Kannada Pathya Parishkarana- Ondu Kaipidi

By (author)N T Bhat

150.00

Author:

ಸ್ವಾನುಭವವಷ್ಟನ್ನೇ ಬಂಡವಾಳವಾಗಿರಿಸಿಕೊಂಡು ತೊಡಗಿದ ಉದ್ಯಮ ಈ ಹೊತ್ತಗೆಯ ರಚನೆ. ಕನ್ನಡದಲ್ಲಿ ಕರಡಚ್ಚು ಪ್ರತಿಗಳನ್ನು ತಿದ್ದಿಕೊಟ್ಟ ಅನುಭವಗಳನ್ನು ತುಸು ವಿಸ್ತರಿಸಿ ಸಣ್ಣ ಕೈಪಿಡಿಯ ರೂಪದಲ್ಲಿ ತಂದರೆ ಒಳ್ಳೆಯದಲ್ಲವೇ ಎಂಬ ಆಲೋಚನೆ ಈ ಕಿರುಹೊತ್ತಗೆಯ ರಚನೆಯ ಮೂಲ. -ಎನ್. – ತಿರುಮಲೇಶ್ವರ ಭಟ್ಟ ಡಾ. ತಿರುಮಲೇಶ್ವರ ಭಟ್ಟರು ದೀರ್ಘಕಾಲ ಅನುವಾದಕ್ಷೇತ್ರದಲ್ಲಿ (ಇಂಗ್ಲಿಷ್‍ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್‍ಗೆ, ಜರ್ಮನ್‍ನಿಂದ ಇಂಗ್ಲಿಷ್‍ಗೆ, ಜರ್ಮನ್‍ನಿಂದ ಕನ್ನಡಕ್ಕೆ) ದುಡಿದವರು ಮತ್ತು ವಿವಿಧ ರೀತಿಯ ಪುಸ್ತಕಗಳ ಯೋಜನೆ, ಸಂಯೋಜನೆ, ಪುನರ್ನಿರೂಪಣೆ, ಸಂಪಾದನೆ ಮೊದಲಾದ ಕೆಲಸಗಳನ್ನು ಮಾಡಿದವರು. ಈಯೆಲ್ಲ ಕೆಲಸಗಳಲ್ಲಿ ಸತತವಾಗಿ ಒಳಗೊಂಡಿರುವುದು ಕರಡಚ್ಚು ತಿದ್ದುವ ಕೆಲಸ. ಯಾವುದೇ ಕಾರ್ಯಕ್ರಮದಲ್ಲಿದ್ದರೂ ಅದರ ಎಡೆಯೆಡೆಯ ಬಿಡುವಿನಲ್ಲಿ ಒಂದಿಷ್ಟು ಕರಡಚ್ಚು ತಿದ್ದುವ ಕೆಲಸವನ್ನು ಸತತವಾಗಿ ಮಾಡುತ್ತಲೇ ಬಂದವರು. ಪಠ್ಯಪರಿಷ್ಕರಣದ ಹಲವು ಹಂತಗಳನ್ನು ಚೆನ್ನಾಗಿ ಬಲ್ಲ ಅವರು ತಮ್ಮಲ್ಲಿರುವ ಮಾಹಿತಿಯನ್ನೂ ಅನುಭವವನ್ನೂ ಕ್ರೋಡೀಕರಿಸಿ ಕನ್ನಡದಲ್ಲಿ ಪಠ್ಯಪರಿಷ್ಕರಣದ ಆವಶ್ಯಕತೆಯೇನೆಂಬುದು ಸರಳವಾಗಿ ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಅವರಿಂದ ಭಾಷಾಕ್ಷೇತ್ರಕ್ಕೆ ಇನ್ನಷ್ಟು ಸೇವೆ ಸಲ್ಲಲಿ ಎಂಬುದು ಮನದಾಳದ ಆಶಯ.  – ಪಾದೇಕಲ್ಲು ವಿಷ್ಣು ಭಟ್ಟ.

Interested readers may write to us at mup@manipal.edu about purchasing the book. 

Also available on