ಎಂ ಪ್ರಭಾಕರ ಜೋಶಿ ಮೂಲತ: ಕಾರ್ಕಳದ ಮಾಳ ಗ್ರಾಮದವರು ನಾಡಿನ ಬಹುಶ್ರುತ ವಿದ್ವಾಂಸರಲ್ಲಿ ಓರ್ವರು. ಮಂಗಳೂರಿನ ಬೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಪೂರ್ವ ಪ್ರಾಂಶುಪಾಲರು. ಯಕ್ಷಗಾನದಲ್ಲಿ ಪಿಎಚ್‌ಡಿ ಪದವೀಧರರು, ಯಕ್ಷಗಾನ ರಂಗದ ಪ್ರಸಿದ್ದ ಅರ್ಥದಾರಿ, ಸಂಶೋಧಕ, ವಿಮರ್ಶಕ, ಸಂಘಟಕ, ಸಂಸ್ಕೃತಿ, ಕಲೆ, ವಾಣಿಜ್ಯಶಾಸ್ತ್ರ, ತತ್ವಶಾಸ್ತ್ರ, ಶಿಕ್ಷಣ ಕ್ಷೇತ್ರಗಳಲ್ಲಿ ತಜ್ಞ, ಬಹುಭಾಷಾವಿದ, ಅಂಕಣಕಾರ, ಪ್ರವಚನಕಾರ, ವಾಗ್ಮಿ. ಯಕ್ಷಗಾನ ಮತ್ತು ಇತರ ವಿಷಯಗಳ ಬಗ್ಗೆ ಹಲವು ಗ್ರಂಥಗಳ ಲೇಖಕ, ಸಂಪಾದಕ. ಯಕ್ಷಗಾನ ಸಮ್ಮೇಳನ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ಕು. ಶಿ. ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ಸಂಪಾಜೆ ಯಕ್ಷೋತ್ಸವ ಪ್ರಶಸ್ತಿ, ಪಟ್ಲ ಪ್ರಶಸ್ತಿ, ಶೇಣಿ ಪ್ರಶಸ್ತಿ, ಮಣಿಪಾಲ ಅಕಾಡೆಮಿ ಪುರಸ್ಕಾರ, ಅಳ್ವಾಸ್ ನುಡಿಸಿರಿ – ಸಹಿತ ಹಲವು ಗೌರವದೊಂದಿಗೆ ಮಾನಿತರು, ಸಾಮಾಜಿಕ ಕಾರ್ಯಕರ್ತರು, ಹಲವು ಸಂಘಟನೆಗಳ ಪದಾಧಿಕಾರಿ, ಸಲಹೆಗಾರರಾಗಿ ಸಕ್ರಿಯರು.
ಪು. ಶ್ರೀನಿವಾಸ ಭಟ್ಟರ ಬಹುಕಾಲದ ಆಪ್ತರಲ್ಲಿ ಒಬ್ಬರು.