Chandrayana

By (author)Parvathi Pitagi

280.00

Author: Parvathi Pitagi

`ಚಂದ್ರಯಾನ’ ಒಂದು ಅಪೂರ್ವ ಮಾದರಿಯ ಕಾದಂಬರಿ. ಇದರಲ್ಲಿ ಫ್ಯಾಂಟಸಿ ಇದೆ, ಸಾಮಾಜಿಕತೆ ಇದೆ, ಸ್ತ್ರೀಪರ ಚಿಂತನೆ ಇದೆ, ರಾಜಕೀಯ ಇದೆ, ಎಲ್ಲವೂ ಇವೆೆ. ಇದರ ನಿರೂಪಣೆಯಲ್ಲಿಯೂ ಸರಳತೆ ಇದೆ, ಲಾಲಿತ್ಯ ಇದೆ. ಉತ್ತರಕರ್ನಾಟಕದ ಭಾಷಿಕ ಸೊಗಡು ಈ ಕಾದಂಬರಿಯನ್ನು ಅನನ್ಯವಾಗಿಸಿದೆ. ಇದನ್ನು ಓದುವುದೆಂದರೆ ರೋಚಕ ಲೋಕದಲ್ಲಿ ವಿಹರಿಸಿದಂತೆ.

ಕಥಾನಾಯಕಿ ರೋಹಿಣಿ ಚಿಕ್ಕಂದಿನಿAದಲೂ ಆಗಸ, ಆಕಾಶಕಾಯಗಳ ಬಗ್ಗೆ ಸಾಕಷ್ಟು ಕೌತುಕ ಹೊಂದಿರುತ್ತಾಳೆ. ಅದೇ ರೀತಿ ತಾನು ಬೆಳೆದಂತೆಲ್ಲ ಆಸಕ್ತಿ ಯನ್ನು ಬೆಳೆಸಿಕೊಳ್ಳುತ್ತಾ ಮುಂದೊAದು ದಿನ ಗಗನ ಯಾತ್ರೆ ಕೈಗೊಳ್ಳುವ ಕನಸುಹೊತ್ತು ಆ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ ತನ್ನ ಓದನ್ನು ಮುಂದುವರೆಸುತ್ತಾಳೆ. ಆಕೆಯ ಬಾಲ್ಯದ ಗೆಳೆಯ ಚಂದ್ರಶೇಖರ ಹುಟ್ಟುರಾಜಕಾರಣಿ. ಚಿಕ್ಕಂದಿನಿAದಲೇ ಆಕೆಯನ್ನು ಬಯಸುತ್ತಿದ್ದ. ಆತ ಬೆಳೆದ ನಂತರ ಆಕೆಯನ್ನು ಮದುವೆಯಾಗಲು ಇಷ್ಟಪಡುತ್ತಾನೆ. ಆಕೆ ಗಗನ ಯಾತ್ರೆಗೆ ಆಯ್ಕೆಯಾದಲ್ಲಿ ತನಗೆ ದಕ್ಕುವುದಿಲ್ಲವೆಂದು ಮಂತ್ರಿಯಾದ ಆತ ಅಡ್ಡಗಾಲು ಹಾಕುತ್ತಾನೆ.
ಎಲ್ಲ ಅಡೆತಡೆಗಳನ್ನು ಮೀರಿ ರೋಹಿಣಿ ಕೊನೆಗೂ ಯಶಸ್ವಿಯಾಗಿ ಉಪಗ್ರಹದ ಮೇಲಿಂದ ಸುಂದರ ಭಾರತವನ್ನು ಕಂಡು `ಸಾರೆ ಜಹಾಂಸೆ ಅಚ್ಛಾ’ ಎಂದು ಉದ್ಗರಿಸುತ್ತಾಳೆ.

ಅದು ಇಡೀ ಕಾದಂಬರಿಯ ಭರತವಾಕ್ಯವೂ ಹೌದು.

Interested overseas  readers may write to us at mup@manipal.edu about purchasing the book.

Also available on