ಪು. ಗುರುಪ್ರಸಾದ್ ಭಟ್ಟ ಕಟೀಲು, ಪು ಶ್ರೀನಿವಾಸ ಭಟ್ಟರ ಪುತ್ರ, ತಂದೆಯವರಂತೆ ಬರಹ, ಅಧ್ಯಯನಗಳಲ್ಲಿ ಆಸಕ್ತರು. ತುಳು-ಕನ್ನಡ ಭಾಷಿಕ-ಸಾಂಸ್ಕೃತಿಕ ವಿಚಾರಗಳ, ಯಕ್ಷಗಾನ ಹೀಗೆ ಬಹುವಿಷಯಗಳ ಲೇಖಕ, ವಿಮರ್ಶಕ, ವಿವಿಧ ಸಾಂಸ್ಕೃತಿಕ ಕಲಾಪಗಳಲ್ಲಿ ಸಕ್ರಿಯ. ಪ್ರಸ್ತುತ ಪದವೀ ಪೂರ್ವ ಆಳ್ವಾಸ್ ಕಾಲೇಜು ಮೂಡಬಿದರೆಯಲ್ಲಿ ಕನ್ನಡ ಉಪನ್ಯಾಸಕ.