Administrative and Social History of Mysore Under the Wodeyars of Mysore (1600-1800 CE)

600.00

Author:

ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳೆಂದು ಹೆಸರಾಗಿರುವ ಮೈಸೂರಿನ ಒಡೆಯರು ಕರ್ನಾಟಕದ ಇತಿಹಾಸಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕಲಾರಂಗಗಳಲ್ಲೂ ಮೈಸೂರು ಅರಸರು ವಿಜಯನಗರದ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿದರು. ರಾಜಒಡೆಯರ್, ರಣಧೀರ ಕಂಠೀರವ, ಚಿಕ್ಕದೇವರಾಜ ಒಡೆಯರ್ ಅವರ ಆಳ್ವಿಕೆಯ ಕಾಲಘಟ್ಟದಲ್ಲಿ ಮೈಸೂರು ಸರ್ವಾಂಗೀಣ ಪ್ರಗತಿ ಸಾಧಿಸಿತು. ಈ ವಂಶದ ಮೊದಲ ಪ್ರಮುಖ ಅರಸು ರಾಜ ಒಡೆಯರ್‌ರಿಂದ ಆರಂಭಿಸಿ ಮೈಸೂರು ಆಂಗ್ಲರ ಅಧೀನವಾಗುವವರೆಗಿನ ಆಡಳಿತ ಹಾಗೂ ಸಾಮಾಜಿಕ ಇತಿಹಾಸ ಇಲ್ಲಿದೆ. ಮೈಸೂರು ಸಂಸ್ಥಾನದ ಎರಡು ಮಹತ್ವಪೂರ್ಣ ಶತಮಾನಗಳ ಕಾಲದ ಆಡಳಿತ, ಕಂದಾಯ ನೀತಿಗಳು, ನ್ಯಾಯಾಡಳಿತ, ಸೈನ್ಯ ವ್ಯವಸ್ಥೆ, ಪ್ರಾಂತೀಯ ಹಾಗೂ ಸ್ಥಳೀಯ ಆಡಳಿತ, ಸಾಮಾಜಿಕ ಜೀವನ ಹಾಗೂ ಧರ್ಮ, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಮತ್ತು ಆಸ್ಥಾನ ಸಂಸ್ಕೃತಿ ಹೀಗೆ ಬಹುಮುಖೀ ನೆಲೆಗಳ ವಿಸ್ತಾರವಾದ, ಅಧ್ಯಯನಪೂರ್ಣ ಸಂಶೋಧನಾ ವರದಿಯಾಗಿ ಇದು ಸ್ವಾತಂತ್ರೋತ್ತರ ತಲೆಮಾರಿನ ವಿದ್ವಾಂಸರ ಸಂಶೋಧನಾ ವೈಖರಿಗೆ ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು. ಕರ್ನಾಟಕದ ಅದರಲ್ಲೂ ಮೈಸೂರಿನ ಒಡೆಯರ ಇತಿಹಾಸದ ಬಗೆಗೆ ಸಂಶೋಧನೆಗಳು ಇನ್ನೂ ಕಣ್ತೆರೆಯುತ್ತಿದ್ದ ಕಾಲದಲ್ಲಿ ಡಿ. ಎಸ್. ಅಚ್ಯುತರಾಯರ ಈ ಸಂಶೋಧನ ಕಾರ್ಯ ಮಹತ್ವಪೂರ್ಣವಾದುದು. ಅಂದಿಗೆ ಲಭ್ಯವಿದ್ದ ಎಲ್ಲಾ ಬಗೆಯ ಮೂಲ ಹಾಗೂ ಆನುಷಂಗೀಕ ಆಕರಗಳನ್ನು ಬಳಸಿಕೊಂಡು, ಸಂಶೋಧನೆಯ ಎಲ್ಲಾ ಚೌಕಟ್ಟಿನೊಳಗೆ ವಸ್ತುನಿಷ್ಠವಾಗಿ ರೂಫುಗೊಂಡಿದೆ ಈ ಕೃತಿ. ಸಾಮಾಜಿಕ ಇತಿಹಾಸವನ್ನು ಪುನರ್ ರೂಪಿಸುವಾಗಲಂತೂ ಸಮಕಾಲೀನ ಸಾಹಿತ್ಯದ ಎಲ್ಲಾ ರೂಪಗಳನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಅಗತ್ಯ ವಿರುವೆಡೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿನ ಉಲ್ಲೇಖಗಳು, ಟಿಪ್ಪಣಿಗಳೂ, ವಿವರಣೆಗಳೂ ಈ ಸಂಶೋಧನೆಯ ಮೌಲ್ಯವನ್ನು ಹೆಚ್ಚಿಸಿವೆ. ಸಂಶೋಧನೆಗೆ ಪೂರಕವಾಗಿ ಗ್ರಂಥಋಣ, ನಕ್ಷೆಗಳು, ಸಂಕ್ಷೇಪಾಕ್ಷರಗಳು ಹಾಗೂ ಒಡೆಯರ ವಂಶಾವಳಿ ನೀಡಲಾಗಿದೆ. ಆಧಾರಗಳ ಮೇಲಿನ ಟಿಪ್ಪಣಿಯು ಸಂಶೋಧಕರಿಗೆ ತಮ್ಮ ಕಾರ್ಯಕ್ಷೇತ್ರದ ಮೇಲಿನ ಒಡೆತನದ ದ್ಯೋತಕ. ಅಪಾರ ಸಂಖ್ಯೆಯ ಹಸ್ತಪ್ರತಿಗಳ ಮತ್ತು ಶಾಸನಗಳ ಬಳಕೆ ಈ ಕೃತಿಯ ಹೆಗ್ಗಳಿಕೆ.

Interested readers may write to us at mup@manipal.edu about purchasing the book.

Also available on