನಲ್ಲಿ ಫ್ಲಾರೆಂಟೈನ್ ಪ್ರಾಂತ್ಯದ ರಾಜಕೀಯ ರಂಗ ಪ್ರವೇಶಿಸಿದ. ಫ್ಲಾರೆನ್ಸಿನ ಆಡಳಿತಕ್ಕೆ ಅಗತ್ಯ ಬೇಹುಗಾರಿಕೆ ಮಾಹಿತಿ ಒದಗಿಸುವುದು ಮೆಖೈವಲ್ಲಿಯ ಹೊಣೆಯಾಗಿತ್ತು. ಅಧಿಕಾರದ ಗಳಿಕೆ, ಬಳಕೆ ಮತ್ತು ರಕ್ಷಣೆಯ ನಿಟ್ಟಿನಲ್ಲಿ ಮನುಷ್ಯ ಪ್ರಪಂಚಕ್ಕೇ ಅನ್ವಯವಾಗಬಲ್ಲಂತಹ ಮಾರ್ಮಿಕವಾದ ಬೃಹತ್ ವಿನ್ಯಾಸ ಅವನೊಳಗೆ ರೂಪುಗೊಳ್ಳುತ್ತಿತ್ತು. ಈ ಸಂದರ್ಭದಲ್ಲೇ ಫ್ಲಾರೆನ್ಸ್ ಗಣರಾಜ್ಯ ಪತನಗೊಂಡಿತು. ರಾಜಕುಟುಂಬದ ವಿರುದ್ಧ ಪಿತೂರಿಯ ಆರೋಪಕ್ಕೆ ಗುರಿಯಾಗಿ ಮೆಖೈವಲ್ಲಿ ಅಧಿಕಾರಭ್ರಷ್ಟನಾಗಬೇಕಾಯಿತು. ತನ್ನ ಜೀವಿತದ ಮುಂದಿನ ದಿನಗಳನ್ನು ಬರವಣಿಗೆಗೆ ಮೀಸಲಿಟ್ಟಿದ್ದ ಮೆಖೈವಲ್ಲಿ ಐವತ್ತೆಂಟನೆಯ ವಯಸ್ಸಿನಲ್ಲಿ ಅಂದರೆ 1527ರಲ್ಲಿ ವಿಧಿವಶನಾದ. 1532ರಲ್ಲಿ ಅಚ್ಚು ಕಂಡ ಅವನ `ಪ್ರಿನ್ಸಿಪೆ’, ಇಂಗ್ಲಿಷಿನಲ್ಲಿ `ದ ಪ್ರಿನ್ಸ್ ‘ ಆಗಿ 1640ರಲ್ಲಿ ಅಧಿಕೃತವಾಗಿ ಪ್ರಕಟಗೊಂಡಿತ್ತು. ಯುರೋಪಿನ ವ್ಯಾಪ್ತಿಯೊಳಗೆಯೇ ಸಾಕಷ್ಟು ವದಂತಿಗಳಿಗೆ ಒಳಗಾಗಿದ್ದ `ಪ್ರಿನ್ಸಿಪೆ’, `ದ ಪ್ರಿನ್ಸ್ ‘ ಆಗಿ ಮೆಚ್ಚುಗೆ ಮತ್ತು ಟೀಕೆಗಳನ್ನು ಇಂದಿಗೂ ಎದುರಿಸುತ್ತಲೇ ಇದೆ. ಮೆಖೈವಲ್ಲಿ `ಆಧುನಿಕ ರಾಜತಂತ್ರದ ಜನಕ’ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅವನನ್ನು ಅರ್ಥಶಾಸ್ತ್ರದ ಕರ್ತೃ ಕೌಟಿಲ್ಯನೊಡನೆ ಹೋಲಿಸುವ ವಾಡಿಕೆ ಇದೆ. ಇದು ಎಷ್ಟು ಸಮಂಜಸ ಎಂಬುದರ ಬಗ್ಗೆಯೂ ಪ್ರಾಜ್ಞರ ನಡುವೆ ಜಿಜ್ಞಾಸೆಯಿದೆ.
