“ಹ್ಯಾರೀ ಪಾಟರ್ “ನಂತಹ ಕಥೆಗಳು ಮಕ್ಕಳನ್ನು ಬಹಳವಾಗಿ ಆಕರ್ಷಿಸುತ್ತಿರುವುದನ್ನು ಕಂಡು, ಅದನ್ನು ನೆನಪಿಸುವಂಥ ಕಾಲ್ಪನಿಕ ಸಾಹಸಮಯ ಕಥೆಯನ್ನು ಲೇಖಕಿಯವರು ರಚಿಸಿರುವರು. ಈ ಮೂಲಕ ನಮ್ಮ ಸಂಸ್ಕೃತಿಯಲ್ಲಿ ಬೆರೆತು ಹೋಗಿದ್ದ ಗುರುಕುಲ ರೀತಿಯ ವಿದ್ಯಾಭ್ಯಾಸ, ಪರಕಾಯಪ್ರವೇಶ, ಅಸ್ತ್ರ – ಶಸ್ತ್ರ ಪ್ರಯೋಗವೇ ಮೊದಲಾದ ಅನೇಕ ಕುತೂಹಲಕರವಾದ ವಿಷಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಶ್ರೀಮತಿಸತ್ಯವತಿಯವರ ಉದ್ದೇಶವಾಗಿದೆ.
ಹಾಸ್ಯ ಬರವಣಿಗೆಯ ಮೂಲಕ ಪ್ರಮುಖವಾಗಿ ಗುರುತಿಸಲ್ಪಟ್ಟಿರುವ ಲೇಖಕಿ ಸತ್ಯವತಿ ಹರಿಕೃಷ್ಣನ್, ಚಿಂತನ ಹಾಗೂ ಅನುವಾದ ಕೃತಿಗಳನ್ನು ರಚಿಸಿ, ಗಂಭೀರ ಬರವಣಿಗೆಯ ಕ್ಷೇತ್ರದಲ್ಲೂ ಕೈಯಾಡಿಸಿರುವರು. ಸನ್ಮಾನ್ಯರಾದ ದೇಜಗೌ ಮತ್ತು ಜಿಟಿನಾ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ “ಪುಸ್ತಕ ಪ್ರಪಂಚ”ದಲ್ಲಿ ಇವರ ಹಲವಾರು ಅನುವಾದಿತ ಲೇಖನಗಳು ಪಡಿಮೂಡಿದ್ದವು. “ಕುಂಬಾಸ’, “ನುಗ್ಗೇಹಳ್ಳಿ ಪಂಕಜ”ವೇ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾದ ಶ್ರೀಮತಿ ಸತ್ಯವತಿಯವರ ಲೇಖನಗಳು “ತರಂಗ”, ತುಷಾರ”, ಮಯೂರ”, “ಹೊಸತು” ಮುಂತಾದ ಜನಪ್ರಿಯ ಪತ್ರಿಕಗಳಲ್ಲಿ ಮಾತ್ರವಲ್ಲದೆ, ೨೦೦೨ ರಲ್ಲಿ ಡೆಟ್ರಾಯ್ಟ್ ನಲ್ಲಿ ನಡೆದ “ಅಕ್ಕ” ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಈಗಾಗಲೇ ಆರು ಹಾಸ್ಯ ಸಂಕಲನಗಳೂ ಸೇರಿದಂತೆ ಒಟ್ಟು ಎಂಟು ಕೃತಿಗಳನ್ನು ಲೋಕಾರ್ಪಣೆ ಮಾಡಿರುವ ಸತ್ಯವತಿಯವರ ಹೊಸ ಕೃತಿಯೇ ಹದಿಹರೆಯದ ಮಕ್ಕಳಿಗಾಗಿ ಬರೆದಂಥ “ರಿಪುಂಜಯ”.
Reviews
There are no reviews yet.