Ballads of Jambudvipa

ಮಾಹೆಯಿಂದ ‘ಬ್ಯಾಲ್ಡ್‌ಸ್‌ ಆಫ್‌ ಜಂಬೂದ್ವೀಪ’ ಕೃತಿ ಬಿಡುಗಡೆ

ಮಣಿಪಾಲ, ನ. 6: ಮಾಹೆ ವಿ.ವಿ.ಯ ಮಣಿಪಾಲ ಯುನಿವರ್ಸಲ್‌ ಪ್ರೆಸ್‌ ಹೊರ ತಂದಿರುವ ಯುವ ಲೇಖಕಿ ಮೇಧಾ ಭಟ್‌ ಅವರ ‘ಬ್ಯಾಲ್ಡ್‌ಸ್‌ ಆಫ್‌ ಜಂಬೂದ್ವೀಪ’ ಕೃತಿಯನ್ನು ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌ ಪಿ ಅವರು ಶುಕ್ರವಾರ ಮಾಹೆಯ ಪ್ರಧಾನ ಕಚೇರಿಯಲ್ಲಿರುವ ಎಡಿಷನ್‌ ಹಾಲ್‌ನಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಮಾಹೆಯ ಕುಲಪತಿ ಡಾ| ಶರತ್‌ ಕೆ. ರಾವ್‌ ಅಧ್ಯಕ್ಷತೆವಹಿಸಿ, ಜಂಬೂದ್ವೀಪವೆಂಬ ಪದವು ಪ್ರತಿಯೊಬ್ಬರಿಗೂ ನಾನಾ விதದ ಕಲ್ಪನೆ ನೀಡುತ್ತದೆ. ದ್ವೀಪ ಪರಿಕಲ್ಪನೆಯು ಸಮುದ್ರ ಅಥವಾ ಸಾಗರದ ಮಧ್ಯೆ ಇರುವಂತದ್ದು. ಜಂಬೂದ್ವೀಪ ಇದಕ್ಕಿಂತ ಸ್ವಲ್ಪ ಭಿನ್ನವಾಗಿದ್ದಾಗಿದೆ. ಎಂಜಿನಿಯರ್‌ ಕವಿತೆಯ ಬಗ್ಗೆ ತಿಳಿದುಕೊಂಡರೆ ಪರಿಣಾಮಕಾರಿ ನಾವಿನ್ಯಕಾರನಾಗುತ್ತಾನೆ. ವೈದ್ಯನು ಸಾಹಿತ್ಯದಲ್ಲಿ ಆಸಕ್ತಿ ಹೊಂದಿದರೆ ಸಹಾನುಭೂತಿಯ ವೈದ್ಯನಾಗುತ್ತಾನೆ. ವಿಜ್ಞಾನಿ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡಾಗ ಹೆಚ್ಚು ಸಂವಹನಶೀಲನಾಗುತ್ತಾನೆ. ಈ ನಿಟ್ಟಿನಲ್ಲಿ ಮೇಧಾ ಭಟ್‌ ಅವರು ಎಂಜಿನಿಯರ್‌ ಆಗಿ ಸಾಹಿತ್ಯ ಮೇಲಿನ ಆಸಕ್ತಿ ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು.

ಲೇಖಕಿ ಮೇಧಾ ಭಟ್‌ ಮಾತನಾಡಿ, ರಾಮಾಯಣ, ಭಗವದ್ಗೀತೆ, ವೇದ ಉಪನಿಷತ್‌ಗಳು ಸದಾ ನಮಗೆ ಪ್ರೇರಣೆ ನೀಡುವಂತ ಉದ್ದಂಥಗಳಾಗಿವೆ ಎಂದರು.

ಮೇಧಾ ಭಟ್‌ ಅವರ ತಂದೆ ಮಣಿಪಾಲ ಡಾಟ್‌ ನೆಟ್‌ ಸಿಇಒ ಡಾ| ನರಸಿಂಹ ಭಟ್‌, ತಾಯಿ ಶಶಿಕಲಾ ಭಟ್‌ ಉಪಸ್ಥಿತರಿದ್ದರು. ಮಣಿಪಾಲ ಯುನಿವರ್ಸಲ್‌ ಪ್ರೆಸ್‌ ಸಂಪಾದಕ ಡಾ| ಶ್ರೀನಿವಾಸ್‌ ಕುಮಾರ್‌ ಎನ್‌ ಆಚಾರ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ| ನಂದಿನಿ ಭಟ್‌ ನಿರೂಪಿಸಿದರು.