Interested customers may write to us at mup@manipal.edu about purchasing the book.
Also available on
-
MOMO
Author: Michael Ende ,Translator: Jayashree Kasaravalli
The fantasy novel originally written in German and translated into English, has been enjoyed by millions of readers worldwide. It has now been translated into Kannada as well. The novel has a very unusual story about time. The story describes how people in the modern era use the time, and a girl named MOMO teaches how it should be used. Humans have stolen time from modern societies, and a little girl of mysterious origin brings it back. In today’s society, the story has timeless relevance.
ನಗರದ ಅಂಚಿನಲ್ಲಿ ಹಾಳುಬಿದ್ದಿದೆ ಒಂದು ಆಂಪಿ ಥೀಯೇಟರ್. ಅಲ್ಲಿರುವ ದಿಕ್ಕಿಲ್ಲದ ಪುಟ್ಟ ಹುಡುಗಿ ಮೊಮೊ. ಒಂದು ದಿನ ಬೂದು ಬಣ್ಣದ ಬಟ್ಟೆ ತೊಟ್ಟು ದುಷ್ಟರು ಸದ್ದಿಲ್ಲದೇ ಬಂದು ನಗರವನ್ನು ಆಕ್ರಮಿಸಿಕೊಳ್ಳುತ್ತಾರೆ. ಅವರನ್ನು ಹಿಮ್ಮೆಟ್ಟಿಸುವ ಶಕ್ತಿಯಿರುವುದು ಮೊಮೊಗೆ ಮಾತ್ರ. ಅವಳು ಪ್ರೊಫೆಸರ್ ಹೋರಾ ಮತ್ತು ಅವರಲ್ಲಿರುವ ವಿಚಿತ್ರ ಆಮೆಯ ನೆರವಿನಿಂದ ಕಾಲದ ಸರಹದ್ದುಗಳನ್ನು ದಾಟಿ ಆ ದುಷ್ಟರ ಒಳಸಂಚುಗಳನ್ನು ಬಯಲುಮಾಡುತ್ತಿದ್ದಾಳೆ. ‘ಮೊಮೊ’ ಕಾಲವನ್ನು ಕದಿಯುವವರ ಕಥೆಯಾಗಿರುವ ಜೊತೆಗೇ ಕದ್ದ ಕಾಲವನ್ನು ಮತ್ತೆ ಜನರಿಗೆ ತಂದುಕೊಡುವ ಒಂದು ಮಗುವಿನ ಸಾಹಸಮಯ ಕಥೆಯು ಆಗಿದೆ.
Interested customers may write to us at mup@manipal.edu about purchasing the book.
-
Phedra
Translator: Madhava Chippalli
