Aparichita

 170.00

In Stock

ಪ್ರಶ್ನಿಸುವುದನ್ನು ಸಹಿಸದ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸುತ್ತಿದ್ದ ಕಮೂವಿನ ರಾಜಕೀಯ ನಿಲುವು, ಅದರಲ್ಲೂ ಮರಣದಂಡನೆ ವಿಧಿಸುವ ಕ್ರಮದ ಬಾಲಿಶತನ ಈ ಕಾದಂಬರಿಯಲ್ಲಿ ಸ್ಪಷ್ಟವಾಗಿ ಮೂಡಿಬಂದಿವೆ. ಸಾವನ್ನು ದಿಟ್ಟಿಸುವಾಗ ಹುಟ್ಟುವ ಜೀವನ ಪ್ರೀತಿ, ಬದುಕಿನ ಸೀಮಿತತೆಯ ಹಂಗಿನಲ್ಲೇ ಪ್ರತಿಕ್ಷಣ ಎಲ್ಲವೂ ಆಗುವ ರೀತಿ ಅನನ್ಯ. ವೈಯಕ್ತಿಕ ನೆಲೆಯಲ್ಲಿ ಸಹಜವೆನ್ನಿಸಬಹುದಾದ ನಡವಳಿಕೆಗಳು, ಕೊಲೆಗಾರನೆಂದು ಕಟಕಟೆಯಲ್ಲಿ ನಿಂತಾಗ ಹೊಸ ಅರ್ಥ ಪಡೆದುಕೊಳ್ಳುವ ರೀತಿ ಅಚ್ಚರಿ ಹುಟ್ಟಿಸುತ್ತದೆ.


Available on

Amazon

ತರ್ಕವಾಗಲೀ ವಿಜ್ಞಾನವಾಗಲೀ ಮೂಲತಃ ಯಾವ ಅರ್ಥವನ್ನೂ ಅಡಗಿಸಿಕೊಂಡಿರದ ಈ ಅಸಂಬದ್ಧ ಬದುಕನ್ನು ವಿವರಿಸಲಾರವು. ಆದರೆ, ಅದಕ್ಕಾಗಿ ಅತೀಂದ್ರಿಯ ಶಕ್ತಿಯೊಂದನ್ನು ನಂಬುವುದು `ತಾತ್ವಿಕ ಆತ್ಮಹತ್ಯೆ’. ಇಂತಹ ತಾತ್ವಿಕ ಅಥವಾ ದೈಹಿಕ ಆತ್ಮಹತ್ಯೆಗಳು ಜಗತ್ತಿನ ಅರ್ಥರಾಹಿತ್ಯಕ್ಕೆ ಉತ್ತರಗಳಲ್ಲ. ಅಸಂಬದ್ಧತೆಯನ್ನು ಗುರುತಿಸಿ ಬದುಕುವುದೊಂದೇ ಅದಕ್ಕಿರಬಹುದಾದ ಉತ್ತರ ಎಂದು ವ್ಯಾಖ್ಯಾನಿಸಿದ ಫ್ರೆಂಚ್ ಲೇಖಕ, ತತ್ವಜ್ಞಾನಿ ಮತ್ತು ಪತ್ರಕರ್ತ ಆಲ್ಬರ್ಟ್ ಕಮೂ ಬರೆದಿರುವುದು ಕೆಲವೇ ಕಾದಂಬರಿಗಳು ಮತ್ತು ಕೆಲವು ವ್ಯಾಖ್ಯಾನಗಳು. ಸಮಕಾಲೀನ ಮಾನವನ ಆತ್ಮಸಾಕ್ಷಿ ಎದುರಿಸುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಾಹಿತ್ಯ ಸೃಷ್ಟಿಗಾಗಿ 1957ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕಮೂವಿನ ಕೃತಿ ಮತ್ತು ವಿಚಾರಗಳು ಇಂದಿಗೂ ಸಾಹಿತ್ಯ ಜಗತ್ತಿನಲ್ಲಿ ಪ್ರಸ್ತುತವಾಗಿವೆ ಮತ್ತು ಸಮಕಾಲೀನ ಚಿಂತನೆಯ ಮೇಲೆ ಪರಿಣಾಮ ಬೀರುತ್ತಿವೆ. ಕಮೂವಿನ ಸಾಹಿತ್ಯ ಮತ್ತು ಚಿಂತನೆಗೆ ಇಂದಿಗೂ ಹೊಸಹೊಸ ಪ್ರತಿಕ್ರಿಯೆಗಳು ಬರುತ್ತಿರುವುದು ಅವುಗಳ ಜೀವಂತಿಕೆಗೆ ಸಾಕ್ಷಿಯಾಗಿವೆ.

ಸಮಕಾಲೀನ ಮನುಷ್ಯನ ಅಂತಃಸಾಕ್ಷಿ ಎದುರಿಸುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಾಹಿತ್ಯ ಸೃಷ್ಟಿಗಾಗಿ 1957 ರಲ್ಲಿ ನೊಬೆಲ್ ಪ್ರಶಸ್ತಿಯ ಗೌರವವನ್ನು ಪಡೆದುಕೊಂಡ ಫ್ರೆಂಚ್ ಲೇಖಕ ಆಲ್ಬರ್ಟ್ ಕಮೂ (1913-1960) ತನ್ನ ಲೇಖನ, ಚಿಂತನ ಮತ್ತು ರಾಜಕೀಯ ಕ್ರಿಯೆಗಳಿಂದ ಇನ್ನೂ ಪ್ರಸ್ತುತನಾಗಿ ಉಳಿದಿದ್ದಾನೆ. ಅವನ ಕತೆ, ಕಾದಂಬರಿ, ನಾಟಕ, ಪ್ರಬಂಧಗಳು ಜಗತ್ತಿನ ಹಲವು ಭಾಷೆಗಳಿಗೆ ಅನುವಾದಗೊಂಡಿದ್ದು ಅಲ್ಲಿನ ಓದುಗರು ಮತ್ತು ಲೇಖಕರನ್ನು ಗಾಢವಾಗಿ ಪ್ರಭಾವಿಸಿವೆ. ದ ಸ್ಟ್ರೇಂಜರ್, ದ ಪ್ಲೇಗ್, ದ ಫಾಲ್ – ಕಾದಂಬರಿಗಳು, ಕಲಿಗುಲಾ, ಕ್ರಾಸ್ಡ್ ಪರ್ಪಸ್ – ನಾಟಕಗಳು, ದ ಮಿಥ್ ಆಫ್ ಸಿಸಿಫಸ್, ದ ರೆಬೆಲ್ – ತತ್ವಶಾಸ್ತ್ರೀಯ ಗ್ರಂಥಗಳು, ಎಕ್ಸೈಲ್ ಅಂಡ್ ದ ಕಿಂಗ್‍ಡಂ – ಕಥಾಸಂಕಲನ… ಉಲ್ಲೇಖಿಸಬಹುದಾದ ಕಮೂನ ಕೆಲವು ಮುಖ್ಯ ಕೃತಿಗಳು.

Reviews

There are no reviews yet.

Be the first to review “Aparichita”

Your email address will not be published. Required fields are marked *