Manipal Universal Press

Skip to Main Content »

  • (08202922516, 2922954
 
Shopping Cart (0 item)
My Cart

You have no items in your shopping cart.

You're currently on:

Bhagvantana Kandammagalu

Bhagvantana Kandammagalu

Bhagvantana Kandammagalu

Susmita Bagchi

Availability: In stock

-
+
₹190.00
Free shipping in India
ಮೂಲ ಲೇಖಕಿಯ ಕುರಿತಾಗಿ ಒಡಿಯಾದ ಪ್ರಸಿದ್ಧ ಲೇಖಕಿ ಸುಸ್ಮಿತಾ ಬಾಗಚಿಯವರು ೧೯೬೦ರಲ್ಲಿ ಕಟಕ್‌ನಲ್ಲಿ ಜನಿಸಿದರು. ದಿಲ್ಲಿ ವಿ.ವಿ.ಯಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಮುಗಿಸಿದ ಬಳಿಕ ಕೆಲಕಾಲ ಅಲ್ಲಿಯೇ ಅಧ್ಯಾಪಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೮೦ ರಿಂದ ಬರವಣಿಗೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಸುಸ್ಮಿತಾರು ಇದುವರೆಗೆ ಐದು ಕಾದಂಬರಿ, ಏಳು ಕಥಾ ಸಂಕಲನ ಹಾಗೂ ಒಂದು ಪ್ರವಾಸ ಕಥನವನ್ನು ಪ್ರಕಟಿಸಿದ್ದಾರೆ. ‘ಆಕಾಶ ಯೆಉಂಠಿ ಕಥಾ ಕಹೆ’ (ಆಕಾಶ ತನ್ನ ಕಥೆ ಹೇಳುತ್ತಿದೆ) ಕಥಾ ಸಂಕಲನಕ್ಕೆ ಒಡಿಶಾ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿರುತ್ತಾರೆ. ಪ್ರಸ್ತುತ ಬೆಂಗಳೂರಲ್ಲಿ ನೆಲೆಸಿರುವ ಸುಸ್ಮಿತಾರವರು ಮೈಂಡ್ ಟ್ರೀ ಸಹ-ಸಂಸ್ಥಾಪಕ ಶ್ರೀ. ಸುಬ್ರತೋ ಬಾಗಚಿಯವರ ಪತ್ನಿ. ಅನುವಾದಕಿ ಡಾ|| ಮಾಧವಿ ಎಸ್ ಭಂಡಾರಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದವರು. ಉಡುಪಿ ಅವರ ಕಾರ್ಯಕ್ಷೇತ್ರ. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ೩ ಕವನ ಸಂಕಲನಗಳು, ೧ ಕಥಾ ಸಂಕಲನ, ೧ ವೈಚಾರಿಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಮತ್ತು ಹಿಂದಿಗಳಲ್ಲಿಯ ಅನೇಕ ಕೃತಿಗಳನ್ನು ಅನುವಾದಿಸಿ, ಎರಡು ಭಾಷೆಗಳ ನಡುವೆ ಸೇತುವೆಯ ಕಾರ್ಯ ಮಾಡಿದ್ದಾರೆ. ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ರಾಷ್ಟ್ರೀಯ ನಾಟಕ ಶಾಲೆ, ದೆಹಲಿಗಾಗಿ ಹಿಂದಿಗೆ ಅನುವಾದಿಸಿದ ಹೆಗ್ಗಳಿಕೆ ಇವರದು. ಸಂಕ್ರಮಣ ಕಾವ್ಯ ಪ್ರಶಸ್ತಿ, ‘ಗಾಯ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ, ಡಾ|| ಸಿ ಎನ್ ಮೃತ್ಯುಂಜಯಪ್ಪರ ಕನ್ನಡ ಕೃತಿ ‘ನನಗೆ ನಾನೇ ಶಿಲ್ಪಿ’ಯ ಹಿಂದಿ ಅನುವಾದ 'ಖುದೀ ಕೋ ಕಿಯಾ ಬುಲಂದ್'ಗಾಗಿ ಗೋಪೀರಾಮ್ ಗೋಯಂಕಾ ಅನುವಾದ ಪುರಸ್ಕಾರ, ಸಮಗ್ರ ಅನುವಾದ ಸಾಹಿತ್ಯ ಕೃತಿಗಳಿಗೆ ಉತ್ತರ ಪ್ರದೇಶ ಹಿಂದಿ ಸಂಸ್ಥಾನ ಕೊಡಮಾಡುವ ಸೌಹಾರ್ದ ಸಮ್ಮಾನದ ಜೊತೆಗೆ ಸಾಹಿತ್ಯ ಸೇವೆಗಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ISBN 9789382460916
Type Printed
Pages 160
Category Translations, General Interest Books, Kannada Books, All Books
Publisher Manipal Universal Press
Translator Madhavi S Bhandary

ಅನುಪೂರ್ವಾ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಅಮೇರಿಕಾ ಬಿಟ್ಟು ಭಾರತಕ್ಕೆ ಬರಬೇಕಾಯಿತು. ಕಲಾಶಿಕ್ಷಕಿಯಾಗಿ ಅಲ್ಲವಳ ಜೀವನ ಸುವ್ಯವಸ್ಥಿತವಾಗಿ ಸಾಗುತ್ತಿತ್ತು. ಭಾರತಕ್ಕೆ ಹಿಂದಿರುಗಿದ ನಂತರ ಅವಳ ಬದುಕು ಆಮೂಲಾಗ್ರವಾಗಿ ಬದಲಾಯಿಸಬಹುದೆಂದು ಅವಳು ಕನಸು-ಮನಸಲ್ಲೂ ಎಣಿಸಿರಲಿಲ್ಲ. ಒಮ್ಮೆ ಅವಳ ಕಾಲೇಜಿನ ಗೆಳತಿಯೊಬ್ಬಳು ಸೆರೆಬ್ರಲ್ ಪಾಲ್ಸಿ (ಮೆದುಳಿನ ಲಕ್ವ)ಯಿಂದ ಬಳಲುತ್ತಿರುವ ಮಕ್ಕಳ ಶಾಲೆ 'ಆಶಾಜ್ಯೋತಿ'ಯ ಪರಿಚಯ ಮಾಡಿಸಿದಳು. ಅಲ್ಲಿಯೇ ಸ್ವಲ್ಪಕಾಲ ಆರ್ಟ್ ಟೀಚರ್ ರೂಪದಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವ ಅವಕಾಶವೂ ದೊರೆಯಿತು. ಚಿತ್ರಗಳನ್ನು ಬಿಡಿಸುವುದು ಹೇಗೆ, ಅದಕ್ಕೆ ಹೇಗೆ ಬಣ್ಣ ತುಂಬಬೇಕು ಇತ್ಯಾದಿ ವಿಷಯಗಳನ್ನು ಅಲ್ಲಿಯ ಮಕ್ಕಳಿಗೆ ಹೇಳಿಕೊಡಲಾರಂಭಿಸಿದಳು. ಆದರೆ ಆ ಮಕ್ಕಳು ಅವಳಿಗರಿವಿಲ್ಲದಂತೆ ಗೆಳೆತನದ, ಪ್ರೇಮದ, ನಗುವಿನ, ಎಲ್ಲಕ್ಕಿಂತಲೂ ಮಿಗಿಲಾಗಿ ರೋಗದೊಂದಿಗೆ ಹೋರಾಡುವ ಪಾಠ ಅರ್ಥಾತ್ ಬದುಕಿನ ವಾಸ್ತವಿಕತೆಯ ಪಾಠ ಕಲಿಸಬಹುದೆಂದು ಅವಳಿಗೇನು ಗೊತ್ತಿತ್ತು! ಹೊರಜಗತ್ತು ಅವರನ್ನು ಶಾರೀರಿಕ ಅಥವಾ ಮಾನಸಿಕ ದೃಷ್ಟಿಯಿಂದ ದುರ್ಬಲರೆಂದು ತಿಳಿದುಕೊಳ್ಳಲಿ! ಆದರೆ ಅವರ ಅಂತರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಪಾರ ಕ್ಷಮತೆ ಅಡಗಿದೆ ಎಂಬುದು ಅವಳ ಅರಿವಿನ ಕ್ಷಿತಿಜವನ್ನೇ ವಿಸ್ತರಿಸಿತು. ಅನುಪೂರ್ವಾ ಮತ್ತಾರೂ ಅಲ್ಲ, ಸ್ವಯಂ ಲೇಖಕಿಯೇ! ಈ ಮಕ್ಕಳ ಅಂತರಂಗದ ಪುಟಗಳನ್ನು ಅತ್ಯಂತ ಹತ್ತಿರದಿಂದ ನೋಡಿದ್ದಾರೆ; ತಿಳಿದಿದ್ದಾರೆ; ಮತ್ತದನ್ನು ಶಬ್ದಗಳ ಮೂಲಕ ಕಾದಂಬರಿಯ ರೂಪದಲ್ಲಿ ಜೋಡಿಸಿದ್ದಾರೆ. ಈ ಒಂದು ರೋಚಕವಾದ ಕಥೆ ಒಡಿಯಾದಲ್ಲಿ ‘ದೇಬಶಿಶು’ವಾಗಿದ್ದುದು, ಅಜಯ್ ಪಟ್ನಾಯಕ್‌ರು ಅದನ್ನು ‘ದೇವಶಿಶು’ ವಾಗಿ ಹಿಂದಿಗೆ ಅನುವಾದಿಸಿದರು. ಆ ಹಿಂದಿ ಅನುವಾದವು ಜ್ಞಾನಪೀಠ ಪ್ರಕಾಶನದಿಂದ ಪ್ರಕಟಗೊಂಡಿದೆ. ಈ ಕೃತಿಯು ಬಿಕ್ರಮ್ ಕೆ. ದಾಸ್‌ರಿಂದ ‘Children of better God’ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೂ ಅನುವಾದಗೊಂಡಿದೆ. ಇದೀಗ 'ಭಗವಂತನ ಕಂದಮ್ಮಗಳು' ರೂಪದಲ್ಲಿ ಕನ್ನಡದ ಓದುಗರ ಮುಂದಿದೆ.

No
Browser
Location

Manipal Universal Press (MUP)
C/o Department of European Studies
5th Floor, Advanced Research Centre (ARC)
MAHE, Madhav Nagar, Manipal 576104
T: +91-820-2922516, 2922954
E-mail: mup@manipal.edu