-
Pu Shri Sanskriti Sampada
₹850.00Author: Prabhakar Joshi and Pu Guruprasad Bhat
ಕನ್ನಡನಾಡಿನ ವಿಶಿಷ್ಟ, ಬಹುಶ್ರುತ ವಿದ್ವಾಂಸ ಪು. ಶ್ರೀನಿವಾಸ ಭಟ್ಟ [೧೯೩೯-೨೦೧೧] ಅವರ ಸಂಸ್ಕೃತಿಯ ಕುರಿತ ಲೇಖನಗಳ ಸಂಕಲನವಿದು. ನಿಶ್ಚಿತ ನಿರ್ವಚನಕ್ಕೆ ಸಿಗದ ಅಸಾಮಾನ್ಯ ವಿಸ್ತಾರ, ವೈವಿಧ್ಯ ಮತ್ತು ಅರಿವಿನ ಆಗರವಾಗಿದ್ದ ಪು. ಶ್ರೀ. ಅವರು ಎಲ್ಲ ಅರ್ಥಗಳಲ್ಲಿ ‘ದೇಸಿ’ ಪರಂಪರೆಯ ಘನ ಪಂಡಿತರು. ಇತಿಹಾಸ, ತುಳುಸಂಸ್ಕೃತಿ. ಯಕ್ಷಗಾನ, ಹಳಗನ್ನಡ, ಜಾನಪದ ವಸ್ತು-ಸಂಗತಿ, ನಂಬಿಕೆ-ನಡವಳಿಕೆ, ವ್ಯಕ್ತಿ-ವಿಷಯ- ಇಂಥ ವಿಷಯಗಳಲ್ಲಿ ತಲಸ್ಪರ್ಶಿ ಅನುಭವವಿದ್ದ ಅವರ ವಿಶ್ಲೇಷಣೆ, ನಿರೂಪಣ ಶೈಲಿ ಅನ್ಯತ್ರ ದುರ್ಲಭ ಎಂಬಷ್ಟು ಅನನ್ಯ.
ಅವರ ಬರಹಗಳ ಶಿರೋನಾಮೆಗಳ ಅವುಗಳ ವೈಶಿಷ್ಟ್ಯವನ್ನು ಹೇಳುತ್ತವೆ- ತೊಟ್ಟಿಲುಗಳು, ಮುಳ್ಳುಗಳು, ಕೋಣೆಗಳು, ಬಾವಿಗಳು, ಗುಡ್ಡಗಳು, ಕೊಡೆಗಳು, ತಿಂಡಿಗಳು, ಪ್ರಸಾದ ವೈವಿಧ್ಯ, ಹೂಮಾಲೆ, ತೋಡು-ಗುಂರ್ಪೆ-ಮದಕ, ದಾರಿಗಳು, ಯಕ್ಷಗಾನ ಪ್ರಸಂಗಗಳು, ಪ್ರಸಂಗ ಸಾಹಿತ್ಯ ಸಮೀಕ್ಷೆ, ಸತ್ಯಪರೀಕ್ಷೆಯ ವಿಧಾನಗಳು, ನಿಷೇಧ ಮತ್ತು ಪರಿಹಾರ, ಬೇಸಾಯದ ನುಡಿತಗಳು, ಕ್ಷೇತ್ರ ವೃತ್ತಾಂತಗಳು, ಜಾತ್ರೆಗಳು, ಆಳುಪ ವಂಶ, ದಕ್ಷಿಣಕನ್ನಡದಲ್ಲಿ ವೀರ ಶೈವ ಧರ್ಮ, ಶಿಲಾಶಾಸನ ವಿವರ- ಇತ್ಯಾದಿ.ಪಾರಂಪರಿಕ ನೋಟ ಮತ್ತು ಆಧುನಿಕ ಸಂಶೋಧಕನ ದೃಷ್ಟಿಗಳ ಸಮನ್ವಯ, ತುಂಬ ಸರಳ-ಸುಲಭ ರೀತಿಯ ನಿರೂಪಣೆ, ತಪಸ್ಸಿನಂಥ ದೀರ್ಘಕಾಲದ ಅಧ್ಯಯನ, ಸೂಕ್ಷ್ಮ ಪರಿಶೀಲನ, ನೈಜ ಸಂಸ್ಕೃತಿ ಪ್ರೇಮದ ಒಳನೋಟಗಳು- ಇವೆಲ್ಲವನ್ನು ಗಮನಿಸಿದರೆ ಇವು ಕನ್ನಡ ಸಾರಸತ್ವ ಲೋಕಕ್ಕೆ ವಿಶೇಷವಾದ ಕೊಡುಗೆಯೆ ಸರಿ.