Inti Dvadasha Akhyana

120.00

ಸತ್ಯವತಿ ಹರಿಕೃಷ್ಣನ್ ಹಾಸ್ಯಬರವಣಿಗೆಯಲ್ಲಿ ಸುಮಾರು ಎರಡು ದಶಕಗಳಿಂದ ತನ್ನನ್ನು ತೊಡಗಿಸಿಕೊಂಡಿರುವ ಕವಯಿತ್ರಿ. ಇವರ ಹಾಸ್ಯಲೇಖನಗಳು ತರಂಗ, ತುಷಾರ, ಮಯೂರ, ಕರ್ಮವೀರದಂಥ ನಿಯತಕಾಲಿಕಗಳಲ್ಲಿ, ಉದಯವಾಣಿ, ಪ್ರಜಾವಾಣಿ ಮುಂತಾದವುಗಳಲ್ಲಿಯೂ ಪ್ರಕಟಗೊಂಡಿವೆ. 2002ರಲ್ಲಿ ಡೆಟ್ರಾಯಿಟ್ ನಲ್ಲಿ ನಡೆದ “ಅಕ್ಕ” ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಇವರ “ಗುಂಡ್ರಾಮನ ಚಿಕಿತ್ಸಾಯಣ’ ಎಂಬ ಕೃತಿ ಪ್ರಕಟವಾಗಿದೆ. ಸನ್ಮಾನ್ಯರಾದ ದೇಜಗೌ ಮತ್ತು ಜಿಟಿನಾರವರ ಸಂಪಾದಕತ್ವದಲ್ಲಿ ಪ್ರಕಟವಾದ “ಪುಸ್ತಕ ಪ್ರಪಂಚ’ದಲ್ಲಿ ಇವರ ಅನುವಾದಿತ ಲೇಖನಗಳು ಪಡಿಮೂಡಿವೆ. “ಕುಂಬಾಸ’, “ನುಗ್ಗೇಹಳ್ಳಿ ಪಂಕಜ’ವೇ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುವ ಸತ್ಯವತಿಯವರು ಈಗಾಗಲೇ ಐದು ಹಾಸ್ಯ ಸಂಕಲನಗಳನ್ನು ರಚಿಸಿದ್ದಾರೆ. ಅವರ ಆರನೆಯ ಹಾಸ್ಯ ಸಂಕಲನವೇ – “ಇಂತಿ ದ್ವಾದಶ ಆಖ್ಯಾನ’. ಹಾಸ್ಯದಲ್ಲಿ ಅಪಹಾಸ್ಯ, ತಿಳಿಹಾಸ್ಯ, ವ್ಯಂಗ್ಯ ಮುಂತಾದ ಪ್ರಭೇದಗಳಿವೆ. ವ್ಯಂಗ್ಯಮಿಶ್ರಿತವಾದ ತಿಳಿಹಾಸ್ಯ ಒಂದೇ ಕಾಲದಲ್ಲಿ ಎರಡು ಉದ್ದೇಶಗಳನ್ನು ಹೊಂದಿರುತ್ತವೆ. ಅದು ಮೇಲ್ನೋಟಕ್ಕೆ ಮನೋರಂಜನೆಯಾಗಿ ಕಂಡರೂ, ಅದರ ಇಂಗಿತ ಓದುಗರನ್ನು ಗಂಭೀರ ಚಿಂತನೆಗೆ ತೊಡಗುವಂತೆ ಮಾಡುವುದಾಗಿರುತ್ತದೆ. ವ್ಯಕ್ತಿಯನ್ನು ನೋಯಿಸದೇ ಲಘುಹಾಸ್ಯ-ವ್ಯಂಗ್ಯಗಳಿಂದ ಸ್ವವಿಮರ್ಶೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಹಾಸ್ಯದ ಕಲಾತ್ಮಕ ಪ್ರಕ್ರಿಯೆ. ಶ್ರೀಮತಿ ಸತ್ಯವತಿಯವರ ಈ ಕೃತಿಯಲ್ಲಿ ಇಂತಹ ಒಂದು ಪ್ರಯತ್ನವನ್ನು ನಾವು ಕಾಣಬಹುದು. “ಇಂತಿ ದ್ವಾದಶ ಆಖ್ಯಾನ’ದಲ್ಲಿ ಹನ್ನೆರಡು ವೈವಿಧ್ಯಮಯ ಸಣ್ಣ ಹಾಸ್ಯಲೇಖನಗಳಿವೆ. ಸತ್ಯವತಿಯವರು ನಮ್ಮ ಜೀವನದ ಸಾಮಾನ್ಯ ಘಟನೆಗಳನ್ನೇ ರಂಗುರಂಗಾಗಿ ತಿಳಿಹಾಸ್ಯದ ಮೂಲಕ ಈ ಕೃತಿಯಲ್ಲಿ ತೋರಿಸಿದ್ದಾರೆ. ಕಾಲ್ಪನಿಕ ಘಟನೆಗಳಲ್ಲಿ ಹಾಸ್ಯದ ಪಾತ್ರಗಳನ್ನು ಸೃಷ್ಟಿಸಿ, ಗಂಭೀರ ವಿಚಾರಗಳನ್ನು ಮನಮುಟ್ಟುವಂತೆ ನಿರೂಪಿಸುವ ಲೇಖಕಿಯ ಶೈಲಿಯು ಅಪೂರ್ವವಾದದ್ದು. ಪ್ರತಿ ಕತೆಯ ಶೀರ್ಷಿಕೆಯಲ್ಲೇ ಹಾಸ್ಯ ತುಂಬಿರುವ ಈ ಕೃತಿಯು ಓದುಗರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ.

Interested customers may write to us at mup@manipal.edu about purchasing the book. 

Also available on