Mukha Mudre – Kyamaradalli Kannada Sahithigalu

 690.00

In Stock

‘ಸಾಹಿತಿಗಳ ಭಾವಚಿತ್ರಕಾರ’ ಎಂದೇ ಖ್ಯಾತರಾಗಿರುವ ಛಾಯಾಗ್ರಾಹಕ ಎ ಎನ್ ಮುಕುಂದರು ಕಳೆದ ನಾಲ್ಕು ದಶಕಗಳಲ್ಲಿ ತೆಗೆದ ಐವತ್ತು ಪ್ರಸಿದ್ಧ ಕನ್ನಡ ಸಾಹಿತಿಗಳ ಭಾವಚಿತ್ರಗಳು ಪ್ರಸ್ತುತ ಸಂಪುಟದಲ್ಲಿ ಸೇರಿವೆ. ಈ ಎಲ್ಲ ಸಾಹಿತಿಗಳ ಕಿರು ಪರಿಚಯಗಳೊಂದಿಗೆ ಫೋಟೋ ತೆಗೆಯುವ ಸಂದರ್ಭದ ತಮ್ಮ ಅನುಭವಗಳನ್ನು ಮುಕುಂದರು ಇಲ್ಲಿ ದಾಖಲಿಸಿರುವುದು ಈ ಪುಸ್ತಕದ ವೈಶಿಷ್ಟ್ಯವಾಗಿದೆ. ಭಾವಚಿತ್ರಣದಲ್ಲಿ ತಮ್ಮದೇ ವಿಶಿಷ್ಟ ಶ್ಯೆಲಿಯನ್ನು ರೂಢಿಸಿಕೊಂಡಿರುವ ಮುಕುಂದರು, ಈ ಎಲ್ಲ ಚಿತ್ರಗಳನ್ನು ಸಾಹಿತಿಗಳು ವಾಸಿಸುವ ಸ್ಥಳಗಳಿಗೇ ತೆರಳಿ, ಅವರೊಂದಿಗೆ ಕೆಲವು ಗಂಟೆಗಳ ಕಾಲ ಒಡನಾಡಿ ಅವರ ಸಹಜ ವಾತಾವರಣದಲ್ಲಿ0iÉುೀ ತೆಗೆದಿದ್ದಾರೆ. ಪೆÇೀಟ್ರ್ರೇಟ್ ಅಂದರೆ ಕೇವಲ ಭಾವಚಿತ್ರವಲ್ಲ, ಅದೊಂದು ‘ವಿಶಿಷ್ಟ ಭಾವಚಿತ್ರ’ ಅಥವಾ ‘ವ್ಯಕ್ತಿತ್ವ ಚಿತ್ರ’ ಎನ್ನುವ ಮುಕುಂದರ ನಿಲುವು ಈ ಛಾಯಾಚಿತ್ರಗಳಲ್ಲಿ ಮೂರ್ತವಾಗಿ ವ್ಯಕ್ತವಾಗಿದೆ. ವ್ಯಕ್ತಿಯ ಮುಖವೇ ಅವನ ವ್ಯಕ್ತಿತ್ವದ ಸಮರ್ಪಕ ಅಭಿವ್ಯಕ್ತಿ ಎಂಬ ಪ್ರಬಲವಾದ ನಂಬಿಕೆ ಹಾಗೂ ವಿಶ್ವಾಸಗಳನ್ನು ಇಟ್ಟುಕೊಂಡಿರುವ ಮುಕುಂದರು ಅತ್ಯಂತ ಸಂಯಮದಿಂದ ಏಕಾಗ್ರತೆಯಿಂದ ಕಾದು ಸೆರೆಹಿಡಿದ ‘ಮಾಂತ್ರಿಕ ಕ್ಷಣ’ಗಳಿಂದಾಗಿ ಈ ಎಲ್ಲ ಭಾವಚಿತ್ರಗಳಿಗೆ ಏಕಕಾಲಕ್ಕೆ ಅಧಿಕೃತತೆ ಮತ್ತು ಆಪ್ತತೆ ಲಭ್ಯವಾಗಿವೆ. ಇಂತಹ ‘ಫೋಟೋ ಪುಸ್ತಕ’ವೊಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು.

Reviews

There are no reviews yet.

Be the first to review “Mukha Mudre – Kyamaradalli Kannada Sahithigalu”

Your email address will not be published. Required fields are marked *