K N Venkatasubbarao

K N Venkatasubbarao

ಕನ್ನಡದ ಸಾಂಸ್ಕೃತಿಕ ವರದಿಗಾರರಾಗಿದ್ದು, ರಾಜಕೀಯ ವರದಿಗಾರಿಕೆಯನ್ನೂ ಮಾಡಿ ಅನುಭವವಿರುವ ಕಳಲೆ ನಾಗರಾಜರಾವ್ ವೆಂಕಟಸುಬ್ಬರಾವ್ (ಕೆಎನ್‍ವಿ) ನಾನಾ ಸಾಮಾಜಿಕ ವಲಯಗಳಲ್ಲಿ ಕೆಲಸ ಮಾಡಿದ್ದಾರೆ. ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅವರು 1978ರಿಂದ ಉಪಸಂಪಾದಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. `ಕನ್ನಡಪ್ರಭ’ ದಿನಪತ್ರಿಕೆಯ ಪ್ರಮುಖ ವಿಭಾಗಗಳಲ್ಲಿ ಕೆಲಸ ಮಾಡಿದರು. 1993ರಲ್ಲಿ `ದಿ ಹಿಂದು’ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇರಿದರು. ವಿಶೇಷ ವರದಿಗಾರರಾಗಿ 2011ರಲ್ಲಿ ನಿವೃತ್ತರಾದರು. ಸಾಹಿತ್ಯ, ಸಂಸ್ಕೃತಿ, ಸಿನಿಮಾಗಳಂಥ ಹಲವು ಪ್ರಕಾರಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ರಾಜ್ಯ ಸರ್ಕಾರದ ಚಲನಚಿತ್ರ ಸಹಾಯಧನ ಸಮಿತಿ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡ ಚಲಚಿತ್ರಗಳನ್ನು ಆಯ್ಕೆ ಮಾಡುವ ಸಮಿತಿ-ಗಳ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಝೂಲಾಘಾಟ್, ತಂತ್ರ, ಮೃಗ, ಇಂದ್ರಪ್ರಸ್ಥ, ಮತ್ತು ಜೂಜು ಇವರ ಪ್ರಮುಖ ಸಾಹಿತ್ಯ ಕೃತಿಗಳು.

  • Male
  • 1