Dodda Samagara Nalmoga

By (author)Dinesh Uppoora

350.00

Author: Dinesh Uppoora

ದೊಡ್ಡ ಸಾಮಗರೆಂದೇ ಪ್ರಸಿದ್ಧರಾದ ಮಲ್ಪೆ ಶಂಕರನಾರಾಯಣ ಸಾಮಗರು ಬಹುಮುಖ ವ್ಯಕ್ತಿತ್ವವುಳ್ಳ ಒಬ್ಬ ಮಹಾನ್ ದಾರ್ಶನಿಕ. ಸ್ವಾತಂತ್ರ‍್ಯ ಹೋರಾಟಗಾರರಾಗಿ ಬ್ರಿಟಿಷರ ಆಡಳಿತದ ಧೋರಣೆಗಳ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದವರು, ಹರಿಕಥಾದಾಸರಾಗಿ ತನ್ನ ವಿಚಾರಧಾರೆಯನ್ನು ಸಮಾಜಕ್ಕೆ ಪ್ರಚುರಪಡಿಸಿದವರು, ತನ್ನ ಪ್ರತ್ಯುತ್ಪನ್ನಮತಿತ್ವದಿಂದ, ಅಗಾಧವಾದ ಪಾಂಡಿತ್ಯದಿಂದ ತಾಳಮದ್ದಳೆ ಅರ್ಥಧಾರಿಗಳಾಗಿ ಕಲಾರಸಿಕರ ಮನಗೆದ್ದವರು. ಉತ್ತಮ ವೇಷಧಾರಿಗಳಾಗಿ ಬೇಡಿಕೆಯ ಕಲಾವಿದರಾದವರು, ಸರಳ ಜೀವನದ ಆದರ್ಶ ವ್ಯಕ್ತಿತ್ವದಿಂದ ಗಾಂಧಿವಾದಿಗಳಾಗಿ ಬದುಕಿದವರು. ಇವರು 1911 ರ ಡಿಸೆಂಬರ್ 11 ರಂದು ಜನಿಸಿ, 1999 ರ ಆಗಸ್ಟ್ 1 ರಂದು ನಿಧನರಾದರು.

ಅವರ ಜೀವನದ ಘಟನೆಗಳನ್ನು ಆಧರಿಸಿ ಬರೆದ “ದೊಡ್ಡ ಸಾಮಗರ ನಾಲ್ಮೊಗ”ವನ್ನು ದಿನೇಶ ಉಪ್ಪೂರರು ಹಲವಾರು ಗ್ರಂಥ, ಸ್ನೇಹಿತರು, ಅಂತರ್ಜಾಲ ಇತ್ಯಾದಿಗಳಿಂದ ಸಂಗ್ರಹಿಸಿ ಅನಾವರಣಗೊಳಿಸಿದ್ದಾರೆ.

Interested readers may write to us at mup@manipal.edu about purchasing the book.

Also available on