ಪದಪದವಿಗಳ ಯೋಚನೆ ಇಲ್ಲದೆ, ಸ್ವಂತ ಆಸಕ್ತಿಯಿಂದ ಗ್ರಂಥ ಸಂಗ್ರಹ ಮಾಡಿ, ಕೇತ್ರಕಾರ್ಯದಲ್ಲಿಯೂ ತೊಡಗಿಕೊಂಡು ಸುಮಾರು ಆರು ದಶಕಗಳ ಕಾಲ ‘ಬರಿಗಾಲ ಸಂಶೋಧಕ’ನಾಗಿ [ಬ್ಯಾರ್ಫೂಟ್ ರಿಸರ್ಚರ್] ಕ್ರಿಯಾಶೀಲರಾಗಿದ್ದವರು. ಅಧ್ಯಾಪಕ ವೃತ್ತಿಯಿಂದ ಬಂದ ವೇತನದ ದೊಡ್ಡ ಭಾಗವನ್ನು ಅಧ್ಯಯನ ಸಂಪನ್ಮೂಲಗಳ ಸಂಗ್ರಹಕ್ಕೆ ವ್ಯಯಿಸಿದವರು. ಒಬ್ಬ ಶಾಲಾಮಾಸ್ತರನಾಗಿ ಸಂಶೋಧನೆಯ ದೃಷ್ಟಿಯಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮಟ್ಟದÀ ಸಾಧನೆ ಮಾಡಿದವರು. ಅನೇಕ ಸಂಶೋಧಕರಿಗೆ ಜಿಜ್ಞಾಸುಗಳಿಗೆ ಮಾರ್ಗದರ್ಶನ ಗ್ರಂಥ ಸಹಾಯ ಮಾಡಿದರು ಅವರ ಅಪ್ರಕಟಿತ ಬರಹಗಳ ಸಂಪುಟವು ಅಧ್ಯಯನ ಆಸಕ್ತರಿಗೆ ಒಂದು ಅಮುಲ್ಯ ಆಕಾರ ಗ್ರಂಥವೆನಿಸಲಿದೆ. -
-
Inti Dvadasha Akhyana
₹120.00Author: Sathyavathi Harikrishnan
ಸತ್ಯವತಿ ಹರಿಕೃಷ್ಣನ್ ಹಾಸ್ಯಬರವಣಿಗೆಯಲ್ಲಿ ಸುಮಾರು ಎರಡು ದಶಕಗಳಿಂದ ತನ್ನನ್ನು ತೊಡಗಿಸಿಕೊಂಡಿರುವ ಕವಯಿತ್ರಿ. ಇವರ ಹಾಸ್ಯಲೇಖನಗಳು ತರಂಗ, ತುಷಾರ, ಮಯೂರ, ಕರ್ಮವೀರದಂಥ ನಿಯತಕಾಲಿಕಗಳಲ್ಲಿ, ಉದಯವಾಣಿ, ಪ್ರಜಾವಾಣಿ ಮುಂತಾದವುಗಳಲ್ಲಿಯೂ ಪ್ರಕಟಗೊಂಡಿವೆ. 2002ರಲ್ಲಿ ಡೆಟ್ರಾಯಿಟ್ ನಲ್ಲಿ ನಡೆದ “ಅಕ್ಕ” ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಇವರ “ಗುಂಡ್ರಾಮನ ಚಿಕಿತ್ಸಾಯಣ’ ಎಂಬ ಕೃತಿ ಪ್ರಕಟವಾಗಿದೆ. ಸನ್ಮಾನ್ಯರಾದ ದೇಜಗೌ ಮತ್ತು ಜಿಟಿನಾರವರ ಸಂಪಾದಕತ್ವದಲ್ಲಿ ಪ್ರಕಟವಾದ “ಪುಸ್ತಕ ಪ್ರಪಂಚ’ದಲ್ಲಿ ಇವರ ಅನುವಾದಿತ ಲೇಖನಗಳು ಪಡಿಮೂಡಿವೆ. “ಕುಂಬಾಸ’, “ನುಗ್ಗೇಹಳ್ಳಿ ಪಂಕಜ’ವೇ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುವ ಸತ್ಯವತಿಯವರು ಈಗಾಗಲೇ ಐದು ಹಾಸ್ಯ ಸಂಕಲನಗಳನ್ನು ರಚಿಸಿದ್ದಾರೆ. ಅವರ ಆರನೆಯ ಹಾಸ್ಯ ಸಂಕಲನವೇ – “ಇಂತಿ ದ್ವಾದಶ ಆಖ್ಯಾನ’. ಹಾಸ್ಯದಲ್ಲಿ ಅಪಹಾಸ್ಯ, ತಿಳಿಹಾಸ್ಯ, ವ್ಯಂಗ್ಯ ಮುಂತಾದ ಪ್ರಭೇದಗಳಿವೆ. ವ್ಯಂಗ್ಯಮಿಶ್ರಿತವಾದ ತಿಳಿಹಾಸ್ಯ ಒಂದೇ ಕಾಲದಲ್ಲಿ ಎರಡು ಉದ್ದೇಶಗಳನ್ನು ಹೊಂದಿರುತ್ತವೆ. ಅದು ಮೇಲ್ನೋಟಕ್ಕೆ ಮನೋರಂಜನೆಯಾಗಿ ಕಂಡರೂ, ಅದರ ಇಂಗಿತ ಓದುಗರನ್ನು ಗಂಭೀರ ಚಿಂತನೆಗೆ ತೊಡಗುವಂತೆ ಮಾಡುವುದಾಗಿರುತ್ತದೆ. ವ್ಯಕ್ತಿಯನ್ನು ನೋಯಿಸದೇ ಲಘುಹಾಸ್ಯ-ವ್ಯಂಗ್ಯಗಳಿಂದ ಸ್ವವಿಮರ್ಶೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಹಾಸ್ಯದ ಕಲಾತ್ಮಕ ಪ್ರಕ್ರಿಯೆ. ಶ್ರೀಮತಿ ಸತ್ಯವತಿಯವರ ಈ ಕೃತಿಯಲ್ಲಿ ಇಂತಹ ಒಂದು ಪ್ರಯತ್ನವನ್ನು ನಾವು ಕಾಣಬಹುದು. “ಇಂತಿ ದ್ವಾದಶ ಆಖ್ಯಾನ’ದಲ್ಲಿ ಹನ್ನೆರಡು ವೈವಿಧ್ಯಮಯ ಸಣ್ಣ ಹಾಸ್ಯಲೇಖನಗಳಿವೆ. ಸತ್ಯವತಿಯವರು ನಮ್ಮ ಜೀವನದ ಸಾಮಾನ್ಯ ಘಟನೆಗಳನ್ನೇ ರಂಗುರಂಗಾಗಿ ತಿಳಿಹಾಸ್ಯದ ಮೂಲಕ ಈ ಕೃತಿಯಲ್ಲಿ ತೋರಿಸಿದ್ದಾರೆ. ಕಾಲ್ಪನಿಕ ಘಟನೆಗಳಲ್ಲಿ ಹಾಸ್ಯದ ಪಾತ್ರಗಳನ್ನು ಸೃಷ್ಟಿಸಿ, ಗಂಭೀರ ವಿಚಾರಗಳನ್ನು ಮನಮುಟ್ಟುವಂತೆ ನಿರೂಪಿಸುವ ಲೇಖಕಿಯ ಶೈಲಿಯು ಅಪೂರ್ವವಾದದ್ದು. ಪ್ರತಿ ಕತೆಯ ಶೀರ್ಷಿಕೆಯಲ್ಲೇ ಹಾಸ್ಯ ತುಂಬಿರುವ ಈ ಕೃತಿಯು ಓದುಗರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ.
Interested customers may write to us at mup@manipal.edu about purchasing the book.
Also available on