ರಾಸೀನ್ನ ಫೀದ್ರಾ ನಾಟಕವು ಪಾಶ್ಚಿಮಾತ್ಯ ನಾಟಕ ಸಾಹಿತ್ಯದಲ್ಲೇ ಒಂದು ಆಯಕಟ್ಟಿನ ಕೃತಿ. ಗ್ರೀಕ್ ಮತ್ತು ಎಲಿಜಬೆಥನ್ ನಾಟಕಗಳಲ್ಲಿ ಕಾಣಸಿಗದ ಹೊಸ ಬಗೆಯ ಮನೋಲೋಕವೊಂದನ್ನು ತನ್ನ ಪಾತ್ರಗಳಿಗೆ ಧಾರಣೆ ಮಾಡಿಸಿದ ಈ ನಾಟಕವು ಆ ಮೂಲಕವೇ ಈ ಪರಂಪರೆಯಲ್ಲಿ ಮನೋವಿಜ್ಞಾನಕ್ಕೆ ಒಂದು ಖಾಯಂ ಸ್ಥಾನವನ್ನು ಒದಗಿಸಿಕೊಟ್ಟಿತು. ಮುಂದೆ ಬಹುತೇಕ ಪಾಶ್ಚಿಮಾತ್ಯ ನಾಟಕಗಳು ಈ ಪರಂಪರೆಯನ್ನು ಮುಂದುವರಿಸಿದವು; ರಂಗಭೂಮಿಯಲ್ಲೂ ಮನೋಲೋಕವನ್ನು ಮುಂದಕ್ಕೆ ತರುವ ವಿಭಿನ್ನ ಪ್ರಯೋಗಗಳಿಗೆ ಈ ಪರಂಪರೆಯು ಚಾಲ್ತಿ ನೀಡಿತು. ಈ ಸಂಪ್ರದಾಯಕ್ಕೆ ವಿರೋಧಿಯಾದ ಫ್ರಾನ್ಸಿನ ಪ್ರಸಿದ್ಧ ರಂಗಕರ್ಮಿ ಆಂತೋನಿನ್ ಆರ್ತೋನ ಮಾತುಗಳನ್ನು ಕೇಳುವುದಾದರೆ, ಪಾಶ್ಚಿಮಾತ್ಯ ರಂಗಭೂಮಿಯಲ್ಲಿ ‘ಸೈಕಾಲಜಿಯ ದುರ್ಬೀಜ’ ಬಿತ್ತಿದ ಕೃತಿ ಇದು! ಹಾಗಿರುವುದರಿಂದ, ನಾವು ಈ ನಾಟಕವನ್ನು ಹೇಗೇ ಓದಲಿ, ಓದದೆ ಇದ್ದರೆ ಅಷ್ಟರ ಮಟ್ಟಿಗೆ ಪಾಶ್ಚಾತ್ಯ ನಾಟಕ ಸಂಪ್ರದಾಯದ ಅರಿವು ಅಪೂರ್ಣ. ಅಂಥ ಪ್ರಮುಖ ನಾಟಕವೊಂದು ಇನ್ನೂ ಕನ್ನಡಕ್ಕೆ ಬಾರದೆ ಉಳಿದಿತ್ತು; ಆ ಲೋಪವನ್ನು ಈ ಅನುವಾದವು ಸಮರ್ಥವಾಗಿಯೇ ತುಂಬಿಸಿದೆ. ಮೂಲದ ನಿಷ್ಠೆಯೊಂದಿಗೆ ಭಾಷಾಗಾಂಭೀರ್ಯ ಮತ್ತು ಮಾತಿನ ಸುಭಗತೆ ಎರಡನ್ನೂ ಒಟ್ಟಿಗೇ ಹಿಡಿಯಲು ಯತ್ನಿಸಿರುವ ಈ ಅನುವಾದವನ್ನು ನಾನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ.
Interested readers may write to us at mup@manipal.edu about purchasing the book.
-
Vaidehi Dhvani
Author: Vaidehi
ಪ್ರಸ್ತುತ ಪುಸ್ತಕವು ಮುಂದಿನ ಕಾಲಕ್ಕೆ ವೈದೇಹಿಯವರ ಧ್ವನಿ ಮತ್ತು ನಿರೂಪಣೆಯನ್ನು ದಾಖಲಿಸುವ ಪ್ರಯತ್ನವಾಗಿದೆ. ಅವರ ಕಥೆಗಳ ನಿರೂಪಣೆಯು ಕುಂದಾಪುರದ ಆಡುಭಾಷೆಯ ಶ್ರೀಮಂತಿಕೆಯಲ್ಲಿ ಮತ್ತು ಅದರಾಚೆಗೆ ಕನ್ನಡದ ಸಂಸ್ಕೃತಿಯೊಂದಿಗೆ ಏಕತೆಯ ಭಾವನೆಯೊಂದಿಗೆ ಎತ್ತರದಲ್ಲಿದೆ. ಐದು ಕಥೆಗಳು ಮತ್ತು ಏಳು ಕವಿತೆಗಳ ಈ ಪುಸ್ತಕವನ್ನು ಅವರು ಓದಿದ್ದಾರೆ. ಈ ಆಯ್ದ ಕಥೆಗಳು ಈಗಾಗಲೇ ಪ್ರಕಟವಾದವುಗಳಾಗಿವೆ ಆದರೆ ಅದನ್ನು ವಿಭಿನ್ನವಾಗಿಸುವುದು ಅವುಗಳನ್ನು ಓದುವ ವಿಧಾನವಾಗಿದೆ. ಪ್ರತಿ ಪದ, ಪ್ರತಿ ವಿರಾಮಚಿಹ್ನೆ, ಪ್ರತಿ ವಿರಾಮ, ಅವರ ಧ್ವನಿಯಲ್ಲಿ ತುಂಬಾ ವಿಭಿನ್ನವಾಗಿದೆ. “ವೈದೇಹಿ ಧ್ವನಿ” ಎಂಬ ಹೆಸರನ್ನು ಅವರ ಧ್ವನಿಯ ನಾದದ ಗುಣಮಟ್ಟವನ್ನು ಪ್ರತಿನಿಧಿಸಲು ನೀಡಲಾಗಿದೆ ಆದರೆ ಅದು ಕೇಳುಗ ಅಥವಾ ಓದುಗನಲ್ಲಿ ಹೊಸ ಶಕ್ತಿಯನ್ನು ಹುಟ್ಟುಹಾಕುತ್ತದೆ. ಆಕೆಯ ಕಥೆಗಳನ್ನು ಅಧ್ಯಯನ ಮಾಡಲು ಬಯಸುವವರಿಗೆ ಅನುಕೂಲವಾಗುವಂತೆ ಆಡಿಯೋ ಸಿಡಿಯು ಪಠ್ಯ ರೂಪದಲ್ಲಿ ಪುಸ್ತಕವನ್ನು ಸಹ ಹೊಂದಿದೆ. ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅನೇಕ ವಿದ್ಯಾರ್ಥಿಗಳು ಅಧ್ಯಯನದ ವಿಷಯವಾಗಿ ತೆಗೆದುಕೊಳ್ಳುತ್ತಾರೆ.
Interested readers may write to us at mup@manipal.edu about purchasing the book.
Also available on
-
Wodeyara Kaalada Mysurina Adalitha matthu Saamajika Ithihasa
Author: Pavamana R D, D S Achuta Rao
ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳೆಂದು ಹೆಸರಾಗಿರುವ ಮೈಸೂರಿನ ಒಡೆಯರು ಕರ್ನಾಟಕದ ಇತಿಹಾಸಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕಲಾರಂಗಗಳಲ್ಲೂ ಮೈಸೂರು ಅರಸರು ವಿಜಯನಗರದ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿದರು. ರಾಜಒಡೆಯರ್, ರಣಧೀರ ಕಂಠೀರವ, ಚಿಕ್ಕದೇವರಾಜ ಒಡೆಯರ್ ಅವರ ಆಳ್ವಿಕೆಯ ಕಾಲಘಟ್ಟದಲ್ಲಿ ಮೈಸೂರು ಸರ್ವಾಂಗೀಣ ಪ್ರಗತಿ ಸಾಧಿಸಿತು. ಈ ವಂಶದ ಮೊದಲ ಪ್ರಮುಖ ಅರಸು ರಾಜ ಒಡೆಯರ್ರಿಂದ ಆರಂಭಿಸಿ ಮೈಸೂರು ಆಂಗ್ಲರ ಅಧೀನವಾಗುವವರೆಗಿನ ಆಡಳಿತ ಹಾಗೂ ಸಾಮಾಜಿಕ ಇತಿಹಾಸ ಇಲ್ಲಿದೆ. ಮೈಸೂರು ಸಂಸ್ಥಾನದ ಎರಡು ಮಹತ್ವಪೂರ್ಣ ಶತಮಾನಗಳ ಕಾಲದ ಆಡಳಿತ, ಕಂದಾಯ ನೀತಿಗಳು, ನ್ಯಾಯಾಡಳಿತ, ಸೈನ್ಯ ವ್ಯವಸ್ಥೆ, ಪ್ರಾಂತೀಯ ಹಾಗೂ ಸ್ಥಳೀಯ ಆಡಳಿತ, ಸಾಮಾಜಿಕ ಜೀವನ ಹಾಗೂ ಧರ್ಮ, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಮತ್ತು ಆಸ್ಥಾನ ಸಂಸ್ಕೃತಿ ಹೀಗೆ ಬಹುಮುಖೀ ನೆಲೆಗಳ ವಿಸ್ತಾರವಾದ, ಅಧ್ಯಯನಪೂರ್ಣ ಸಂಶೋಧನಾ ವರದಿಯಾಗಿ ಇದು ಸ್ವಾತಂತ್ರೋತ್ತರ ತಲೆಮಾರಿನ ವಿದ್ವಾಂಸರ ಸಂಶೋಧನಾ ವೈಖರಿಗೆ ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು. ಕರ್ನಾಟಕದ ಅದರಲ್ಲೂ ಮೈಸೂರಿನ ಒಡೆಯರ ಇತಿಹಾಸದ ಬಗೆಗೆ ಸಂಶೋಧನೆಗಳು ಇನ್ನೂ ಕಣ್ತೆರೆಯುತ್ತಿದ್ದ ಕಾಲದಲ್ಲಿ ಡಿ. ಎಸ್. ಅಚ್ಯುತರಾಯರ ಈ ಸಂಶೋಧನ ಕಾರ್ಯ ಮಹತ್ವಪೂರ್ಣವಾದುದು. ಅಂದಿಗೆ ಲಭ್ಯವಿದ್ದ ಎಲ್ಲಾ ಬಗೆಯ ಮೂಲ ಹಾಗೂ ಆನುಷಂಗೀಕ ಆಕರಗಳನ್ನು ಬಳಸಿಕೊಂಡು, ಸಂಶೋಧನೆಯ ಎಲ್ಲಾ ಚೌಕಟ್ಟಿನೊಳಗೆ ವಸ್ತುನಿಷ್ಠವಾಗಿ ರೂಫುಗೊಂಡಿದೆ ಈ ಕೃತಿ. ಸಾಮಾಜಿಕ ಇತಿಹಾಸವನ್ನು ಪುನರ್ ರೂಪಿಸುವಾಗಲಂತೂ ಸಮಕಾಲೀನ ಸಾಹಿತ್ಯದ ಎಲ್ಲಾ ರೂಪಗಳನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಅಗತ್ಯ ವಿರುವೆಡೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿನ ಉಲ್ಲೇಖಗಳು, ಟಿಪ್ಪಣಿಗಳೂ, ವಿವರಣೆಗಳೂ ಈ ಸಂಶೋಧನೆಯ ಮೌಲ್ಯವನ್ನು ಹೆಚ್ಚಿಸಿವೆ. ಸಂಶೋಧನೆಗೆ ಪೂರಕವಾಗಿ ಗ್ರಂಥಋಣ, ನಕ್ಷೆಗಳು, ಸಂಕ್ಷೇಪಾಕ್ಷರಗಳು ಹಾಗೂ ಒಡೆಯರ ವಂಶಾವಳಿ ನೀಡಲಾಗಿದೆ. ಆಧಾರಗಳ ಮೇಲಿನ ಟಿಪ್ಪಣಿಯು ಸಂಶೋಧಕರಿಗೆ ತಮ್ಮ ಕಾರ್ಯಕ್ಷೇತ್ರದ ಮೇಲಿನ ಒಡೆತನದ ದ್ಯೋತಕ. ಅಪಾರ ಸಂಖ್ಯೆಯ ಹಸ್ತಪ್ರತಿಗಳ ಮತ್ತು ಶಾಸನಗಳ ಬಳಕೆ ಈ ಕೃತಿಯ ಹೆಗ್ಗಳಿಕೆ.
Interested readers may write to us at mup@manipal.edu about purchasing the book.
