• Mahila Mahabharatha

    Author:  K Madhavan  Translator: Abhinaya H 

    ಮಹಿಳಾ ಮಹಾಭಾರತ, ಇದು ಜೆಎನ್‌ಯು ದೆಹಲಿಯ ವಿಶ್ರಾಂತ ಪ್ರಾಧ್ಯಾಪಕರಾದ ಕೆ. ಮಾಧವನ್ ರಚಿಸಿದ ನಾಟಕ. ರಂಗ ನಿರ್ದೇಶಕರೂ ಆಗಿರುವ ಮಾಧವನ್‌ರನ್ನು ೧೯೯೪ರಲ್ಲಿ ಯೂನಿವರ್ಸಿಟಿ ದು ಕ್ವಿಬೀ ಎ ಮಾನ್‌ಟ್ರಿಯಲ್ ವಿಶ್ವವಿದ್ಯಾನಿಲಯ ತನ್ನ ವಿದ್ಯಾರ್ಥಿಗಳಿಗೆ ರಂಗ ನಿರ್ದೇಶನದ ತರಬೇತಿ ನೀಡಲು ಆಹ್ವಾನಿಸಿತ್ತು. ಆಗ ಒಂದು ವರ್ಷ ನಡೆಸಿದ ರಂಗ ಕಾರ್ಯಾಗಾರದ ಭಾಗವಾಗಿ ೧೯೯೫ ರಲ್ಲಿ ಮಾಧವನ್ ಈ ನಾಟಕವನ್ನು ಫ್ರೆಂಚ್ ಭಾಷೆಯಲ್ಲಿ ರಚಿಸಿ ನಿರ್ದೇಶಿಸಿದ್ದರು. ನಂತರ ಇದು ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಆಯಾ ಪ್ರದೇಶದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟಿತು. ಹಾಗೆಯೇ ಭಾರತದಲ್ಲಿಯೂ ಅನೇಕ ನಗರಗಳಲ್ಲಿ ಈ ನಾಟಕ ಪ್ರದರ್ಶನ ಕಂಡಿದೆ. ೨೦೦೫ರಲ್ಲಿ ಈ ನಾಟಕದ ಇಂಗ್ಲಿಷ್ ಅವತರಣಿಕೆಯು ಥಿಯೇಟರ್ ಇಂಡಿಯಾದಿAದ ಪ್ರಕಟವಾಯಿತು. <br> ಎಲ್ಲ ಕಾಲದ ಮಹಿಳಾ ಜಗತ್ತಿನ ಆಂತರ್ಯದಲ್ಲಿ ನಡೆಯಬಹುದಾದ ಮಹಾಯುದ್ಧದ ಕಥನವೇ ಮಹಿಳಾ ಮಹಾಭಾರತ. ಇಲ್ಲಿ ಪುರಾಣ ಮತ್ತು ವಾಸ್ತವ ಜಗತ್ತಿನ ನಡುವಿನ ಗೆರೆಯೇ ಅಳಿಸಿ, ಪೌರಾಣಿಕತೆ ಮತ್ತು ವಾಸ್ತವಿಕತೆ ಮುಖಾಮುಖಿಯಾಗುತ್ತವೆ. ಮಹಾಭಾರತ ಕಥೆಯ ಪರಿಧಿಯಲ್ಲಿದ್ದಿರಬಹುದಾದ ಎಲ್ಲ ತಾಯಂದಿರೂ ಈ ನಾಟಕದಲ್ಲಿ ಕೇಂದ್ರದತ್ತ ಚಲಿಸಿ ಕತೆ ಹೇಳುತ್ತಾರಾದ್ದರಿಂದ, ಮಹಿಳಾ ಕಣ್ನೋಟದ ಮಹಾಭಾರತ ಇಲ್ಲಿ ಗೋಚರವಾಗುತ್ತದೆ. ವಿಶೇಷವೆಂದರೆ, ಈ ಇಡೀ ಕಥನದ ಸೂತ್ರಧಾರಿಣಿ, ಸಮಕಾಲೀನ ಜಗತ್ತಿನ ಅಸಹಾಯಕ, ಹತಾಶ ತಾಯಿ. ಇಲ್ಲಿ ಪುಟ್ಟ ಪೆಟ್ಟಿಗೆಯಲ್ಲಿ ಜೀವಶಕ್ತಿಯ ಬೀಜ ನೆಟ್ಟು ಅದು ಮೊಳಕೆಯೊಡೆದು ಬೃಹತ್ ವೃಕ್ಷವಾಗಿ ಅಡುಗೆ ಮನೆಯನ್ನೇ ಸ್ಪೋಟಿಸುವ ಹೆಣ್ಣುಗಳಿದ್ದಾರೆ, ಮರಕ್ಕೆ ಕಟ್ಟಿ ಸುಟ್ಟು ಹಾಕುತ್ತಿರುವ ಅಣ್ಣಂದಿರನ್ನೇ ನೋಡಿ ಗಹಗಹಿಸುವ ತಂಗಿಯರಿದ್ದಾರೆ, ಹೆಣ್ಣುಗಳ ನಿಟ್ಟುಸಿರ ತಾಪಕ್ಕೆ ಗುರಿಯಾಗಿ ನಲುಗುತ್ತಿರುವ ಗಂಡುಮಕ್ಕಳ ಸಂಕಟ ಕಂಡು ಮರುಗುತ್ತಿರುವ ತಾಯಂದಿರಿದ್ದಾರೆ. ಆದಿಯಿಂದ ಅಂತ್ಯದವರೆಗೆ ತೂಗುವ ತೊಟ್ಟಿಲು, ಅನುರಣಿಸುವ ಜೋಗುಳದ ಜೊತೆಗೆ ಹೆಮ್ಮಕ್ಕಳು ನೀಡುವ ಶಾಪದ ಸರಮಾಲೆಯೂ ಇಲ್ಲಿದೆ.

    Interested readers may write to us at mup@manipal.edu about purchasing the book. 

     

    Also available on

     

    160.00