ಚಾರಿತ್ರಿಕ ಸಂಶೋಧನಾ ಲೇಖನಗಳ ಸಂಗ್ರಹ ಹೊಂದಿರುವ ಇದರಲ್ಲಿನ ಲೇಖನಗಳು ಅವರು ೧೯೪೦-೬೫ರ ಅವಧಿಯಲ್ಲಿ ಪ್ರಕಟಿಸಿದ ಲೇಖನಗಳಾಗಿವೆ. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಈ ಕೃತಿಯಲ್ಲಿ “ಲೇಖನಗಳ ಸಂಚಯ” ಮತ್ತು “ಜೀವನ ಚರಿತ್ರ” ಎಂಬ ಎರಡು ವಿಭಾಗಗಳಲ್ಲಿ ಮುದ್ರಿಸಲಾಗಿದೆ.
ಮೈಸೂರು ಸಂಸ್ಥಾನದಲ್ಲಿ ಪ್ರತಿಷ್ಟಿತ ಕಾಲೇಜು ಎಂದು ಖ್ಯಾತಿ ಪಡೆದಿದ್ದ ಮಹಾರಾಜ ಕಾಲೇಜಿನ ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಡಿ ಎಸ್ ಅಚ್ಚುತರಾವ್ ೧೯೪೦-೬೫ ರ ಅವಧಿಯಲ್ಲಿ ಬರೆದಿರುವ ಲೇಖನಗಳು ಈ ಕೃತಿಯಲ್ಲಿ ಬೆಳಕು ಕಂಡಿವೆ. ಪ್ರೊ|| ಅಚ್ಚುತರಾವ್ ಚರಿತ್ರೆ ಅಧ್ಯಯನವನ್ನು ಜನಪ್ರಿಯಗೊಳಿಸಲು ಮತ್ತು ಪ್ರಾಚೀನ ಭಾರತದ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
“ಲೇಖನಗಳ ಸಂಚಯ” ವಿಭಾಗದಲ್ಲಿನ ಲೇಖನಗಳು ಡಿ ಎಸ್ ಅಚ್ಚುತರಾವ್ರ ಸಂಶೋಧನಾ ವ್ಯಕ್ತಿತ್ವವನ್ನು ಎತ್ತಿಹಿಡಿಯುತ್ತದೆ ಎನ್ನುವುದರಲ್ಲಿ ಸಂಶಯವೇನಿಲ್ಲ. ಸ್ವಾತಂತ್ರö್ಯ ಚಳವಳಿ ಸಾಗುತ್ತಿದ್ದ ಆ ದಿನಗಳಲ್ಲಿ ‘ಚಾರಿತ್ರಿಕ ದಾಖಲೆಗಳು’ ಬಗ್ಗೆ ಕುರಿತ ಚರ್ಚೆ ಮತ್ತು ಜಿಜ್ಞಾಸೆ ತಲೆದೋರಿದ್ದವು. ಆ ಸಮಯದಲ್ಲಿ “ಚಾರಿತ್ರಿಕ ಸಂಶೋಧನೆ” ಎಂಬುದು ಶೈಶವಾಸ್ಥೆಯಲ್ಲಿದ್ದು ಅದಕ್ಕೆ ಒಂದು ನಿರ್ದಿಷ್ಟವಾದ ಚೌಕಟ್ಟು ದೊರೆತಿರಲಿಲ್ಲ. ಈ ರೀತಿಯ ಸಂದರ್ಭದಲ್ಲಿ ಕ್ರಿ.ಶ. ೧೮೦೦ರ ಹಿಂದಿನ ಶತಮಾನಗಳಲ್ಲಿನ ಮೈಸೂರು ಸಂಸ್ಥಾನದ ಚರಿತ್ರೆಯನ್ನು ವಿಭಿನ್ನ ದೃಷ್ಟಿಕೋನದಲ್ಲಿ ಪ್ರಬಂಧಗಳ ಮತ್ತು ಲೇಖನಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಅವರು ನಡೆಸಿದ್ದು ಶ್ಲಾಘನೀಯ.
“ಜೀವನ ಚರಿತ್ರೆ” ಎಂದು ವಿಭಾಗಿಸಲ್ಪಟ್ಟಿರುವ ಎರಡನೇ ಭಾಗದಲ್ಲಿ ಡಿ ಎಸ್ ಅಚ್ಚುತರಾವ್ರ ಮಕ್ಕಳು ತಮ್ಮ ತಂದೆಯೊAದಿಗೆ ತಾವು ಕಳೆದ ವರ್ಷಗಳು ಮತ್ತು ಅನುಭವಗಳನ್ನು ದಾಖಲಿಸಿದ್ದಾರೆ. ಮಹಾರಾಜ ಕಾಲೇಜು, ತರುವಾಯ ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗದಲ್ಲಿ ಅವರ ವಿದ್ಯಾರ್ಥಿಗಳಾಗಿ ಅವರಿಂದ ವಿದ್ವತ್ತನ್ನು ಧಾರೆ ಎರೆಸಿಕೊಂಡ ಕೆಲವು ವಿದ್ಯಾರ್ಥಿಗಳು ಅವರ ಅನುಭವಗಳನ್ನು ಮುಕ್ತವಾಗಿ ದಾಖಲಿಸಿ ಶ್ಲಾಘಿಸಿದ್ದಾರೆ.
Reviews
There are no reviews yet.