-
Bhashantara Jijnase, Pratyakshike
Author: N T Bhat
“ಭಾಷಾಂತರವೆಂದರೆ ಎರಡು ಭಾಷಿಕರ ನಡುವೆ ಸಂವಹನವನ್ನು ಏರ್ಪಡಿಸುವ ಕಾರ್ಯವಿಧಾನ. ಒಂದು ಭಾಷೆಯಲ್ಲಿ ಕಥಿಸಿದ್ದನ್ನು, ವಿವರಿಸಿದ್ದನ್ನು, ಸಂಭಾಷಿಸಿದ್ದನ್ನು, ಭಾವನೆಗಳನ್ನು ವ್ಯಕ್ತಪಡಿಸಿದ್ದನ್ನು, ವಿಶ್ಲೇಷಿಸಿದ್ದನ್ನು, ವರ್ಣಿಸಿದ್ದನ್ನು, ವಾದಿಸಿದ್ದನ್ನು ಅದಕ್ಕನುಗುಣವಾಗಿ ಇನ್ನೊಂದು ಭಾಷೆಗೆ ಪರಿವರ್ತಿಸುವುದು ಭಾಷಾಂತರವೆಂಬ ಪ್ರಕ್ರಿಯೆ. ಒಂದು ಭಾಷೆಯಲ್ಲಿರುವ ಭಾವಲಹರಿ, ವಿಚಾರಧಾರೆಗಳನ್ನು ಇನ್ನೊಂದು ಭಾಷೆಗೆ ಸ್ಥಳಾಂತರಮಾಡುವುದು ಭಾಷಾಂತರವೆಂದು ಸ್ಥೂಲವಾಗಿ ತಿಳಿದುಕೊಳ್ಳಬಹುದು.”
“ಪ್ರಪಂಚದ ಒಂದು ಮೂಲೆಯಲ್ಲಿ ಕಂಡುಕೊಂಡ ಹೊಸ ಸಿದ್ಧಾಂತಗಳು, ಆವಿಷ್ಕಾರಗಳು ಇನ್ನೊಂದು ಮೂಲೆಯ ಇನ್ನೊಂದು ಭಾಷೆಯನ್ನಾಡುವ ಜನರಿಗೆ ತಲುಪಿದಾಗ ಅವುಗಳ ಪ್ರಯೋಜನವನ್ನು ಪಡೆಯುವ ಜನರ ಸಂಖ್ಯೆ ಸ್ವಾಭಾವಿಕವಾಗಿಯೇ ಹೆಚ್ಚುತ್ತದೆ. ಪ್ರಪಂಚದಲ್ಲಿ ಹೆಚ್ಚು ಭಾಷೆಗಳನ್ನು ಕಲಿಸಿದಷ್ಟೂ ಭಾಷಾಂತರದ ಅಗತ್ಯ ಕೆಲವು ಸ್ತರಗಳಲ್ಲಿ ಕಡಿಮೆಯಾದೀತು. ಆದರೆ, ಅದರಿಂದಾಗಿ ಭಾಷಾಂತರಗಳಿಗೆ ಅವಕಾಶ ಹೆಚ್ಚುತ್ತಾ ಹೋಗುತ್ತದೆ.’’
– ನೀರ್ಕಜೆ ತಿರುಮಲೇಶ್ವರ ಭಟ್
Interested customers may write to us at mup@manipal.edu about purchasing the book.
Also available on
-
Aparichita
Translator: Prakash Nayakತರ್ಕವಾಗಲೀ ವಿಜ್ಞಾನವಾಗಲೀ ಮೂಲತಃ ಯಾವ ಅರ್ಥವನ್ನೂ ಅಡಗಿಸಿಕೊಂಡಿರದ ಈ ಅಸಂಬದ್ಧ ಬದುಕನ್ನು ವಿವರಿಸಲಾರವು. ಆದರೆ, ಅದಕ್ಕಾಗಿ ಅತೀಂದ್ರಿಯ ಶಕ್ತಿಯೊಂದನ್ನು ನಂಬುವುದು `ತಾತ್ವಿಕ ಆತ್ಮಹತ್ಯೆ’. ಇಂತಹ ತಾತ್ವಿಕ ಅಥವಾ ದೈಹಿಕ ಆತ್ಮಹತ್ಯೆಗಳು ಜಗತ್ತಿನ ಅರ್ಥರಾಹಿತ್ಯಕ್ಕೆ ಉತ್ತರಗಳಲ್ಲ. ಅಸಂಬದ್ಧತೆಯನ್ನು ಗುರುತಿಸಿ ಬದುಕುವುದೊಂದೇ ಅದಕ್ಕಿರಬಹುದಾದ ಉತ್ತರ ಎಂದು ವ್ಯಾಖ್ಯಾನಿಸಿದ ಫ್ರೆಂಚ್ ಲೇಖಕ, ತತ್ವಜ್ಞಾನಿ ಮತ್ತು ಪತ್ರಕರ್ತ ಆಲ್ಬರ್ಟ್ ಕಮೂ ಬರೆದಿರುವುದು ಕೆಲವೇ ಕಾದಂಬರಿಗಳು ಮತ್ತು ಕೆಲವು ವ್ಯಾಖ್ಯಾನಗಳು. ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾದ ಅಲ್ಬರ್ಟ್ ಕಮೂನ ಸುಪ್ರಸಿದ್ದ ಕಾದಂಬರಿ “ದ ಸ್ಟ್ರೇಂಜರ್” ಕನ್ನಡವೂ ಸೇರಿದಂತೆ ವಿಶ್ವದ ಹಲವು ಭಾಷೆಗಳಲ್ಲಿ ಅನುವಾದಗೊಂಡು ಹಲವು ಪೀಳಿಗೆಗಳ ಓದುಗರನ್ನು ವಿವಿಧ ರೀತಿಗಳಲ್ಲಿ ಆಕರ್ಷಿಸುತ್ತ ಬಂದಿದೆ. ೧೯೪೨ರಲ್ಲಿ ಮೊದಲು ಪ್ರಕಟವಾದ ಈ ಫ್ರೆಂಚ್ ಕಾದಂಬರಿ ಕಳೆದ ಎಂಟು ದಶಕಗಳಲ್ಲಿ ಪಡೆದುಕೊಂಡಿರುವ ವಿಮರ್ಶಾತ್ಮಕ ಪ್ರತಿಕ್ರಿಯೆ- ಪ್ರತಿಸ್ಪಂದನೆಗಳೂ ವೈವಿಧ್ಯಮಯವಾಗಿವೆ. ಪ್ರತಿವೊಂದು ಪೀಳಿಗೆಯೂ ಈ ಕೃತಿಯನ್ನು ಹೊಸದಾಗಿ ಓದುತ್ತ, ಅನುವಾದಿಸಿಕೊಳ್ಳುತ್ತ, ವಿಮರ್ಶಿಸುತ್ತ, ಇಂಥ ಅನುವಾದಗಳ, ವ್ಯಾಖಾನಗಳ ಒಂದು ಪರಂಪರೆಯೇ ಸೃಷ್ಟಿಯಾಗಿದೆ. ಕನ್ನಡದಲ್ಲಿ ಈ ಮೊದಲೇ, ೧೯೭ ೦ರಲ್ಲಿ, “ಅನ್ಯ” ಎಂಬ ಹೆಸರಿನಲ್ಲಿ ಡಾ. ಡಿ. ಎ. ಶಂಕರ್ ಅವರಿಂದ ಅನುವಾದಗೊಂಡಿದ್ದ ಈ ಕಾದಂಬರಿಯು ಅರ್ಧ ಶತಮಾನದ ನಂತರ ಮತ್ತೆ “ಅಪರಿಚಿತ” ಎಂಬ ಹೆಸರಿನಿಂದ ಶ್ರೀ ಪ್ರಕಾಶ್ ನಾಯಕ್ ಅವರಿಂದ ಹೊಸದಾಗಿ ಅನುವಾದಗೊಂಡು ಈ ಪರಂಪರೆಯನ್ನು ಮುಂದುವರಿಸಿದೆ. ಸ್ವತಃ ಓರ್ವ ಪ್ರತಿಭಾವಂತ ಕತೆಗಾರ-ಕಾದಂಬರಿಕಾರರಾಗಿರುವ ಪ್ರಕಾಶ್ ನಾಯಕ್ ಅವರ ಈ ಸರಳ ಸುಂದರ ಅನುವಾದವು ಕಮೂ ಕೃತಿಯ ಮರು ಓದು-ಹೊಸ ಓದುಗರನ್ನು ಆಹ್ವಾನಿಸುವಂತಿದೆ.Interested customers may write to us at mup@manipal.edu about purchasing the book.
Also available on